AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rachita Ram: ನಾಮಧಾರಿಯಾಗಿರುವ ಚಿತ್ರ ಹಂಚಿಕೊಂಡ ರಚಿತಾ ರಾಮ್; ಏನು ವಿಶೇಷ?

ಚಂದನವನದ ಖ್ಯಾತ ನಟಿ ರಚಿತಾ ರಾಮ್ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಲ್ಲಿಗೆ ತೆರಳಿರುವ ಸಂದರ್ಭದ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Rachita Ram: ನಾಮಧಾರಿಯಾಗಿರುವ ಚಿತ್ರ ಹಂಚಿಕೊಂಡ ರಚಿತಾ ರಾಮ್; ಏನು ವಿಶೇಷ?
ರಚಿತಾ ರಾಮ್ (ಕೃಪೆ: ರಚಿತಾ ರಾಮ್/ಇನ್ಸ್ಟಾಗ್ರಾಂ)
TV9 Web
| Edited By: |

Updated on:Sep 12, 2021 | 7:42 PM

Share

ಚಂದನವನದ ನಟ- ನಟಿಯರು ತಮ್ಮ ಮನೆತನದ ದೇವಸ್ಥಾನಗಳಿಗೆ ತೆರಳಿ ಪ್ರತಿ ವರ್ಷವೂ ಪೂಜೆ ಸಲ್ಲಿಸುತ್ತಾರೆ. ಎಷ್ಟೇ ಕಷ್ಟದ ಸಂದರ್ಭ ಬಂದರೂ ಆ ಸಂಪ್ರದಾಯವನ್ನು ತಪ್ಪಿಸುವುದಿಲ್ಲ. ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಇದಕ್ಕೆ ಹೊರತಲ್ಲ. ಅವರು ಶನಿವಾರ, ತಮ್ಮ ಆರಾಧ್ಯ ದೈವ ಮೇಲುಕೋಟೆಗೆ ತೆರಳಿ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದಿದ್ದಾರೆ. ನಾಮಧರಿಸಿ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ದೇವರ ದರ್ಶನ ಮಾಡಿರುವ ರಚಿತಾ, ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರತೀ ವರ್ಷವೂ ಆಗಮಿಸಿ ದೇವರ ದರ್ಶನ ಪಡೆಯುವ ರಚಿತಾ, ಈ ವರ್ಷವೂ ತೆರಳಿ ಪೂಜೆ ಸಲ್ಲಿಸಿದ್ದಾರೆ. 

ಶ್ರೇಷ್ಠ ಗುರುಪರಂಪರೆಯ ಯತಿರಾಜದಾಸರ್ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ, ಅವರ ಸಲಹೆಯಂತೆ ರಚಿತಾ  ಶ್ರೀ ದೇವರ ದರ್ಶನ ಮಾಡಿದ್ದಾರೆ. ಇದೇ ವೇಳೆ ರಚಿತಾ ದೇವರಿಗೆ ತಾವು ಸಮರ್ಪಿಸಲು ಬಯಸಿದ್ದ ಕಾಣಿಕೆಯನ್ನೂ ಅರ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಮೇಲುಕೋಟೆ ಪ್ರಯಾಣದ ಸಂದರ್ಭದ ಚಿತ್ರವೊಂದನ್ನು ರಚಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Rachita Ram with Guru

ಗುರುಗಳೊಂದಿಗೆ ರಚಿತಾ ರಾಮ್

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರಕ್ಕೆ ರಚಿತಾ, ‘ಮುಂಜಾನೆಯ ಒಂದು ಸಣ್ಣ ಧನಾತ್ಮಕ ಯೋಚನೆ ನಿಮ್ಮ ಇಡೀ ದಿನವನ್ನು ಬದಲಾಯಿಸುತ್ತದೆ. ಆದ್ದರಿಂದ ಧನಾತ್ಮಕ ಯೋಚನೆಗಳೊಂದಿಗೆ ದಿನವನ್ನು ಆರಂಭಿಸಿ’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ರಚಿತಾ ಅವರು ನಟಿಸುತ್ತಿದ್ದ ಚಿತ್ರವೊಂದರಲ್ಲಿ ಘಟಿಸಿದ ಘಟನೆ ಕರ್ನಾಟಕದಲ್ಲಿ ಬಹಳಷ್ಟು ಚರ್ಚೆಯಾಗಿತ್ತು. ಈ ಎಲ್ಲದರ ನಡುವೆ ರಚಿತಾ ಧನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ಹಂಸಲೇಖ, ನಾನು ಗುಡ್ ಫ್ರೆಂಡ್ಸ್ ಅಲ್ಲವೇ ಅಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದ ರವಿಚಂದ್ರನ್

Sai Dharam Tej: ನಟ ಸಾಯಿ ಧರಮ್ ತೇಜ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಆರೋಗ್ಯದ ಕುರಿತು ಆಸ್ಪತ್ರೆಯಿಂದ ಮಾಹಿತಿ ಬಿಡುಗಡೆ

(Rachita Ram shares new pic after she visited to Melukote Cheluva Narayana Swamy temple)

Published On - 7:33 pm, Sun, 12 September 21

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ