Sai Dharam Tej: ನಟ ಸಾಯಿ ಧರಮ್​ತೇಜ್ ಬೈಕ್ ಸ್ಕಿಡ್ ಆಗಲು ಕಾರಣವೇನು?; ಇಲ್ಲಿದೆ ಮಾಹಿತಿ

ತೆಲುಗಿನ ಪ್ರತಿಭಾವಂತ ನಟ ಸಾಯಿ ಧರಮ್ ತೇಜ್ ಅವರ ಬೈಕ್ ಅಪಘಾತಕ್ಕೆ ಸ್ಥಳದಲ್ಲಿ ಬಿದ್ದಿದ್ದ ಮರಳು ಕಾರಣ ಎಂದು ಮೂಲಗಳು ತಿಳಿಸಿವೆ.

Sai Dharam Tej: ನಟ ಸಾಯಿ ಧರಮ್​ತೇಜ್ ಬೈಕ್ ಸ್ಕಿಡ್ ಆಗಲು ಕಾರಣವೇನು?; ಇಲ್ಲಿದೆ ಮಾಹಿತಿ
ನಟ ಸಾಯಿ ಧರಮ್ ತೇಜ್
Follow us
TV9 Web
| Updated By: shivaprasad.hs

Updated on: Sep 11, 2021 | 11:05 AM

ಬೈಕ್​ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಟ ಸಾಯಿ ಧರಮ್​ತೇಜ್​​ ಅವರನ್ನು ಗಣ್ಯರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಟ ರಾಮ್​ಚರಣ್, ನಟಿ ಉಪಾಸನಾ ಹಾಗೂ ಪ್ರಕಾಶ್​ ರೈ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಟ ಪ್ರಸ್ತುತ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಅವರು ಸ್ಪೋರ್ಟ್ಸ್ ಬೈಕ್​ನಲ್ಲಿ ಪ್ರಯಾಣಿಸುವಾಗ, ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಅಪಘಾತ ಸಂಭವಿಸಿತ್ತು.

ಅಪಘಾತಕ್ಕೆ ಕಾರಣವೇನು? ರಸ್ತೆ ಬದಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳದಲ್ಲಿ ಬಿದ್ದಿದ್ದ ಮರಳಿನಿಂದ ಬೈಕ್​ ಸ್ಕಿಡ್​ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಪೋರ್ಟ್ಸ್ ಬೈಕ್​ನಲ್ಲಿ ತೆರಳುತ್ತಿದ್ದ, ನಟ ಸಾಯಿ ಧರ್ಮ ತೇಜ ಅವರ ಬೈಕ್ ಸ್ಕಿಡ್ ಆಗಿ ಬಿದ್ದು, ಅಪಘಾತ ಸಂಭವಿಸಿದೆ. ಪ್ರಸ್ತುತ ಹೈದರಾಬಾದ್ ಮಹಾನಗರ ಪಾಲಿಕೆಯ ಸಿಬ್ಬಂದಿ ಸ್ಥಳದಲ್ಲಿ ಬಿದ್ದಿದ್ದ ಮರಳನ್ನು ತೆರವು ಮಾಡಿ, ಸ್ವಚ್ಛಗೊಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ನೇಹಿತರೊಂದಿಗೆ ಬೈಕ್ ರೈಡಿಂಗ್​ಗೆ ತೆರಳುವಾಗ ಅಪಘಾತ: ನಟ ಸಾಯಿ ಧರ್ಮ ತೇಜ ರೆಗ್ಯುಲರ್​ ಆಗಿ ಬೈಕ್​ ರೈಡಿಂಗ್​ಗೆ ತೆರಳುತ್ತಿದ್ದರು. ಅದೇ ರೀತಿ ನಿನ್ನೆ ಸ್ನೇಹಿತರಾದ ಸಂದೀಪ್​ ಕಿಷನ್​, ವೈವಾ ಹರ್ಷಾ ಎಂಬುವರೊಂದಿಗೆ​ ಅವರು ಬೈಕ್​ ರೈಡಿಂಗ್​ಗೆ ತೆರಳಿದ್ದರು. ಕಳೆದ ರಾತ್ರಿ ರೈಡಿಂಗ್​ ಸೂಟ್ ಹಾಗೂ ಹೆಲ್ಮೆಟ್ ಅನ್ನು​ ಸಾಯಿ ಧರ್ಮತೇಜ ಧರಿಸಿದ್ದರು. ಆದರೆ, ರಸ್ತೆಯಲ್ಲಿದ್ದ ಮರಳಿನಿಂದ ಬೈಕ್ ಸ್ಕಿಡ್ ಆಗಿ ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸಾಯಿ ಧರ್ಮತೇಜ ಅವರಿಗೆ ಬೈಕ್ ಕ್ರೇಜ್ ಇತ್ತು. ನಟ ಪವನ್​ ಕಲ್ಯಾಣ್ ಅವೆಂಜರ್ ಬೈಕನ್ನು ಗಿಫ್ಟ್​ ಆಗಿ ನೀಡಿದ್ದರು. ಧರ್ಮತೇಜ ಅವರ ತಾಯಿ ಹಾರ್ಲೆ ಡೇವಿಡ್ಸನ್​ ಬೈಕ್ ಗಿಫ್ಟ್​ ನೀಡಿದ್ದರು. ಒಟ್ಟು ಅವರ ಗ್ಯಾರೇಜ್​​ನಲ್ಲಿ 4 ಸ್ಪೋರ್ಟ್ಸ್​ ಬೈಕ್ ಇದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಭೀತಿ ಬೇಡ ಎಂದ ಮೆಗಾಸ್ಟಾರ್ ಚಿರಂಜೀವಿ: ತೆಲುಗು ನಟ ಸಾಯಿ ಧರ್ಮತೇಜ​ ಬೈಕ್​ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಭಿಮಾನಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮೆಗಾಸ್ಟಾರ್ ಮಾಡಿದ್ದಾರೆ. ಟ್ವೀಟ್ ಮುಖಾಂತರ ಸಾಯಿ ಧರ್ಮ ತೇಜ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಅವರು, ‘ನಟನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾಯಿ ಧರ್ಮತೇಜ ಅವರ ಆರೋಗ್ಯ ಸ್ಥಿರವಾಗಿದ್ದು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅಭಿಮಾನಿಯಿಂದ ರೂಲ್ಸ್ ಬ್ರೇಕ್!

Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

(Here is the Reason for Sai Dharam Tej accident)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ