ಕೊರೊನಾಗೆ ಸೆಡ್ಡು ಹೊಡೆದು ಹಳೇ ಚಾರ್ಮ್​ ಪಡೆದ ಸುದೀಪ್​; ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​

ಕೊರೊನಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಜಿಮ್​ಗೆ ತೆರಳಲು ಸುದೀಪ್​ಗೆ ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಸೆಡ್ಡು ಹೊಡೆದು ಅವರು ಜಿಮ್​ ಮೆಟ್ಟಿಲು ಹತ್ತಿದ್ದಾರೆ.

ಕೊರೊನಾಗೆ ಸೆಡ್ಡು ಹೊಡೆದು ಹಳೇ ಚಾರ್ಮ್​ ಪಡೆದ ಸುದೀಪ್​; ಫೋಟೋ ನೋಡಿ ವಾವ್​ ಎಂದ ಫ್ಯಾನ್ಸ್​
ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಅವರ ಮುಂದಿನ ಸಿನಿಮಾದ ಬಗ್ಗೆಯೂ ಕೌತುಕ ಮನೆ ಮಾಡಿದೆ. ಅದರ ನಡುವೆ ಒಂದು ಹೊಸ ಫೋಟೋ ಹಂಚಿಕೊಳ್ಳುವ ಮೂಲಕ ಸುದೀಪ್​ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ದಿನಗಳ ಕಾಲ ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಅವರು ಈಗ ಮತ್ತೆ ಜಿಮ್​ ಬಗ್ಗೆ ಗಮನ ಹರಿಸಿದ್ದಾರೆ. ಹಲವು ದಿನಗಳ ಬಳಿಕ ಅವರು ಜಿಮ್​ಗೆ ತೆರಳಿ ವರ್ಕೌಟ್​ ಆರಂಭಿಸಿದ್ದಾರೆ. ಜಿಮ್​ನಲ್ಲಿ ಕ್ಲಿಕ್ಕಿಸಿದ ಒಂದು ಫೋಟೋವನ್ನು ಕಿಚ್ಚ ಹಂಚಿಕೊಂಡಿದ್ದು, ಅದನ್ನು ಕಂಡ ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ.

ಸ್ಟಾರ್​ ನಟರು ಜಿಮ್​ಗೆ ಹೋಗಿ ವರ್ಕೌಟ್​ ಮಾಡುವುದು ವಿಶೇಷವೇನಲ್ಲ. ಆದರೆ ಈ ಫೋಟೋದ ಹಿಂದೆ ಒಂದು ಕಹಾನಿ ಇದೆ. ಇಷ್ಟು ದಿನ ಸುದೀಪ್​ ಅವರನ್ನು ಜಿಮ್​ಗೆ ತೆರಳದಂತೆ ಕಟ್ಟಿ ಹಾಕಿದ್ದು ಕೊರೊನಾ! ಹೌದು, ಅವರಿಗೆ ಕೊವಿಡ್​ ಪಾಸಿಟಿವ್​ ಆಗಿತ್ತು ಎಂಬುದು ತಿಳಿದಿರುವ ವಿಚಾರವೇ. ತಿಂಗಳುಗಟ್ಟಲೆ ವಿಶ್ರಾಂತಿ ಪಡೆದ ಅವರು ಕೊನೆಗೂ ಕೊರೊನಾ ವೈರಸ್​ಅನ್ನು ಮಣಿಸಿದ್ದರು. ಆದರೆ ಗುಣಮುಖರಾದ ಮೇಲೂ ಕೂಡ ವರ್ಕೌಟ್​ ಮಾಡುವುದು ಸುಲಭ ಆಗಿರಲಿಲ್ಲ. ಕೊರೊನಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಜಿಮ್​ಗೆ ತೆರಳಲು ಸುದೀಪ್​ಗೆ​ ಸಾಧ್ಯವಾಗಿರಲಿಲ್ಲ. ಈಗ ಅದಕ್ಕೆ ಸೆಡ್ಡು ಹೊಡೆದು ಅವರು ಜಿಮ್​ ಮೆಟ್ಟಿಲು ಹತ್ತಿದ್ದಾರೆ.

‘ಕೊರೊನಾದಿಂದ ಗುಣಮುಖರಾದ ನಂತರವೂ ತಿಂಗಳುಗಟ್ಟಲೆ ಅದರ ಪ್ರಭಾವ ಇದ್ದೇ ಇರುತ್ತದೆ. ವರ್ಕೌಟ್​ ಮಾಡುವುದನ್ನು ನಾನು ತುಂಬ ಎಂಜಾಯ್​ ಮಾಡುತ್ತೇನೆ. ಹಾಗಾಗಿ ಮರಳಿ ಜಿಮ್​ಗೆ ಬರಬೇಕು ಎಂದು ಪ್ರಯತ್ನಿಸುತ್ತಲೇ ಇದ್ದೆ. ಜಿಮ್​ಗೆ ಬಂದು ನನ್ನ ಹಳೇ ದಿನಚರಿಗೆ ಒಗ್ಗಿಕೊಳ್ಳಲು ಖುಷಿ ಎನಿಸುತ್ತಿದೆ. ಅತಿ ಅವಶ್ಯಕತೆ ಇದ್ದಾಗ ನನಗೆ ಬೆಂಬಲ ನೀಡಿದ ವೈದ್ಯರು, ಕುಟುಂಬದವರು, ಸ್ನೇಹಿತರು ಮತ್ತು ಟ್ರೇನರ್​ಗಳಿಗೆ ಧನ್ಯವಾದಗಳು’ ಎಂದು ಸುದೀಪ್​ ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ.

 

View this post on Instagram

 

A post shared by KicchaSudeepa (@kichchasudeepa)

ವೃತ್ತಿಜೀವದನಲ್ಲಿ ‘ಪೈಲ್ವಾನ್​’ ಚಿತ್ರಕ್ಕಾಗಿ ಮೊದಲ ಬಾರಿಗೆ ಸುದೀಪ್​ ಅವರು ಜಿಮ್​ಗೆ ತೆರಳಿದ್ದರು. ಆ ಬಳಿಕ ಅವರಿಗೆ ಅದರಲ್ಲಿ ಆಸಕ್ತಿ ಹೆಚ್ಚಿತು. ಈಗ ಅವರನ್ನು ಮತ್ತೆ ಜಿಮ್​ನಲ್ಲಿ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ರಮ್ಯಾ, ಅರವಿಂದ್​ ಕೆಪಿ ಸೇರಿದಂತೆ ಅನೇಕರು ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​

ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್​; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್​

Read Full Article

Click on your DTH Provider to Add TV9 Kannada