ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅಭಿಮಾನಿಯಿಂದ ರೂಲ್ಸ್ ಬ್ರೇಕ್!

ಬೈಕ್ ಮೇಲೆ ಇದುವರೆಗೆ ಸುಮಾರು 42 ಕೇಸ್​ಗಳಿದ್ದು, 20,200 ರೂಪಾಯಿ ದಂಡ ಕಟ್ಟಬೇಕಿದೆ. ಯಾರಾದರೂ ಬೈಕ್ ಹಿಡಿದು ಈತನನ್ನು ಪ್ರಶ್ನಿಸಿದರೆ ರವಿಕಾಂತೇಗೌಡರ ಹೆಸರು ಹೇಳುತ್ತಾನಂತೆ.

ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅಭಿಮಾನಿಯಿಂದ ರೂಲ್ಸ್ ಬ್ರೇಕ್!
ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬೈಕ್ ಸವಾರ

ಬೆಂಗಳೂರು: ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ (Ravikanthe Gowda) ಅಭಿಮಾನಿಯೊಬ್ಬ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ. ಬೈಕ್ ಸವಾರನೊಬ್ಬ ರವಿಕಾಂತೇಗೌಡರ ಹೆಸರು ಮತ್ತು ಅವರ ಡೆಸಿಗ್ನೇಷನ್ ಹಾಕಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ತಿಳಿದುಬಂದಿದೆ. ಕೇವಲ ರವಿಕಾಂತೇಗೌಡರ ಹೆಸರು ಮಾತ್ರವಲ್ಲ, ಇದರ ಜೊತೆಗೆ ಪ್ರೆಸ್ ಅಂತಾನೂ ಹಾಕಿಕೊಂಡು ದಂಡ ಕಟ್ಟದೆ ನಗರದಲ್ಲಿ ಸುತ್ತಾಟ ನಡೆಸುತ್ತಿದ್ದಾನೆ.

KA 05 JS 2581 ಆಕ್ಟೀವಾ ಬೈಕ್ ಮೇಲೆ ಇದುವರೆಗೆ ಸುಮಾರು 42 ಕೇಸ್​ಗಳಿದ್ದು, 20,200 ರೂಪಾಯಿ ದಂಡ ಕಟ್ಟಬೇಕಿದೆ. ಯಾರಾದರೂ ಬೈಕ್ ಹಿಡಿದು ಈತನನ್ನು ಪ್ರಶ್ನಿಸಿದರೆ ರವಿಕಾಂತೇಗೌಡರ ಹೆಸರು ಹೇಳುತ್ತಾನಂತೆ. ರೂಲ್ಸ್ ಬ್ರೇಕ್ ಮಾಡಿದಾಗ ಪೊಲೀಸರು ಅನೇಕ ಪೋಟೋಗಳು ತೆಗೆದಿದ್ದಾರೆ. ಯಾವ ಫೋಟೋದಲ್ಲಿಯೂ ಬೈಕ್ ಸವಾರ ಹೆಲ್ಮೆಟ್ ಧರಿಸಿಲ್ಲ. ಸಂಚಾರ ನಿಯಮಗಳನ್ನು ಪಾಲಿಸಿಲ್ಲ. ಬೈಕ್ ಡೀಟೆಲ್ಸ್ ನೋಡಿದರೆ ಪರಮೇಶ ಎನ್ನುವ ಹೆಸರು ತೋರಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಅಪ್ರಾಪ್ತರೇ ಹೆಚ್ಚು
ಬೈಕ್ ವ್ಹೀಲಿಂಗ್ ಅಭಿಯಾನದಲ್ಲಿ ವಶಪಡಿಸಿಕೊಳ್ಳಲಾದವರ ಪೈಕಿ ಅಪ್ರಾಪ್ತರೇ ಹೆಚ್ಚಾಗಿ ಇದ್ದಾರೆ. ಹೀಗಾಗಿ ಅಪ್ರಾಪ್ತ ಯುವಕರ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ದಿನ ಪೋಷಕರಿಗೆ ಯಾವ ವಯಸ್ಸಿಗೆ ಮಕ್ಕಳಿಗೆ ವಾಹನ ನೀಡಬೇಕೆಂದು ಕೌನ್ಸೆಲಿಂಗ್ ನೀಡುತ್ತೇವೆ. ಬಳಿಕವೂ ಅಂತಹುದೇ ಘಟನೆ ಮುಂದುವರೆದಲ್ಲಿ 5-10 ಲಕ್ಷದ ಬಾಂಡ್ ಅಥವಾ ಜೈಲಿಗೆ ಕಳಿಸುತ್ತೇವೆ. ಅದೇ ರೀತಿ ಅಪ್ರಾಪ್ತರಲ್ಲದಿದ್ದರೂ ಅವರಿಗೂ ಕೌನ್ಸೆಲಿಂಗ್ ನಡೆಸುತ್ತೇವೆ. ಜತರೆಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೂ ಕೌನ್ಸೆಲಿಂಗ್ ನಡೆಸುತ್ತೇವೆ. ವಾಹನಗಳ ಅಪಾಯಕಾರಿ ಚಾಲನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಇದನ್ನೂ ಓದಿ

9/11ರ ಮಾದರಿಯಲ್ಲೇ ದಾಳಿ ಬೆದರಿಕೆ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ

ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?

(Fan of Traffic Police Commissioner Ravikanthe Gowda has violated traffic rules in Bengaluru)

Click on your DTH Provider to Add TV9 Kannada