AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಹಾಡನ್ನು ಕೇಳುವುದಕ್ಕಿಂತ ವಿಷ ಕುಡಿದು ಸಾಯಬಹುದು’ ಎಂದು ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ಕೊಟ್ಟ ಗಾಯಕ

ಬಾಲಿವುಡ್​ನ ಖ್ಯಾತ ಗಾಯಕರೋರ್ವರು ಅಂತರ್ಜಾಲದಲ್ಲಿ ತಲೆಹರಟೆ ಟೀಕೆ ಮಾಡಿದ ವ್ಯಕ್ತಿಯೋರ್ವನಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಉತ್ತರ ಅಭಿಮಾನಿಗಳ ಗಮನ ಸೆಳೆದಿದೆ.

‘ನಿಮ್ಮ ಹಾಡನ್ನು ಕೇಳುವುದಕ್ಕಿಂತ ವಿಷ ಕುಡಿದು ಸಾಯಬಹುದು’ ಎಂದು ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ಕೊಟ್ಟ ಗಾಯಕ
ಗಾಯಕ ಟೋನಿ ಕಕ್ಕರ್
TV9 Web
| Updated By: shivaprasad.hs|

Updated on: Sep 11, 2021 | 10:15 AM

Share

ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಸಾಮಾನ್ಯ. ಅಲ್ಲಿ ಪ್ರಶಂಸೆ ಹಾಗೂ ಖ್ಯಾತಿ ಎಷ್ಟು ಸುಲಭಕ್ಕೆ ಲಭ್ಯವಾಗುತ್ತದೋ ಅಷ್ಟೇ ಸುಲಲಿತವಾಗಿ ದ್ವೇಷ, ಟೀಕೆಗಳಿಗೂ ಗುರಿಯಾಗಬೇಕಾಗುತ್ತದೆ. ಆದರೆ ಹಲವರು ಅದನ್ನು ನಿರ್ಲಕ್ಷಿಸಿ ಸುಮ್ಮನುಳಿಯುತ್ತಾರೆ. ಕೆಲವರು ತಕ್ಕ ಪ್ರತ್ಯುತ್ತರವನ್ನೂ ನೀಡುತ್ತಾರೆ. ಮತ್ತೆ ಕೆಲವರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದೂ ಇದೆ. ಬಾಲಿವುಡ್​ನ ಖ್ಯಾತ ಗಾಯಕ ಟೋನಿ ಕಕ್ಕರ್, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಟೀಕೆಗೆ ತಕ್ಕ ಪ್ರತ್ಯುತ್ತರ ನೀಡಿ ಈಗ ಸುದ್ದಿಯಾಗಿದ್ದಾರೆ. ಅಲ್ಲದೇ, ಟೋನಿಯವರ ಪ್ರೌಢ ಮಾತುಗಳು ನೆಟ್ಟಿಗರ ಮನಗೆದ್ದಿವೆ. 

ಟೋನಿ ಕಕ್ಕರ್ ತಮ್ಮ ಆಲ್ಬಂ ಸಾಂಗ್​ಗಳಿಂದ ಜನರಿಗೆ ಪರಿಚಿತರು. ಇದಕ್ಕೆ ಬಹಳಷ್ಟು ಅಭಿಮಾನಿಗಳನ್ನೂ ಅವರು ಸಂಪಾದಿಸಿದ್ದಾರೆ. ಇತ್ತೀಚೆಗಷ್ಟೇ ಕೌಟುಂಬಿಕ ಕಲಹದಿಂದ ಸುದ್ದಿಯಾಗಿರುವ ಗಾಯಕ ಯೋ ಯೋ ಹನಿ ಸಿಂಗ್ ಮತ್ತು ಸಹೋದರಿ ನೇಹಾ ಕಕ್ಕರ್ ಅವರೊಂದಿಗೆ ‘ಕಂಟಾ ಲಗಾ’ ಎಂಬ ಆಲ್ಬಂ ಸಾಂಗ್ ಒಂದನ್ನು ಟೋನಿ ರಚಿಸಿದ್ದರು. ಇದಕ್ಕೆ ಟ್ವಿಟರ್​ನಲ್ಲಿ ಅಭಿಮಾನಿಯೊಬ್ಬ ಪ್ರತಿಕ್ರಿಯೆ ನೀಡಿದ್ದು, ಅದು ಟೀಕೆಯ ರೂಪದಲ್ಲಿರದೇ ವ್ಯಕ್ತಿತ್ವ ಘಾಸಿಗೊಳಿಸುವಂತಿತ್ತು. ಆತ, ‘ಸರ್, ನಿಮ್ಮ ಹಾಡನ್ನು ಕೇಳುವುದಕ್ಕಿಂತ ನಾನು ವಿಷ ತೆಗೆದುಕೊಂಡು ಸಾಯಬಹುದು’ ಎಂದು ಬರೆದಿದ್ದ.

ಅಭಿಮಾನಿಯ ಈ ತಲೆಹರಟೆ ಕಾಮೆಂಟಿಗೆ ಉತ್ತರ ಬರೆದಿರುವ ಟೋನಿ ಕಕ್ಕರ್, ‘‘ದಯವಿಟ್ಟು ಸಾಯಬೇಡಿ. ನೀವು ನನ್ನ ಹಾಡುಗಳನ್ನು ಕೇಳಬೇಕೆಂದೇನಿಲ್ಲ. ನಮ್ಮಂಥ 100 ಟೋನಿ ಕಕ್ಕರ್​ಗಳು ಬರುತ್ತಾರೆ, ಹೋಗುತ್ತಾರೆ. ಆದರೆ ನೀವು ಬಹಳ ದೀರ್ಘ ಕಾಲ ಬಾಳಿ’’ ಎಂದು ಉತ್ತರಿಸಿದ್ದಾರೆ. ಇದಕ್ಕೆ ಮತ್ತೆ ಉತ್ತರಿಸಿರುವ ಟ್ರೋಲ್ ಮಾಡಿರುವ ಅಭಿಮಾನಿ, ‘ನನಗೆ ನಿಮ್ಮ ರೊಮ್ಯಾಂಟಿಕ್ ಮಾದರಿಯ ಹಾಡುಗಳು ಇಷ್ಟ. ಆದರೆ ತಕರಾರು ಇರುವುದು ಡಾನ್ಸ್ ಸಾಂಗ್​ಗಳ ಬಗ್ಗೆ. ಅವುಗಳನ್ನು ಚೆನ್ನಾಗಿ ಮಾಡಿ. ನಾಣು ಹೇಳುತ್ತಿರುವುದು ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ’ ಎಂದು ಬರೆದಿದ್ದಾನೆ.

ಟೋನಿ ಕಕ್ಕರ್ ಪ್ರತಿಕ್ರಿಯಿಸಿರುವ ಟ್ವೀಟ್:

ಟೋನಿ ಕಕ್ಕರ್ ತಮ್ಮ ಡಾನ್ಸ್ ಸಾಂಗ್​ಗಳಲ್ಲಿರುವ ಕಡಿಮೆ ಪ್ರಮಾಣದ ಸಾಹಿತ್ಯಕ್ಕೆ ಹಾಗೂ ರಿಮಿಕ್ಸ್​ಗೆ ಟೀಕೆಗೆ ಒಳಗಾಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಟೀಕೆಗಳು ಬಂದಾಗ ಅವುಗಳಿಗೆ ಟೋನಿ ಉತ್ತರಿಸಿದ್ದರು. ‘ಜನರಿಗೆ ಟೀಕಿಸಲು ಯಾವಾಗಲೂ ಏನಾದರೂ ವಿಷಯಗಳಿರುತ್ತವೆ. ಆದರೆ ಸಣ್ಣವನಿದ್ದಾಗ ನನಗೆ ಆಟವಾಡಲು ಒಂದು ಸಣ್ಣ ಆಟಿಕೆಯೂ ಇರಲಿಲ್ಲ. ಈಗ ನನ್ನ ಹಾಡುಗಳು ಮನೆ, ಕಾರು, ಸ್ಟಾರ್​ಬಕ್ಸ್ ಎಲ್ಲವನ್ನೂ ನನಗೆ ನೀಡಿವೆ.’ ಎಂದು ಅವರು ಬರೆದುಕೊಂಡಿದ್ದರು. ಇದರ ಹೊರತಾಗಿ, ಟೋನಿಯವರು ಇತ್ತೀಚಿನ ‘ಕಂಟಾ ಲಗಾ’ ಹಾಡಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಾನು ಟೀಕೆಗಳಿಂದ ಪ್ರೇರಣೆ ಹೊಂದುತ್ತೇನೆ ಎಂದು ಹಾಡಿಗೆ ಟೀಕೆಗಳು ವ್ಯಕ್ತವಾಗಿದ್ದಕ್ಕೆ, ಟೋನಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ:

Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್​ ತೇಜ್​; ಆದರೆ ಆಪ್ತರು ಹೇಳೋದೇ ಬೇರೆ

ಗಣೇಶನಿಗೆ ಕೈ ಮುಗಿದ ಸೈಫ್​ ಅಲಿ ಖಾನ್​ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್​​

(Tony Kakkar replies to a man who wrote better to take poison than listen to his songs)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ