Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್ ತೇಜ್; ಆದರೆ ಆಪ್ತರು ಹೇಳೋದೇ ಬೇರೆ
Sai Dharam Tej Bike Accident: ಬೈಕ್ ಅಪಘಾತದ ಬಳಿಕ ಸಾಯಿ ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿ ಆಗಿದೆ. ಆದರೆ ಈ ನಡುವೆ ಕುಟುಂಬದವರು ಮತ್ತು ಆಪ್ತರು ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ.
ಟಾಲಿವುಡ್ ನಟ ಸಾಯಿ ಧರಮ್ ತೇಜ್ ಅವರು ಬೈಕ್ ಅಪಘಾತಕ್ಕೆ ಒಳಗಾಗಿದ್ದು ಅವರ ಅಭಿಮಾನಿಗಳಿಗೆ ಕಹಿ ಸುದ್ದಿ ಕೇಳಿಬಂದಿದೆ. ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಸ್ಪೋರ್ಟ್ಸ್ ಬೈಕ್ನಲ್ಲಿ ಚಲಿಸುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬಲಗಣ್ಣು, ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಯಿ ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿ ಆಗಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಈ ನಡುವೆ ಕುಟುಂಬದವರು ಮತ್ತು ಆಪ್ತರು ಬೇರೆ ರೀತಿ ಹೇಳಿಕೆ ನೀಡುತ್ತಿದ್ದಾರೆ.
ಸಾಯಿ ಧರಮ್ ತೇಜ್ ಆರೋಗ್ಯದ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯೆ ನೀಡಿದ್ದಾರೆ. ‘ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರೂ ಕೂಡ ಹೆದರುವಂಥದ್ದು ಏನೂ ಇಲ್ಲ. ಆಮೇಲೆ ಎಲ್ಲವೂ ಗೊತ್ತಾಗಲಿದೆ’ ಎಂದು ಅವರು ಹೇಳಿದ್ದಾರೆ. ‘ಎರಡು ದಿನದ ಬಳಿಕ ಪೂರ್ಣ ಗುಣಮುಖ ಆಗಲಿದ್ದಾರೆ. ಗಂಭೀರ ಪರಿಸ್ಥಿತಿ ಏನಿಲ್ಲ’ ಎಂದು ಅಲ್ಲು ಅರವಿಂದ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಭೀಕರ ಅಪಘಾತಕ್ಕೆ ತುತ್ತಾದ ನಟ ಸಾಯಿ ಧರಂ ತೇಜ್: ಅತಿವೇಗದಲ್ಲಿ ಸ್ಪೋರ್ಟ್ಸ್ ಬೈಕ್ ಓಡಿಸಿದ್ದೇ ಕಾರಣ ಎಂಬ ಶಂಕೆ
‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ