ಬಾಲಿವುಡ್ನಲ್ಲಿ ಎಲ್ಲರ ಗಮನ ಸೆಳೆದಿರುವ ಜೋಡಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. ಸದಾ ಒಂದಿಲ್ಲೊಂದು ಕಾರಣಕ್ಕೆ ಈರ್ವರೂ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಗೆಳೆಯ ಅರ್ಜುನ್ ನಟನೆಯ ‘ಭೂತ್ ಪೊಲೀಸ್’ ಚಿತ್ರವನ್ನು ವೀಕ್ಷಿಸಿರುವ ನಟಿ, ಡಾನ್ಸರ್ ಮಲೈಕಾ ಅರೋರಾ ಚಿತ್ರಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯ ಮುಖಾಂತರ ಚಿತ್ರ ನೋಡಿದ ನಂತರ ಮೂಡಿದ ಮೊದಲ ಅಭಿಪ್ರಾಯವನ್ನು ತಿಳಿಸಿರುವ ಮಲೈಕಾ, ಚಿತ್ರತಂಡಕ್ಕೆ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ. ‘ಓ ದೇವರೇ, ಇದು ಬಹಳ ಮಜವಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಭೂತ್ ಪೊಲೀಸ್ ಚಿತ್ರದಲ್ಲಿ ಮಲೈಕಾ ಅರೋರಾ ಗೆಳೆಯ ಅರ್ಜುನ್ ಕಪೂರ್, ಸೈಫ್ ಅಲಿ ಖಾನ್, ಯಾಮಿ ಗೌತಮ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಒಟಿಟಿ ಮುಖಾಂತರ ನೇರವಾಗಿ ಬಿಡುಗಡೆಯಾದ ಚಿತ್ರವಾಗಿದ್ದು, ಡಿಸ್ನೆ+ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಿದೆ. ಮಲೈಕಾ ತಮ್ಮ ಸ್ಟೋರಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ಎಲ್ಲಾ ನಟರನ್ನೂ ಟ್ಯಾಗ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಮಲೈಕಾ ಅರೋರಾ ಹಂಚಿಕೊಂಡ ಸ್ಟೇಟಸ್
ಮಲೈಕಾ ಹಾಗೂ ಅರ್ಜುನ್ ರಿಲೇಶನ್ಶಿಪ್ನಲ್ಲಿ ಬಹಳ ಕಾಲದಿಂದ ಇದ್ದಾರೆ. ಇತ್ತೀಚೆಗಷ್ಟೇ ಗೆಳತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಕಪೂರ್, ‘‘ನಾನು ದುಃಖದಲ್ಲಿದ್ದಾಗ, ಖುಷಿಯಲ್ಲಿದಾಗ- ಯಾವುದೇ ಸಂದರ್ಭವಿರಲಿ ಅದು ಆಕೆಗೆ ತಿಳಿಯುತ್ತದೆ. ಒಂದು ವೇಳೆ ನಾನು ಕದ್ದು ಕುಳಿತರೂ ಅದು ಆಕೆಗೆ ತಿಳಿದಿರುತ್ತದೆ’’ ಎಂದು ಮಲೈಕಾ ಕುರಿತು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಧಿಕೃತವಾಗಿ ಈರ್ವರು ಇನ್ನೂ ದಾಂಪತ್ಯಕ್ಕೆ ಕಾಲಿಟ್ಟಿಲ್ಲವಾದರೂ, ಇಬ್ಬರೂ ಜೊತೆಯಾಗಿಯೇ ಸುತ್ತಾಡುವುದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದಲೇ ಅಭಿಮಾನಿಗಳು ಈ ಜೋಡಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಭೂತ್ ಪೊಲೀಸ್ ಚಿತ್ರವು ಶುಕ್ರವಾರ ಬಿಡುಗಡೆಯಾಗಿದೆ. ಹಾರರ್ ಕಾಮಿಡಿ ಜಾನರ್ನ ಈ ಚಿತ್ರವನ್ನು ಪವನ್ ಕೃಪಲಾನಿ ನಿರ್ದೇಶಿಸಿದ್ದಾರೆ. ನಟ ಅರ್ಜುನ್ ಕಪೂರ್ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿದ್ದು, ಅವರು ಇತ್ತೀಚೆಗಷ್ಟೇ ನೆಟ್ಫ್ಲಿಕ್ಸ್ನ ‘ಸರ್ದಾರ್ ಕಾ ಗ್ರಾಂಡ್ಸನ್’ನಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:
ಕೇಸ್ ಮೇಲೆ ಕೇಸ್ ಬಿದ್ರೂ ಕಮ್ಮಿ ಆಗಿಲ್ಲ ಗೆಹನಾ ಮಾದಕತೆ; ನೀಲಿ ಚಿತ್ರ ದಂಧೆ ಆರೋಪಿಯ ಹೊಸ ಫೋಟೋಶೂಟ್
ವೇದಿಕೆ ಮೇಲೆ ಕಾಣಿಸಿಕೊಂಡ ಬಿಗ್ ಬಾಸ್ 8ರ ನಕಲಿ ಸ್ಪರ್ಧಿಗಳು
(Malaika Arora shares her first impression on Arjun Kapoor’s Bhoot Police)