ಚಿರಂಜೀವಿ ಅಳಿಯ ಸಾಯಿ ಧರಮ್​ ತೇಜ್​ ಆಕ್ಸಿಡೆಂಟ್​ನ ಸಿಸಿಟಿವಿ ದೃಶ್ಯ; ಹೆಲ್ಮೆಟ್​ನಿಂದ ಬಚಾವ್​

ಸಾಯಿ ಧರಮ್​ ತೇಜ್​ ಅವರ ಆಕ್ಸಿಡೆಂಟ್​ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟನಿಗೆ ಗಂಭೀರ ಗಾಯಗಳಾಗಿವೆಯಾದರೂ ಹೆಲ್ಮೆಟ್​ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವರದಿ ಆಗಿದೆ.

TV9kannada Web Team

| Edited By: Madan Kumar

Sep 11, 2021 | 11:31 AM

ಮೆಗಾಸ್ಟಾರ್​ ಚಿರಂಜೀವಿ ಅವರ ಅಳಿಯ, ನಟ ಸಾಯಿ ಧರಮ್​ ತೇಜ್​ಗೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಸ್ಪೋರ್ಟ್​ ಬೈಕ್​ ಓಡಿಸಿದ್ದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಬೈಕ್​ ಸ್ಕಿಡ್​ ಆಗಿದೆ. ಈ ಆಕ್ಸಿಡೆಂಟ್​ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟನಿಗೆ ಗಂಭೀರ ಗಾಯಗಳಾಗಿವೆಯಾದರೂ ಹೆಲ್ಮೆಟ್​ ಧರಿಸಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವರದಿ ಆಗಿದೆ.

ಸಾಯಿ ಧರಮ್​ ತೇಜ್​ ಅವರನ್ನು ನೋಡಲು ಪವನ್​ ಕಲ್ಯಾಣ್​, ಅಲ್ಲು ಅರವಿಂದ್​ ಮುಂತಾದವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬಲಗಣ್ಣು, ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯ ಸಾಯಿ ಧರಮ್​ ತೇಜ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ‘ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೂ ಕೂಡ ಹೆದರುವಂಥದ್ದು ಏನೂ ಇಲ್ಲ. ಆಮೇಲೆ ಎಲ್ಲವೂ ಗೊತ್ತಾಗಲಿದೆ’ ಎಂದು ಪವನ್​ ಕಲ್ಯಾಣ್​ ಹೇಳಿದ್ದಾರೆ.

ಇದನ್ನೂ ಓದಿ:

Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

Sai Dharam Tej: ನಟ ಸಾಯಿ ಧರಮ್​ತೇಜ್ ಬೈಕ್ ಸ್ಕಿಡ್ ಆಗಲು ಕಾರಣವೇನು?; ಇಲ್ಲಿದೆ ಮಾಹಿತಿ

Follow us on

Click on your DTH Provider to Add TV9 Kannada