AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ರಣಾವತ್ ಮುಂದಿನ ನಿಲ್ದಾಣ ರಾಜಕೀಯ; ‘ತಲೈವಿ’ ಬೆನ್ನಲ್ಲೇ ಮಹತ್ವದ ನಿರ್ಧಾರ, ಯಾವ ಪಕ್ಷ?

ಕಂಗನಾ ರಣಾವತ್​ ‘ತಲೈವಿ’ ಸಿನಿಮಾದ ವಿಮರ್ಶೆಗಳನ್ನು ಕೇಳಿ ಖುಷಿಯಾಗಿದ್ದಾರೆ. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸೋಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಬೆನ್ನಲ್ಲೇ ಕಂಗನಾ ಮಾಧ್ಯಮಗಳನ್ನು ಎದುರುಗೊಂಡಿದ್ದಾರೆ.

ಕಂಗನಾ ರಣಾವತ್ ಮುಂದಿನ ನಿಲ್ದಾಣ ರಾಜಕೀಯ; ‘ತಲೈವಿ’ ಬೆನ್ನಲ್ಲೇ ಮಹತ್ವದ ನಿರ್ಧಾರ, ಯಾವ ಪಕ್ಷ?
ಕಂಗನಾ ರಣಾವತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 10, 2021 | 7:19 PM

Share

ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಭರಪೂರ ಯಶಸ್ಸು ಕಂಡ ಜಯಲಲಿತಾ ಅವರ ಬಯೋಪಿಕ್​ನಲ್ಲಿ ಕಂಗನಾ ನಟಿಸಿದ್ದಾರೆ. ಜಯಲಲಿತಾ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ನಟಿ ಕಂಗನಾ ರಾಜಕೀಯಕ್ಕೆ ಬರುವ ಆಲೋಚನೆ ಮಾಡಿದ್ದಾರೆ. ಈ ವಿಚಾರವನ್ನು ಅವರು ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ.

ಕಂಗನಾ ರಣಾವತ್​ ‘ತಲೈವಿ’ ಸಿನಿಮಾದ ವಿಮರ್ಶೆಗಳನ್ನು ಕೇಳಿ ಖುಷಿಯಾಗಿದ್ದಾರೆ. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸೋಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಬೆನ್ನಲ್ಲೇ ಕಂಗನಾ ಮಾಧ್ಯಮಗಳನ್ನು ಎದುರುಗೊಂಡಿದ್ದಾರೆ. ಜಯಲಲಿತಾ ಚಿತ್ರರಂಗಕ್ಕೆ ಕಾಲಿಟ್ಟು, ನಂತರ ರಾಜಕೀಯದಲ್ಲಿ ಮಿಂಚಿದರು. ಪೊಲಿಟಿಕ್ಸ್​ಗೆ ಎಂಟ್ರಿಕೊಡೋಕೆ ಅವರಿಗೆ ಸಹಾಯ ಮಾಡಿದ್ದು ಸಿನಿಮಾ ರಂಗ. ಇಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರಿಂದಲೇ ರಾಜಕೀಯದಲ್ಲಿ ನೆಲೆಯೂರೋಕೆ ಸುಲಭವಾಯಿತು. ಈ ಸಿನಿಮಾ ಕಂಗನಾ ಅವರಿಗೆ ಸ್ಫೂರ್ತಿದಾಯಕವಾಗಿದೆಯೇ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಕಂಗನಾ ನೇರವಾಗಿ ಉತ್ತರಿಸಿದ್ದಾರೆ.

‘ನಾನು ಓರ್ವ ರಾಷ್ಟ್ರೀಯವಾದಿ. ಈ ದೇಶಕ್ಕಾಗಿ ಮಾತನಾಡುವುದು ನನೊಬ್ಬ ಜವಾಬ್ದಾರಿಯುತ ಪ್ರಜೆಯಾಗಿಯೇ ಹೊರತು, ರಾಜಕಾರಣಿ ಆಗಿ ಅಲ್ಲ. ರಾಜಕೀಯ ಪ್ರವೇಶ ಪಡೆಯಬೇಕು ಎಂದರೆ ನನಗೆ ಸಾಕಷ್ಟು ಬೆಂಬಲ ಬೇಕಾಗಬಹುದು. ನಾನು ನಟಿ ಆಗಿರುವುದಕ್ಕೆ ಖುಷಿ ಇದೆ. ಆದರೆ, ನಾಳೆ ಜನರು ನನ್ನನ್ನು ಇಷ್ಟಪಟ್ಟು ಬೆಂಬಲಿಸಿದರೆ, ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಬರುತ್ತೇನೆ’ ಎಂದರು. ಈ ಮೂಲಕ ಅವರು ರಾಜಕೀಯಕ್ಕೆ ಬರುವ ಸೂಚನೆ ನೀಡಿದ್ದಾರೆ.

ಕಂಗನಾ ಈ ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಕಾರಣಕ್ಕೆ ಅವರು ಭವಿಷ್ಯದಲ್ಲಿ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ. ಇದಕ್ಕೆ ಕಂಗನಾ ಅವರೇ ಭವಿಷ್ಯದಲ್ಲಿ ಉತ್ತರ ಕೊಡಬೇಕಿದೆ. ಈ ಮೊದಲು ಕೂಡ ಸಾಕಷ್ಟು ನಟ-ನಟಿಯರು ರಾಜಕೀಯಕ್ಕೆ ಬಂದಿದ್ದಾರೆ. ಕಂಗನಾ ಕೂಡ ಅದೇ ಹಾದಿ ಆಯ್ಕೆ ಮಾಡಿಕೊಂಡರೆ ಯಾವುದೇ ಅಚ್ಚರಿ ಇಲ್ಲ.

ಇದನ್ನೂ ಓದಿ: Thalaivii Movie Review: ‘ತಲೈವಿ’.. ಇದು ಕೇವಲ ಜಯಲಲಿತಾ ಕತೆಯಲ್ಲ

‘ಕಂಗನಾ ರಣಾವತ್​ ‘ತಲೈವಿ’ಗೆ ಐದು ರಾಷ್ಟ್ರ ಪ್ರಶಸ್ತಿ ಬರಲೇಬೇಕು, ಇಲ್ಲವಾದರೆ ಬೇಸರವಾಗುತ್ತದೆ’

Published On - 7:18 pm, Fri, 10 September 21