ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್​ ಚಿತ್ರ ಗಳಿಸಿದ್ದೆಷ್ಟು?

ಹಿಂದಿ ಪ್ರೇಕ್ಷಕರು ‘ತಲೈವಿ’ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲ. ಮೂಲಗಳ ಪ್ರಕಾರ ಹಿಂದಿ ವರ್ಷನ್​ನಿಂದ ಮೊದಲ ದಿನ ಈ ಚಿತ್ರ ಗಳಿಸಿರುವುದು ಕೇವಲ 20 ಲಕ್ಷ ರೂ. ಮಾತ್ರ!

ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್​ ಚಿತ್ರ ಗಳಿಸಿದ್ದೆಷ್ಟು?
ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 11, 2021 | 3:30 PM

ಬಾಲಿವುಡ್​ ಸಿನಿಮಾಗಳು ಯಾವಾಗಲೂ ಕೋಟಿ ಲೆಕ್ಕದಲ್ಲೇ ವ್ಯವಹಾರ ಮಾಡುತ್ತವೆ. ಅದರಲ್ಲೂ ಸ್ಟಾರ್​ ಕಲಾವಿದರ ಚಿತ್ರಗಳು ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಬಂಪರ್​ ಬೆಳೆ ತೆಗೆಯುತ್ತವೆ. ಹಾಗಾಗಿ ಕಂಗನಾ ರಣಾವತ್​ ನಟನೆಯ ‘ತಲೈವಿ’ ಸಿನಿಮಾ ಮೇಲೆ ಹೆಚ್ಚು ಭರವಸೆ ಇಟ್ಟುಕೊಳ್ಳಲಾಗಿತ್ತು. ಜಯಲಲಿತಾ ಬಯೋಪಿಕ್​ ಆಗಿ ಮೂಡಿಬಂದಿರುವ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಬಾಕ್ಸ್​ ಆಫೀಸ್​ ಗಳಿಕೆಯನ್ನು ನೋಡಿದರೆ ಯಾಕೋ ನಿರಾಸೆ ಆಗುವಂತಿದೆ.

ಗಣೇಶ ಚತುರ್ಥಿ ಪ್ರಯುಕ್ತ ಸೆ.10ರಂದು ‘ತಲೈವಿ’ ಸಿನಿಮಾ ಎಲ್ಲೆಡೆ ಬಿಡುಗಡೆ ಆಗಿದೆ. ಹಿಂದಿ, ತೆಲುಗು ಮತ್ತು ತಮಿಳು ವರ್ಷನ್​ಗಳಲ್ಲಿ ಈ ಸಿನಿಮಾ ತೆರೆಕಂಡಿದೆ. ಹಿಂದಿ ಪ್ರೇಕ್ಷಕರು ‘ತಲೈವಿ’ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲ. ಮೂಲಗಳ ಪ್ರಕಾರ ಹಿಂದಿ ವರ್ಷನ್​ನಿಂದ ಮೊದಲ ದಿನ ಈ ಚಿತ್ರ ಗಳಿಸಿರುವುದು ಕೇವಲ 20 ಲಕ್ಷ ರೂ. ಮಾತ್ರ! ತಮಿಳು, ತೆಲುಗು ವರ್ಷನ್​ಗಳ ಕಲೆಕ್ಷನ್​ ಸೇರಿಸಿದರೂ ಮೊದಲ ದಿನ 1 ಕೋಟಿ ರೂ. ದಾಟಿಲ್ಲ ಎನ್ನಲಾಗುತ್ತಿದೆ.

ಗಲ್ಲಾಪೆಟ್ಟಿಗೆಯಲ್ಲಿ ‘ತಲೈವಿ’ ಸಿನಿಮಾ ಮುಗ್ಗರಿಸಲು ಹಲವು ಕಾರಣಗಳಿವೆ. ತಮಿಳುನಾಡಿನ ರಾಜಕೀಯದಲ್ಲಿ ಸಾಧನೆ ಮಾಡಿದ ಜಯಲಲಿತಾ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ತರ ಭಾರತದ ಮಂದಿಗೆ ಅಷ್ಟೇನೂ ಉತ್ಸಾಹ ಇಲ್ಲ. ಇನ್ನು, ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಅಲ್ಲದೆ, ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ಭಯದಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಥಿಯೇಟರ್​ಗೆ ಬರುತ್ತಿಲ್ಲ.

ಶೀಘ್ರದಲ್ಲೇ ಈ ಸಿನಿಮಾ ಓಟಿಟಿ ಮೂಲಕ ಬಿಡುಗಡೆ ಆಗಲಿದೆ ಎಂಬ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ. ಹೇಗಿದ್ದರೂ ಓಟಿಟಿಯಲ್ಲಿ ಬರಲಿದೆ ಎಂದ ಮೇಲೆ ಈಗಲೇ ಚಿತ್ರಮಂದಿರಕ್ಕೆ ಹೋಗಿ ಯಾಕೆ ನೋಡಬೇಕು ಎಂಬ ಲೆಕ್ಕಾಚಾರದಲ್ಲೂ ಪ್ರೇಕ್ಷಕರು ಹಿಂದೇಟು ಹಾಕಿರುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದಾಗಿ ಮೊದಲ ದಿನವೇ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ‘ತಲೈವಿ’ ಮುಗ್ಗರಿಸಿದೆ. ಹಾಗಿದ್ದರೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಗನಾ ನಟನೆಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಜಯಲಲಿತಾ ಅವರ ನಿಜಜೀವನದ ಘಟನೆಗಳನ್ನು ಸಿನಿಮೀಯವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರ ಮುಂದಿನ ದಿನಗಳಲ್ಲಾದರೂ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಸಿಕೊಳ್ಳುತ್ತೋ ಇಲ್ಲವೋ ಎಂಬ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಕಂಗನಾ ರಣಾವತ್ ಮುಂದಿನ ನಿಲ್ದಾಣ ರಾಜಕೀಯ; ‘ತಲೈವಿ’ ಬೆನ್ನಲ್ಲೇ ಮಹತ್ವದ ನಿರ್ಧಾರ, ಯಾವ ಪಕ್ಷ?

 ಕಂಗನಾ ‘ತಲೈವಿ’ಗೆ ಸಂಕಷ್ಟ; ನಡೆದೇ ಇರದ ದೃಶ್ಯ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ನಿರ್ದೇಶಕ  

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ