ಭೀಕರ ಬೈಕ್ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್ ತೇಜ್ ಹೀಗೆ ಮಾಡಬಾರದಿತ್ತು
ಅಜಾಗರೂಕತೆಯಿಂದ ಸ್ಪೋರ್ಟ್ಸ್ ಬೈಕ್ ಓಡಿಸಿದ್ದಕ್ಕಾಗಿ ಪೊಲೀಸರು ಸಾಯಿ ಧರಮ್ ತೇಜ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಕಲೆ ಹಾಕಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ, ನಟ ಸಾಯಿ ಧರಮ್ ತೇಜ್ಗೆ ಶುಕ್ರವಾರ (ಸೆ.10) ರಾತ್ರಿ ಅಪಘಾತ ಸಂಭವಿಸಿತು. ಸದ್ಯ ಅವರಿಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ ಸ್ಕಿಡ್ ಆದ ಪರಿಣಾಮ ಈ ಅವಘಡ ಸಂಭವಿಸಿತು ಎಂದು ಹೇಳಲಾಗುತ್ತಿದೆ. ಸಾಯಿ ಧರಮ್ ತೇಜ್ ಅವರ ಆಕ್ಸಿಡೆಂಟ್ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟನಿಗೆ ಗಂಭೀರ ಗಾಯಗಳು ಆಗಿವೆಯಾದರೂ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಕ್ಕೆ ಅಪಾಯ ಆಗಿಲ್ಲ. ಒಟ್ಟಾರೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ನಟನ 4 ತಪ್ಪುಗಳು ಬಟಾಬಯಲಾಗಿವೆ.
ಅಜಾಗರೂಕತೆಯಿಂದ ಸ್ಪೋರ್ಟ್ಸ್ ಬೈಕ್ ಓಡಿಸಿದ್ದಕ್ಕಾಗಿ ಪೊಲೀಸರು ಸಾಯಿ ಧರಮ್ ತೇಜ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಕಲೆ ಹಾಕಿದ್ದಾರೆ. ಮೂಲಗಳ ಪ್ರಕಾರ ನಟನ ಕೆಲವು ತಪ್ಪುಗಳು ಬಹಿರಂಗ ಆಗಿವೆ. ಆ ತಪ್ಪುಗಳನ್ನು ಪಟ್ಟಿ ಮಾಡಲಾಗಿದೆ.
1. ಸಾಯಿ ಧರಮ್ ತೇಜ್ ಬಳಿ ದ್ವಿಚಕ್ರ ವಾಹನದ ಲೈಸೆನ್ಸ್ ಇರಲಿಲ್ಲ! ಅವರು ಕೇವಲ ಲೈಟ್ ಮೋಟರ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರು.
2. 102 ಕಿಲೋ ಮೀಟರ್ ವೇಗದಲ್ಲಿ ಸಾಯಿ ಧರಮ್ ತೇಜ್ ಬೈಕ್ ಓಡಿಸುತ್ತಿದ್ದರು. ಆಪಘಾತ ಸಂಭವಿಸಿದ ಕ್ಷಣದಲ್ಲಿ 72 ಕಿಮೀ ವೇಗದಲ್ಲಿ ಅವರ ಬೈಕ್ ಚಲಿಸುತ್ತಿತ್ತು.
3. ತಮ್ಮ ಮುಂದೆ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ಓವರ್ಟೇಕ್ ಮಾಡಲು ಸಾಯಿ ಧರಮ್ ತೇಜ್ ಪ್ರಯತ್ನಿಸಿದ್ದರು. ರಾಂಗ್ ಸೈಡ್ನಿಂದ ಓವರ್ ಟೇಕ್ ಮಾಡುವಾಗ ಈ ಅಪಘಾತ ನಡೆದಿದೆ.
4. ಸಾಯಿ ಧರಮ್ ತೇಜ್ ಓಡಿಸುತ್ತಿದ್ದದ್ದು ಸೆಕೆಂಡ್ ಹ್ಯಾಂಡ್ ಬೈಕ್ ಆಗಿತ್ತು. ಈ ಬೈಕ್ನ ರಿಜಿಸ್ಟ್ರೇಶನ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿರಲಿಲ್ಲ! ಎಲ್ಬಿ ನಗರ್ ಮೂಲದ ಅನಿಲ್ ಕುಮಾರ್ ಎಂಬುವವರಿಂದ ಈ ಬೈಕ್ ಖರೀದಿಸಲಾಗಿತ್ತು.
ಈ ಹಿಂದೆ ಕೂಡ ಅತಿವೇಗವಾಗಿ ಬೈಕ್ ಓಡಿಸಿದ್ದಕ್ಕೆ ಸಾಯಿ ಧರಮ್ ತೇಜ್ಗೆ ಪೊಲೀಸರ ದಂಡ ವಿಧಿಸಿದ್ದರು. ಅದನ್ನು ಅವರು ಪಾವತಿ ಮಾಡಿರಲಿಲ್ಲ. ಈಗ ಅಪಘಾತ ನಡೆದ ಬಳಿಕ ಅವರ ಅಭಿಮಾನಿಯೊಬ್ಬರು ದಂಡ ಪಾವತಿ ಮಾಡಿದ್ದಾರೆ ಎಂದು ವರದಿ ಆಗಿದೆ. ಸಾಯಿ ಧರಮ್ ತೇಜ್ ಅವರಿಗೆ ಬಲಗಣ್ಣು, ಎದೆ, ಕುತ್ತಿಗೆ, ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ:
ಸಾಯಿ ಧರಮ್ ತೇಜ್ ಬೈಕ್ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ
ಡಿಕೆ ರವಿ ಬಗ್ಗೆ 2 ದಿನದ ಹಿಂದೆ ಮಾತಾಡಿದ್ದ ಸಾಯಿ ಧರಮ್ ತೇಜ್ಗೆ ಭೀಕರ ಅಪಘಾತ; ಏನಿದು ಕಾಕತಾಳೀಯ?