Sai Dharam Tej: ನಟ ಸಾಯಿ ಧರಮ್ ತೇಜ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಆರೋಗ್ಯದ ಕುರಿತು ಆಸ್ಪತ್ರೆಯಿಂದ ಮಾಹಿತಿ ಬಿಡುಗಡೆ

ಟಾಲಿವುಡ್​ನ ಭರವಸೆಯ ನಟ ಸಾಯಿ ಧರಮ್ ತೇಜ್ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Sai Dharam Tej: ನಟ ಸಾಯಿ ಧರಮ್ ತೇಜ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಆರೋಗ್ಯದ ಕುರಿತು ಆಸ್ಪತ್ರೆಯಿಂದ ಮಾಹಿತಿ ಬಿಡುಗಡೆ
ನಟ ಸಾಯಿ ಧರಮ್​ತೇಜ (ಸಂಗ್ರಹ ಚಿತ್ರ)

ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ, ಟಾಲಿವುಡ್​ನ ಭರವಸೆಯ ನಟ ಸಾಯಿ ಧರಮ್ ತೇಜ್ ಅವರಿಗೆ ಶುಕ್ರವಾರ ಸಂಜೆ ಅಪಘಾತವಾಗಿತ್ತು. ಪರಿಣಾಮವಾಗಿ ಅವರರು ಕೋಮಾಕ್ಕೆ ಹೋಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅವರು ಚೇತರಿಕೆ ಕಾಣುತ್ತಿದ್ದರು. ಇತ್ತೀಚೆಗೆ ಆಸ್ಪತ್ರೆಯಿಂದ ಬಂದಿರುವ ಮಾಹಿತಿಯ ಪ್ರಕಾರ, ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅವರಿಗೆ ವಿವಿಧ ಮಾದರಿಯ ಸ್ಕ್ಯಾನಿಂಗ್ ಪರೀಕ್ಷೆಗಳು ನಡೆದಿದ್ದವು. ಅದರಲ್ಲಿ ತಲೆ, ಬೆನ್ನುಮೂಳೆ ಅಥವಾ ಆಂತರಿಕವಾಗಿ ತೀವ್ರ ಪ್ರಮಾಣದ ಗಾಯವಾಗಿಲ್ಲ ಎಂಬ ವರದಿ ಲಭ್ಯವಾಗಿತ್ತು. ಇದರಿಂದಾಗಿ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಮಾಧಾನವಾಗಿತ್ತು.

ಆದರೆ ಸಾಯಿಯವರ  ಕಾಲರ್ ಮೂಳೆ ಮುರಿದಿದೆ. ಇದಕ್ಕೆ ಅಪೋಲೋ ಆಸ್ಪತ್ರೆ ವೈದ್ಯಕೀಯ ತಂಡದ ಡಾ.ಅಲೋಕ್ ರಂಜನ್ ಐಸಿಯುವಿನಲ್ಲಿ ತೇಜ್​ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತೇಜ್ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಇತ್ತೀಚೆಗೆ ಆರೋಗ್ಯ ಬುಲೆಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ತೇಜ್ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ತೇಜ್​ಗೆ ಮಾಡಿದ ಕಾಲರ್ ಬೋನ್ ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಲಾಗಿದೆ. ಶೀಘ್ರದಲ್ಲೇ ನಟನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Sai Dharam Tej

ಸಾಯಿ ಧರಮ್ ತೇಜ್ ಆರೋಗ್ಯದ ಕುರಿತು ಬಿಡುಗಡೆ ಮಾಡಲಾಗಿರುವ ಮಾಹಿತಿ

ಮೆಗಾಸ್ಟಾರ್​ ಚಿರಂಜೀವಿ ಅವರ ಅಳಿಯ, ನಟ ಸಾಯಿ ಧರಮ್​ ತೇಜ್​ಗೆ ಶುಕ್ರವಾರ ಅಪಘಾತ ಸಂಭವಿಸಿತ್ತು. ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ, ರಸ್ತೆಯಲ್ಲಿ ಬಿದ್ದಿದ್ದ ಮರಳಿನಿಂದ ಬೈಕ್ ಸ್ಕಿಡ್ ಆಗಿ ಅಪಘಾತವಾಗಿದೆ ಎನ್ನಲಾಗಿದೆ. ಪ್ರಕರಣದ ಸಿಸಿಟಿವಿ ಫೂಟೇಜ್ ಕೂಡ ಲಭ್ಯವಾಗಿದೆ. ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಅಪಘಾತ ಸಂಭವಿಸಿತ್ತು. ಈ ವೇಳೆ ನಟ ಹೆಲ್ಮೆಟ್​ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಭೀಕರ ಬೈಕ್​ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್​ ತೇಜ್​ ಹೀಗೆ ಮಾಡಬಾರದಿತ್ತು

ಸಾಯಿ ಧರಮ್​ ತೇಜ್​ ಬೈಕ್​ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ

(Sai Dharam Tej’s collar bone surgery is successful says hospital officials)

Click on your DTH Provider to Add TV9 Kannada