ಡಿಕೆ ರವಿ ಬಗ್ಗೆ 2 ದಿನದ ಹಿಂದೆ ಮಾತಾಡಿದ್ದ ಸಾಯಿ ಧರಮ್​ ತೇಜ್​ಗೆ ಭೀಕರ ಅಪಘಾತ; ಏನಿದು ಕಾಕತಾಳೀಯ?

TV9 Digital Desk

| Edited By: ಮದನ್​ ಕುಮಾರ್​

Updated on: Sep 11, 2021 | 12:44 PM

Sai Dharam Tej Bike Accident: ‘ಥ್ಯಾಂಕ್​ ಯೂ ಕಲೆಕ್ಟರ್​ ಡಿಕೆ ರವಿ’ ಎಂದು ಸಾಯಿ ಧರಮ್​ ತೇಜ್​ ಅವರು ಒಂದು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದರು. ಟಾಲಿವುಡ್​ನ ಈ ಹೀರೋಗೂ ಕರುನಾಡಿನ ದಕ್ಷ ಅಧಿಕಾರಿಗೂ ಏನು ಸಂಬಂಧ?

ಡಿಕೆ ರವಿ ಬಗ್ಗೆ 2 ದಿನದ ಹಿಂದೆ ಮಾತಾಡಿದ್ದ ಸಾಯಿ ಧರಮ್​ ತೇಜ್​ಗೆ ಭೀಕರ ಅಪಘಾತ; ಏನಿದು ಕಾಕತಾಳೀಯ?
ಡಿಕೆ ರವಿ, ಸಾಯಿ ಧರಮ್​ ತೇಜ್​
Follow us

ಟಾಲಿವುಡ್​ನ ಜನಪ್ರಿಯ ನಟ ಸಾಯಿ ಧರಮ್​ ತೇಜ್​ ಅವರು ಬೈಕ್​ ಅಪಘಾತದಿಂದ ಗಾಯಗೊಂಡಿರುವುದು ಬೇಸರದ ಸಂಗತಿ. ಸದ್ಯ ಅವರಿಗೆ ಹೈದರಾಬಾದ್​ನ ಅಪೋಲೋ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಅತಿ ವೇಗದಿಂದ ಸ್ಪೋರ್ಟ್ಸ್​ ಬೈಕ್​ ಓಡಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಕೇವಲ ಎರಡು ದಿನಗಳ ಹಿಂದೆ ದಿವಂಗತ ಐಎಎಸ್​ ಅಧಿಕಾರಿ ಡಿಕೆ ರವಿ ಬಗ್ಗೆ ಸಾಯಿ ಧರಮ್​ ತೇಜ್​ ಮಾತನಾಡಿದ್ದರು. ಆದರೆ ಇಂದು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ!

ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಜನಮನ ಗೆದ್ದಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ಅವರಿಗೂ ಟಾಲಿವುಡ್​ನ ಹೀರೋ ಸಾಯಿ ಧರಮ್​ ತೇಜ್​ಗೂ ಏನು ಸಂಬಂಧ? ‘ರಿಪಬ್ಲಿಕ್’ ಸಿನಿಮಾದಲ್ಲಿ ಸಾಯಿ ಧರಮ್​ ತೇಜ್​ ಐಎಎಸ್​ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಸದ್ಯ ಆ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಆ ಪ್ರಯುಕ್ತ ನಿಜಜೀವನದಲ್ಲಿ ಸಾಧನೆ ಮಾಡಿದ ಐಎಎಸ್​ ಅಧಿಕಾರಿಗಳಿಗೆ ಚಿತ್ರತಂಡ ನಮನ ಸಲ್ಲಿಸುತ್ತಿದೆ. ಇದರ ಮೊದಲ ಭಾಗವಾಗಿ ಡಿಕೆ ರವಿ ಅವರ ಜೀವನ ಮತ್ತು ಸಾಧನೆಗಳನ್ನು ವಿವರಿಸುವ ವಿಡಿಯೋವನ್ನು ಕೇವಲ 2 ದಿನಗಳ ಹಿಂದೆ ಸಾಯಿ ಧರಮ್​ ತೇಜ್​ ಹಂಚಿಕೊಂಡಿದ್ದರು.

‘ಥ್ಯಾಂಕ್​ ಯೂ ಕಲೆಕ್ಟರ್​ ಡಿಕೆ ರವಿ’ ಎಂಬ ಕ್ಯಾಪ್ಷನ್​ ಜೊತೆ ಈ ವಿಡಿಯೋವನ್ನು ಸಾಯಿ ಧರಮ್​ ತೇಜ್​ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ಡಿಕೆ ರವಿ ಅವರ ಅಪರೂಪದ ಮಾತುಗಳು ಇವೆ. ಅವರ ದಿಟ್ಟತನ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಇದೆ. ಡಿವಿ ರವಿ ಅವರನ್ನು ಧೀರ ಯೋಧ ಎಂದು ಸಾಯಿ ಧರಮ್​ ತೇಜ್ ಬಣ್ಣಿಸಿದ್ದರು. ಆ ಮೂಲಕ ಅವರು ಕರುನಾಡಿನ ದಕ್ಷ ಅಧಿಕಾರಿಗೆ ನಮನ ಸಲ್ಲಿಸಿದ್ದರು. ಅದಾಗಿ ಎರಡು ದಿನ ಕಳೆಯುವುದರೊಳಗೆ ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಹೆಲ್ಮೆಟ್​ ಧರಿಸಿದ್ದರಿಂದ ಸಾಯಿ ಧರಮ್​ ತೇಜ್​ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಐಸಿಯುನಲ್ಲಿ ಅವರು ಚಿಕಿತ್ಸೆ ನೀಡಲಾಗುತ್ತಿದೆ. ಪವನ್​ ಕಲ್ಯಾಣ್​, ಮೆಗಾ ಸ್ಟಾರ್​ ಚಿರಂಜೀವಿ, ಅಲ್ಲು ಅರವಿಂದ್​ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:

ಚಿರಂಜೀವಿ ಅಳಿಯ ಸಾಯಿ ಧರಮ್​ ತೇಜ್​ ಆಕ್ಸಿಡೆಂಟ್​ನ ಸಿಸಿಟಿವಿ ದೃಶ್ಯ; ಹೆಲ್ಮೆಟ್​ನಿಂದ ಬಚಾವ್​

Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

ತಾಜಾ ಸುದ್ದಿ

Click on your DTH Provider to Add TV9 Kannada