ವಿಚ್ಛೇದನದ ವದಂತಿ ಬೆನ್ನಲ್ಲೇ ನಟಿ ಸಮಂತಾ ತೆಗೆದುಕೊಂಡ್ರು ಎರಡು ಮಹತ್ವದ ನಿರ್ಧಾರ

TV9 Digital Desk

| Edited By: Rajesh Duggumane

Updated on:Sep 10, 2021 | 5:59 PM

ಸಮಂತಾ ಅಕ್ಕಿನೇನಿ ಇತ್ತೀಚೆಗೆ ಮಾಧ್ಯಮದ ಜತೆ ಮಾತನಾಡುತ್ತಾ, ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಇದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ವಿಚ್ಛೇದನದ ವದಂತಿ ಬೆನ್ನಲ್ಲೇ ನಟಿ ಸಮಂತಾ ತೆಗೆದುಕೊಂಡ್ರು ಎರಡು ಮಹತ್ವದ ನಿರ್ಧಾರ
ನಟಿ ಸಮಂತಾ- ನಾಗ ಚೈತನ್ಯ

ನಾಗ ಚೈತನ್ಯ ಜತೆ ನಟಿ ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ, ಅವರ ಸಂಬಂಧ ಶೀಘ್ರವೇ ಮುರಿದು ಬೀಳಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಇದಕ್ಕೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸಮಂತಾ ಅವರಂತೂ ಆ ಬಗ್ಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಇನ್ನು, ಅಕ್ಕಿನೇನಿ ಕುಟುಂಬ ಮಾಧ್ಯಮದ ಎದುರು ಬರುತ್ತಿಲ್ಲ. ಈ ವದಂತಿಗಳ ಮಧ್ಯೆಯೇ ಸಮಂತಾ ಎರಡು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್​ ಖುಷಿಯಾಗಿದ್ದಾರೆ.

ಸಮಂತಾ ಅಕ್ಕಿನೇನಿ ಇತ್ತೀಚೆಗೆ ಮಾಧ್ಯಮದ ಜತೆ ಮಾತನಾಡುತ್ತಾ, ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಇದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ, ಈಗ ಅವರು ಈ ಆಲೋಚನೆ ಕೈಬಿಟ್ಟಿದ್ದಾರೆ. ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಬ್ಯುಸಿ ಇರುವ ಸಮಂತಾ, ಈಗ ಬಾಲಿವುಡ್​ನಿಂದ ಬರುತ್ತಿರುವ ಪ್ರಾಜೆಕ್ಟ್​ಗೂ ಒಕೆ ಎಂದಿದ್ದಾರೆ ಎನ್ನಲಾಗುತ್ತಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸಮಂತಾ ನಟಿಸಿದ್ದರು. ಅವರ ಅದ್ಭುತ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅಲ್ಲದೆ, ಹಿಂದಿ ಮಂದಿ ಸಮಂತಾ ನಟನೆಯನ್ನು ಇಷ್ಟಪಟ್ಟಿದ್ದರು. ಇದರ ಲಾಭ ಪಡೆಯೋಕೆ ಬಾಲಿವುಡ್​ನ ಕೆಲ ನಿರ್ಮಾಪಕರು ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಹೀಗಾಗಿ, ಸಮಂತಾಗೆ ಬಾಲಿವುಡ್​ ಕಡೆಯಿಂದ ಸಾಕಷ್ಟು ಆಫರ್​ಗಳು ಬರೋಕೆ ಆರಂಭವಾಗಿದೆ.

ರಾಜ್​ ಮತ್ತು ಡಿಕೆ ನಿರ್ದೇಶನ ಮಾಡುತ್ತಿರುವ ವೆಬ್​ ಸೀರಿಸ್​ ಒಂದರಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸೋಕೆ ಸಮಂತಾಗೆ ಆಫರ್​ ನೀಡಲಾಗಿದೆ. ಇದನ್ನು ದೊಡ್ಡ ಒಟಿಟಿ ಪ್ಲಾಟ್​ಫಾರ್ಮ್​ ನಿರ್ಮಾಣ ಮಾಡಲಿದೆಯಂತೆ. ಈ ಕಾರಣಕ್ಕೆ ಸಮಂತಾಗೆ ದೊಡ್ಡ ಸಂಭಾವನೆ ಕೂಡ ಸಿಗುವ ಸಾಧ್ಯತೆ ಇದೆ. ಇದರ ಜತೆಗೆ ಇನ್ನೂ ಒಂದೆರಡು ಪ್ರಾಜೆಕ್ಟ್​ಗಳ ಜತೆ ಮಾತುಕತೆ ನಡೆದಿದೆ.

ಎರಡು ಮೂರು ಹಿಂದಿ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಂಡರೆ ಬಹಳ ಸಮಯ ಮುಂಬೈನಲ್ಲೇ ಉಳಿಯಬೇಕಾಗುತ್ತದೆ. ಈ ಕಾರಣಕ್ಕೆ ಸಮಂತಾ ಮುಂಬೈನಲ್ಲಿ ಮನೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಮಂತಾ ಅವರು ಅಕ್ಕಿನೇನಿ ಸರ್​​ನೇಮ್​ಅನ್ನು ತೆಗೆದು ಹಾಕಿದ್ದರು. ಇದಾದ ನಂತರದಲ್ಲಿ ಅವರ ಸಂಸಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನಾಗಾರ್ಜುನ ಇಡೀ ಕುಟುಂಬದ ಜತೆ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆದರೆ, ಇಲ್ಲಿ ಸಮಂತಾ ಕಾಣಿಸಿರಲಿಲ್ಲ. ಈ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಈ ಬಗ್ಗೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ಡಿವೋರ್ಸ್ ವದಂತಿ ಮಧ್ಯೆಯೇ ಹಾಟ್ ಫೋಟೋಶೂಟ್​ನಲ್ಲಿ ಮಿಂಚಿದ ಸಮಂತಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada