AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ದೀಪಿಕಾ ಹಾಗೂ ಕತ್ರಿನಾ ಹೇಗಿದ್ದರು? ಅಪರೂಪದ ಚಿತ್ರ ನೋಡಿ

Katrina Kaif and Deepika Padukone: ಬಾಲಿವುಡ್ ಬೆಡಗಿಯರಾದ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ಹೇಗಿದ್ದರು ಎಂಬುದನ್ನು ವಿವರಿಸುವ ಒಂದು ಚಿತ್ರ ನೆಟ್ಟಿಗರ ಗಮನ ಸೆಳೆದಿದೆ.

ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ದೀಪಿಕಾ ಹಾಗೂ ಕತ್ರಿನಾ ಹೇಗಿದ್ದರು? ಅಪರೂಪದ ಚಿತ್ರ ನೋಡಿ
ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಮಾಡೆಲಿಂಗ್ ದಿನಗಳಲ್ಲಿ ತಮ್ಮ ಸ್ನೇಹಿತರೊಂದಿಗೆ (Credits: Marc Robinson/Instagram)
TV9 Web
| Edited By: |

Updated on: Sep 11, 2021 | 3:41 PM

Share

ಬಾಲಿವುಡ್​ನ ಮುಂಚೂಣಿಯ ನಟಿಯರಾಗಿರುವ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಪ್ರವೇಶಿಸುವ ಕಾಲಘಟ್ಟದಲ್ಲಿ ಹೇಗಿದ್ದರು ಎಂಬುದನ್ನು ತಿಳಿಸಿಕೊಡುವ ಚಿತ್ರವೊಂದು ವೈರಲ್ ಆಗಿದೆ. ನಟ, ರೂಪದರ್ಶಿ ಮಾರ್ಕ್ ರಾಬಿನ್ಸನ್ ಒಂದು ಚಿತ್ರವನ್ನು ಹಂಚಿಕೊಂಡಿದ್ದು, ಅದರಲ್ಲಿ ಹಳೆದ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಚಿತ್ರದಲ್ಲಿ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಸೇರಿದಂತೆ ಸೋಫಿ ಚೌಧರಿ, ತರುಣ್ ಅರೋರಾ ಮೊದಲಾದವರಿದ್ದಾರೆ. ಮಾಡೆಲಿಂಗ್​ನ ತಮ್ಮೆಲ್ಲಾ ಸ್ನೇಹಿತರೊಂದಿಗೆ ಚಿತ್ರವನ್ನು ತೆಗೆಸಿಕೊಂಡಿರುವ ಫೊಟೊವನ್ನು ಮಾರ್ಕ್ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ನೆಚ್ಚಿನ ನಟಿಯರನ್ನು ಗುರುತಿಸಿ ಅಭಿಮಾನಿಗಳು ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಲಭಾಗದಲ್ಲಿ ಎಲ್ಲರಿಗಿಂತ ಹಿಂದೆ ನಿಂತಿದ್ದಾರೆ. ಆಗಿನ ಕಾಲದ ಟ್ರೆಂಡ್​ಗೆ ತಕ್ಕಂತೆ ಉಡುಪನ್ನು ಧರಿಸಿರುವ ದೀಪಿಕಾ ಫ್ಯಾಶನ್ ಪ್ರಿಯರ ಗಮನ ಸೆಳೆದಿದ್ದಾರೆ. ಅವರ ಮುಂದೆ ಕತ್ರಿನಾ ಕೈಫ್ ನಿಂತಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಮಾರ್ಕ್ ‘ಆಗಿನ ಕಾಲದ ಫ್ಯಾಷನ್ ಶೋ ದಿನಗಳು’ ಎಂದು ಬರೆದುಕೊಂಡು, ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ. ಇದು ಸದ್ಯ ವೈರಲ್ ಆಗಿದ್ದು, ದೀಪಿಕಾ ಹಾಗೂ ಕತ್ರಿನಾ ಬೆಳೆದು ಬಂದ ಹಾದಿಯನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ.

 ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಫೊಟೊ:

ದೀಪಿಕಾ ಹಾಗೂ ಕತ್ರಿನಾ ಈರ್ವರೂ ಕೂಡ ಮೊದಲು ರೂಪದರ್ಶಿಗಳಾಗಿದ್ದವರು. ದೀಪಿಕಾ ಬಾಲಿವುಡ್​ಗೆ ಪ್ರವೇಶ ಮಾಡಿದ್ದು, 2007ರಲ್ಲಿ ತೆರೆಕಂಡ ಶಾರುಖ್ ಖಾನ್​ರ ‘ಓಂ ಶಾಂತಿ ಓಂ’ ಚಿತ್ರದ ಮುಖಾಂತರ. ಅದಕ್ಕೂ ಮೊದಲು ಅಂದರೆ 2006ರಲ್ಲಿ ಅವರು ಕನ್ನಡದ ‘ಐಶ್ವರ್ಯಾ’ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ನಟಿಸಿದ್ದರು. ಕತ್ರೀನಾ 2003ರಲ್ಲಿ ‘ಬೂಮ್’ ಚಿತ್ರದ ಮುಖಾಂತರ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಅಂದಿನಿಂದ ಇಂದಿನವರೆಗೂ ಚಿತ್ರರಂಗದ ಮುಂಚೂಣಿಯ ನಾಯಕಿಯರಾಗಿ ಈರ್ವರೂ ಗುರುತಿಸಿಕೊಂಡಿದ್ದಾರೆ.

ದೀಪಿಕಾ ತಮ್ಮ ಮುಂದಿನ ಚಿತ್ರವಾದ ‘ಪಠಾಣ್​’ನಲ್ಲಿ ಮತ್ತೆ ಶಾರುಖ್​ರೊಂದಿಗೆ ಬಣ್ಣ ಹಚ್ಚಲಿದ್ದಾರೆ. ಇದರೊಂದಿಗೆ ‘83’, ಫೈಟರ್, ‘ಕೆ’ ಸೇರಿದಂತೆ ಹಲವು ಚಿತ್ರಗಳು ಅವರ ಬತ್ತಳಿಕೆಯಲ್ಲಿವೆ. ಇತ್ತೀಚೆಗಷ್ಟೇ ಹಾಲಿವುಡ್​ನ ಚಿತ್ರವೊಂದಕ್ಕೂ ದೀಪಿಕಾ ಸಹಿ ಹಾಕಿದ್ದು, ರೊಮ್ಯಾಂಟಿಕ್- ಕಾಮಿಡಿ ಮಾದರಿಯ ಚಿತ್ರ ಅದಾಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕತ್ರಿನಾ ಕೈಫ್ ಪ್ರಸ್ತುತ ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ‘ಟೈಗರ್ 3’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ರೋಹಿತ್ ಶೆಟ್ಟಿ ನಿರ್ದೇಶನದ, ಅಕ್ಷಯ್ ಕುಮಾರ್ ನಟನೆಯ ‘ಸೂರ್ವಂಶಿ’ ಚಿತ್ರದಲ್ಲೂ ಕತ್ರೀನಾ ಕಾಣಿಸಿಕೊಳ್ಳಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದಲ್ಲಿ ಮೂಡಿಬರಲಿರುವ ರೋಡ್ ಟ್ರಿಪ್ ಚಿತ್ರವಾದ ‘ಜೀ ಲೇ ಜರಾ’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಆಲಿಯಾ ಭಟ್​ರೊಂದಿಗೆ ಕತ್ರಿನಾ ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ:

Samantha: ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡ ಸಮಂತಾ; ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್

 ಕಂಗನಾ ‘ತಲೈವಿ’ಗೆ ಸಂಕಷ್ಟ; ನಡೆದೇ ಇರದ ದೃಶ್ಯ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ನಿರ್ದೇಶಕ  

(will you Spot Katrina kaif and Deepika Padukone in this old picture?)

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ