Samantha: ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡ ಸಮಂತಾ; ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್

TV9 Digital Desk

| Edited By: shivaprasad.hs

Updated on:Sep 11, 2021 | 1:15 PM

ಟಾಲಿವುಡ್​ನ ಖ್ಯಾತ ನಟಿ ಸಮಂತಾ ಮನೆಗೆ ಹೊಸ ಸದಸ್ಯೆಯೊಬ್ಬಳನ್ನು ಬರಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಂ ಪೋಸ್ಟ್ ಮುಖಾಂತರ ಆಕೆಯನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

Samantha: ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡ ಸಮಂತಾ; ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್
ನಟಿ ಸಮಂತಾ

ಸೆಲೆಬ್ರಿಟಿಗಳು ಬಹಳ ಆಸ್ಥೆಯಲ್ಲಿ ಪ್ರಾಣಿಗಳನ್ನು ಸಾಕುತ್ತಾರೆ. ಅದನ್ನು ಮನೆ ಮಕ್ಕಳಂತೆಯೇ ಸಾಕಿ, ಅದಕ್ಕೆ ಹೆಸರಿಟ್ಟು ಸಂತಸದಿಂದ ನೋಡಿಕೊಳ್ಳುತ್ತಾರೆ. ಈ ಪ್ರಾಣಿಗಳ ಕುರಿತು ಅವರು ಆಗಾಗ ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳ ಗಮನವನ್ನೂ ಸೆಳೆಯುತ್ತಾರೆ. ಟಾಲಿವುಡ್​ನ ಖ್ಯಾತ ನಟಿ ಸಮಂತಾ ಕೂಡ ಇದಕ್ಕೆ ಹೊರತಲ್ಲ. ಅವರು ತಮ್ಮ ಹೊಸ ಇನ್ಸ್ಟಾಗ್ರಾಂ ಪೋಸ್ಟ್​ನಲ್ಲಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದು, ಚಂದದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

‘ಸಾಷಾ’ ಎಂಬ ಪುಟಾಣಿ ಶ್ವಾನವೊಂದನ್ನು ಸಮಂತಾ ಕುಟುಂಬಕ್ಕೆ ಬರಮಾಡಿಕೊಂಡಿದ್ದು, ಅದರ ಮುದ್ದಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಉದ್ದನೆಯ ತಮಾಷೆಯ ಕ್ಯಾಪ್ಶನ್ ಕೂಡ ನೀಡಿದ್ದಾರೆ ಈ ಟಾಲಿವುಡ್ ಬೆಡಗಿ. ‘‘ಇಂದು ಮುಂಜಾನೆಯಿಂದ ಇದುವರೆಗೆ 19 ಬಾರಿ ಸಾಷಾ ವಿಸರ್ಜಿಸಿದ ಮೂತ್ರವನ್ನು ಸ್ವಚ್ಛಮಾಡಿದ್ದೇನೆ. ಇನ್ನೂ ಸಮಯ 9 ಗಂಟೆಯಷ್ಟೇ! ಎಲ್ಲಾ ಪೂರೈಸಿ ಒಂದೈದು ನಿಮಿಷ ಈಗ ಕಾಫಿ ಕುಡಿಯಲು ಕುಳಿತಿದ್ದೇನೆ, 5 ನಿಮಿಷಗಳ ಬಿಡುವು ದೊರೆತದ್ದಕ್ಕೆ ಆಹಾ ಎನಿಸುತ್ತಿದೆ. ಮನೆಯಲ್ಲಿ ಪುಟಾಣಿ ದೈತ್ಯೆಯೊಬ್ಬಳು ಓಡಾಡುತ್ತಿದ್ದಾಳೆ, ‘ಸಾಷಾ’ಳಿಗೆ ಹಾಯ್ ಹೇಳಿ’’ ಎಂದು ಅವರು ಬರೆದುಕೊಂಡಿದ್ದಾರೆ.

Samantha

ನಟಿ ಸಮಂತಾ ಹಂಚಿಕೊಂಡಿರುವ ಚಿತ್ರ

ಸಮಂತಾ ಅವರೊಂದಿಗೆ ಈಗಾಗಲೇ ಮನೆಯ ಸದಸ್ಯನಂತೆ ‘ಹ್ಯಾಷ್’ ಇದ್ದಾನೆ. ಈಗ ತಂದಿರುವ ‘ಸಾಷಾ’ ಆತನ ಸಹೋದರಿ ಎಂದು ಸಮಂತಾ ಬರೆದುಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಸಮಂತಾ ಹ್ಯಾಷ್, ಸಾಷಾರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಸಾಷಾಳ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಖ್ಯಾತ ತಾರೆಯರು ಸೇರಿದಂತೆ, ಅನೇಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸಮಂತಾ ಹಂಚಿಕೊಂಡಿರುವ ಪೋಸ್ಟ್:

View this post on Instagram

A post shared by S (@samantharuthprabhuoffl)

ಟಾಲಿವುಡ್ ನಟಿ ಸಮಂತಾ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಆದರೆ ಅವರ ಅಭಿಮಾನಿಗಳು ಇದ್ಯಾವುದಕ್ಕೂ ಸೊಪ್ಪು ಹಾಕಿಲ್ಲ. ನಟಿ ಹಂಚಿಕೊಳ್ಳುವ ಪೋಸ್ಟ್​ಗಳನ್ನು ನೋಡಿ ಅವರು ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಗಳ ವಿಷಯಕ್ಕೆ ಬಂದರೆ, ಸಮಂತಾ ಗುಣಶೇಖರ್ ನಿರ್ದೇಶನದ ‘ಶಾಕುಂತಲಮ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಯನತಾರಾ, ವಿಜಯ್ ಸೇತುಪತಿ ಅವರೊಂದಿಗೆ, ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರವೊಂದರಲ್ಲೂ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

ವಿಚ್ಛೇದನದ ವದಂತಿ ಬೆನ್ನಲ್ಲೇ ನಟಿ ಸಮಂತಾ ತೆಗೆದುಕೊಂಡ್ರು ಎರಡು ಮಹತ್ವದ ನಿರ್ಧಾರ

ಡಿಕೆ ರವಿ ಬಗ್ಗೆ 2 ದಿನದ ಹಿಂದೆ ಮಾತಾಡಿದ್ದ ಸಾಯಿ ಧರಮ್​ ತೇಜ್​ಗೆ ಭೀಕರ ಅಪಘಾತ; ಏನಿದು ಕಾಕತಾಳೀಯ?

(Samantha welcomes new member to the family and fans are happy for her cute little one)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada