ಕೇಸ್​ ಮೇಲೆ ಕೇಸ್​ ಬಿದ್ರೂ ಕಮ್ಮಿ ಆಗಿಲ್ಲ ಗೆಹನಾ ಮಾದಕತೆ; ನೀಲಿ ಚಿತ್ರ ದಂಧೆ ಆರೋಪಿಯ ಹೊಸ ಫೋಟೋಶೂಟ್​

ಗೆಹನಾ ವಸಿಷ್ಠ್​ ಅವರು ಮಾಡಿಸಿರುವ ಹೊಸ ಫೋಟೋಶೂಟ್​ ವೈರಲ್​ ಆಗುತ್ತಿದೆ. ಅರೆನಗ್ನವಾಗಿ ಅವರು ಪೋಸ್​ ನೀಡಿದ್ದು, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.

ಕೇಸ್​ ಮೇಲೆ ಕೇಸ್​ ಬಿದ್ರೂ ಕಮ್ಮಿ ಆಗಿಲ್ಲ ಗೆಹನಾ ಮಾದಕತೆ; ನೀಲಿ ಚಿತ್ರ ದಂಧೆ ಆರೋಪಿಯ ಹೊಸ ಫೋಟೋಶೂಟ್​
ಗೆಹನಾ ವಸಿಷ್ಠ್​
TV9kannada Web Team

| Edited By: Madan Kumar

Sep 11, 2021 | 4:17 PM

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆಯಲ್ಲಿ ಅನೇಕರ ಹೆಸರುಗಳು ಹೊರಬಂದವು. ಆ ಪೈಕಿ ಹೆಚ್ಚು ಸುದ್ದಿ ಮಾಡಿದ ನಟಿ ಎಂದರೆ ಅದು ಗೆಹನಾ ವಸಿಷ್ಠ್​. ಕೆಲವು ವೆಬ್​ ಸಿರೀಸ್​ಗಳಲ್ಲಿ ಹಾಟ್​ ಆಗಿ ಕಾಣಿಸಿಕೊಂಡಿರುವ ಅವರು ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಇದೆ. ಹಾಗಾಗಿ ಅವರ ಮೇಲೆ ಹಲವು ಕೇಸ್​ಗಳು ದಾಖಲಾಗಿವೆ. ಸದ್ಯ ಜಾಮೀನು ಪಡೆದುಕೊಂಡಿರುವ ಅವರು ತಮ್ಮ ಮಾದಕತೆ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಈ ವರ್ಷ ಫೆಬ್ರವರಿಯಲ್ಲಿ ಗೆಹನಾ ವಸಿಷ್ಠ್​ ಬಂಧನವಾಗಿತ್ತು. ಅಶ್ಲೀಲ ಸಿನಿಮಾ ದಂಧೆಯಲ್ಲಿ ಅವರು ಭಾಗಿ ಆಗಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಒಟ್ಟು ಮೂರು ಎಫ್​ಐಆರ್​ಗಳು ದಾಖಲಾಗಿವೆ. ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​ ಆ್ಯಪ್​ಗಾಗಿ ತಾವು ಕೆಲವು ಬೋಲ್ಡ್​ ಸಿನಿಮಾಗಳಲ್ಲಿ ನಟಿಸಿದ್ದು ಹೌದು ಎಂದು ಗೆಹನಾ ಒಪ್ಪಿಕೊಂಡಿದ್ದಾರೆ. ಆದರೆ ಅವು ನೀಲಿ ಚಿತ್ರ ಅಥವಾ ಅಶ್ಲೀಲ ಸಿನಿಮಾ ಅಲ್ಲ ಎಂಬುದು ಗೆಹನಾ ವಾದ. ಸೂಕ್ತ ತನಿಖೆ ನಡೆದರೆ ಅವರ ನಿಜವಾದ ಬಣ್ಣ ಬಯಲಾಗಲಿದೆ.

ಸೋಶಿಯಲ್​ ಮೀಡಿಯಾದಲ್ಲಿ ಗೆಹನಾ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಮೇಲೆ ಏನೇ ಆರೋಪ ಇದ್ದರೂ, ಎಷ್ಟೇ ಕೇಸ್​ ದಾಖಲಾದರೂ ಅವರು ಹಾಟ್​ ಫೋಟೋಶೂಟ್​ ಮಾಡುವುದನ್ನು ನಿಲ್ಲಿಸಿಲ್ಲ. ಈಗ ಅವರು ಮಾಡಿಸಿರುವ ಹೊಸ ಫೋಟೋಶೂಟ್​ ವೈರಲ್​ ಆಗುತ್ತಿದೆ. ಅರೆನಗ್ನವಾಗಿ ಅವರು ಪೋಸ್​ ನೀಡಿದ್ದು, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.  ಅಂದಹಾಗೆ ಗೆಹನಾ ಈ ರೀತಿ ವರ್ತಿಸಿರುವುದು ಇದೇ ಮೊದಲೇನಲ್ಲ. ಕೆಲವೇ ದಿನಗಳ ಹಿಂದೆ ಅವರು ನಗ್ನವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಲೈವ್ ಬಂದಿದ್ದರು.

‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್ ಬಂದಿದ್ದೇನೆ. ನಿಮ್ಮ ಕಣ್ಣಿಗೆ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ? ಇದನ್ನು ಪೋರ್ನ್​ ಎನ್ನಲಾಗುತ್ತಾ? ನಾನು ಏನೂ ಧರಿಸಿಲ್ಲ. ಆದರೂ ಇದನ್ನು ಪೋರ್ನ್​ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬೇರೆ ವಿಡಿಯೋಗಳಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಅದು ತಪ್ಪಲ್ಲವೇ? ಎಲ್ಲರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಬೂಟಾಟಿಕೆಗೂ ಒಂದು ಮಿತಿ ಇರಬೇಕು’ ಎಂದು ಗೆಹನಾ ಲೈವ್​ನಲ್ಲಿ ಹೇಳಿದ್ದರು.

ಇದನ್ನೂ ಓದಿ:

Gehana Vasisth: ಅಶ್ಲೀಲ ಸಿನಿಮಾ ದಂಧೆ ಪ್ರಕರಣದಲ್ಲಿ ನಟಿ ಗೆಹನಾಗೆ ಮತ್ತೊಂದು ಸಂಕಷ್ಟ; ಬಂಧನದ ಭೀತಿ

ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada