AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ-ಸೊಸೆಯ ಡಿವೋರ್ಸ್​ ತೀರ್ಮಾನಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನಾಗಾರ್ಜುನ? ಟಾಲಿವುಡ್​ ಗಲ್ಲಿಯಲ್ಲಿ ಗುಸುಗುಸು

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಎಂಬ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಹಲವು ಗುಸುಗುಸು ಹರಿದಾಡುತ್ತಿದೆ. ಆದರೂ ಈ ಫ್ಯಾಮಿಲಿಯಿಂದ ಈವರೆಗೂ ಒಂದೇ ಒಂದೇ ಅಧಿಕೃತ ಹೇಳಿಕೆಯೂ ಹೊರಬೀಳದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಮಗ-ಸೊಸೆಯ ಡಿವೋರ್ಸ್​ ತೀರ್ಮಾನಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನಾಗಾರ್ಜುನ? ಟಾಲಿವುಡ್​ ಗಲ್ಲಿಯಲ್ಲಿ ಗುಸುಗುಸು
ಸಮಂತಾ, ನಾಗಾರ್ಜುನ, ನಾಗ ಚೈತನ್ಯ
TV9 Web
| Edited By: |

Updated on: Sep 13, 2021 | 8:04 AM

Share

ಸ್ಟಾರ್​ ದಂಪತಿಗಳಾದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಗುತ್ತಿವೆ. ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಅವರು ವಿಚ್ಛೇದನ ಪಡೆಯುವ ನಿರ್ಧಾರಕ್ಕೂ ಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಬಗ್ಗೆ ಈ ಜೋಡಿ ಏನನ್ನೂ ಹೇಳಿಲ್ಲ. ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳದೇ ತಿಂಗಳುಗಳೇ ಕಳೆದಿವೆ. ಮಾವ ನಾಗಾರ್ಜುನ ಹುಟ್ಟುಹಬ್ಬಕ್ಕೂ ಸಮಂತಾ ಗೈರಾಗಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ‘ಅಕ್ಕಿನೇನಿ’ ಎಂಬ ಸರ್​ನೇಮ್​ ಅನ್ನು ಅವರು ತೆಗೆದು ಹಾಕಿದ್ದರು. ಹೀಗೆ, ಡಿವೋರ್ಸ್​ ವದಂತಿಗೆ ಪೂರಕ ಆಗುವಂತಹ ಅನೇಕ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ಸಂದರ್ಭದಲ್ಲಿ ನಾಗಾರ್ಜುನ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

ಮಗ ಮತ್ತು ಸೊಸೆ ವಿಚ್ಛೇದನ ಪಡೆಯುವುದು ನಾಗಾರ್ಜುನಗೆ ಕಿಂಚಿತ್ತೂ ಇಷ್ಟ ಇಲ್ಲ. ಆದಷ್ಟು ಬೇಗ ಅವರು ತಮ್ಮಿಬ್ಬರ ನಡುವಿನ ಮನಸ್ತಾಪ ಬಗೆಹರಿಸಿಕೊಳ್ಳಲಿ ಎಂದು ನಾಗಾರ್ಜುನ ಬಯಸುತ್ತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನೂ ಅವರು ನೀಡುತ್ತಿದ್ದಾರೆ ಎಂಬ ಗುಸುಗುಸು ಟಾಲಿವುಡ್​ ಅಂಗಳದಿಂದ ಕೇಳಿಬಂದಿದೆ. ಇಷ್ಟೆಲ್ಲ ಸುದ್ದಿ ಹರಿದಾಡಿದ್ದರೂ ಕೂಡ ಈ ಫ್ಯಾಮಿಲಿಯಿಂದ ಈವರೆಗೂ ಒಂದೇ ಒಂದೇ ಅಧಿಕೃತ ಹೇಳಿಕೆಯೂ ಹೊರಬೀಳದೇ ಇರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಈ ಸಂದರ್ಭದಲ್ಲಿ ನಾಗಾರ್ಜುನ ಅವರ ನಡೆ ಕೂಡ ಕೊಂಚ ಅನುಮಾನಕ್ಕೆ ಕಾರಣ ಆಗಿದೆ. ಅವರು ನಿರೂಪಣೆ ಮಾಡುತ್ತಿರುವ ‘ಬಿಗ್​ ಬಾಸ್​ ತೆಲುಗು ಸೀಸನ್​ 5’ ಇತ್ತೀಚೆಗೆ ಆರಂಭ ಆಯಿತು. ಸ್ಟಾರ್​ ಮಾ ವಾಹಿನಿಯಲ್ಲಿ ಸೆ.5ರಂದು ಈ ಶೋಗೆ ಚಾಲನೆ ನೀಡಲಾಯಿತು. ಪ್ರತಿ ವರ್ಷದ ಪದ್ದತಿಯಂತೆ ಶೋ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಈ ಬಾರಿ ನಾಗಾರ್ಜುನ ಅವರು ಸುದ್ದಿಗೋಷ್ಠಿ ನಡೆಯದೇ ಇರುವುವಂತೆ ನೋಡಿಕೊಂಡರು!

ಒಂದು ವೇಳೆ ಸುದ್ದಿಗೋಷ್ಠಿ ಮಾಡಿದರೆ ಆಗ ಮಗ-ಸೊಸೆಯ ಡಿವೋರ್ಸ್​ ಬಗ್ಗೆ ಮಾಧ್ಯಮದವರಿಂದ ಪ್ರಶ್ನೆಗಳು ಎದುರಾಗುವುದು ಖಚಿತ. ಅದನ್ನು ತಪ್ಪಿಸುವ ಸಲುವಾಗಿಯೇ ಅವರು ಈ ಬಾರಿ ಬಿಗ್ ಬಾಸ್​ ಸುದ್ದಿಗೋಷ್ಠಿಯನ್ನು ಕ್ಯಾನ್ಸಲ್​ ಮಾಡಿದರು ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಒಟ್ಟಿನಲ್ಲಿ ಸಮಂತಾ-ನಾಗ ಚೈತನ್ಯ ದಾಂಪತ್ಯ ಮುಂದೇನಾಗಲಿದೆ ಎಂಬ ಕೌತುಕ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ:

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ರಾತ್ರೋರಾತ್ರಿ ಹೆಸರು ಬದಲಾಯಿಸಿಕೊಂಡ ನಟಿ ಸಮಂತಾ ಅಕ್ಕಿನೇನಿ; ಹೊಸ ಹೆಸರು ಏನು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್