ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ

TV9 Digital Desk

| Edited By: ಸಾಧು ಶ್ರೀನಾಥ್​

Updated on:Sep 11, 2021 | 2:48 PM

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಹುಕ್ಕೇರಿ ಹಿರೇಮಠ ಪ್ರದಾನ ಮಾಡುವ ವೀರಭದ್ರೇಶ್ವರ ಪ್ರಶಸ್ತಿ ಇದಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ವೀರಭದ್ರೇಶ್ವರ ಜಯಂತಿ ಇದೆ. ವೀರಭದ್ರೇಶ್ವರ ಜಯಂತಿಗೆ ಹಾಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಭಾದ್ರಪದ ಮಾಸ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ ಯಾರೂ ಸಹ ವೀರಭದ್ರೇಶ್ವರ ಜಯಂತಿ ಮಾಡ್ತಿರಲಿಲ್ಲ. ಎಲ್ಲಾ […]

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪ್ರಥಮ ವೀರಭದ್ರೇಶ್ವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಹುಕ್ಕೇರಿ ಹಿರೇಮಠ ಪ್ರದಾನ ಮಾಡುವ ವೀರಭದ್ರೇಶ್ವರ ಪ್ರಶಸ್ತಿ ಇದಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಬೆಳಗಾವಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 14ರಂದು ವೀರಭದ್ರೇಶ್ವರ ಜಯಂತಿ ಇದೆ. ವೀರಭದ್ರೇಶ್ವರ ಜಯಂತಿಗೆ ಹಾಲಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಭಾದ್ರಪದ ಮಾಸ ಮೊದಲ ಮಂಗಳವಾರ ವೀರಭದ್ರೇಶ್ವರ ಜಯಂತಿ ಮಾಡಬೇಕೆಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ ಯಾರೂ ಸಹ ವೀರಭದ್ರೇಶ್ವರ ಜಯಂತಿ ಮಾಡ್ತಿರಲಿಲ್ಲ. ಎಲ್ಲಾ ಸಮುದಾಯದವರು ವೀರಭದ್ರೇಶ್ವರ ಜಯಂತಿ ಆಚರಿಸಬೇಕೆಂದಾಗ ಮುಂದೆ ಬಂದಿದ್ದು ವೀರಶೈವ ಲಿಂಗಾಯತ ಸಂಘಟ‌ನಾ ವೇದಿಕೆ. ಹಾಗಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವೀರಭದ್ರೇಶ್ವರ ಜಯಂತಿಯನ್ನು ಈ ವರ್ಷದಿಂದ ಆಯೋಜನೆ ಮಾಡಲಾಗಿದೆ.

ಬೆಂಗಳೂರು ಮಹಾನಗರದಲ್ಲಿ ವೀರಭದ್ರೇಶ್ವರ ಜಯಂತಿ ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 14ರಂದು ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ವೀರಭದ್ರೇಶ್ವರ ಜಯಂತಿಗೆ ಚಾಲನೆ ನೀಡಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ವೀರಭದ್ರೇಶ್ವರ ಜಯಂತಿಗೆ ಚಾಲನೆ ನೀಡಲಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ತಿಳಿಸಿದ್ದಾರೆ.

ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ವೀರಭದ್ರೇಶ್ವರ ಪ್ರಶಸ್ತಿ ಸ್ಥಾಪನೆ ಮಾಡಲಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ (B S Yediyurappa) ಪ್ರಸಕ್ತ ವರ್ಷದ ವೀರಭದ್ರೇಶ್ವರ ಪ್ರಶಸ್ತಿ (Veerabhadreshwara Award) ನೀಡಿ ಪುರಸ್ಕರಿಸಲಾಗುವುದು. ರಂಭಾಪುರಿ ಜಗದ್ದುರುಗಳ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಎಲ್ಲರೂ ಒಗ್ಗೂಡಿ ಸಮಾಜ ಕಟ್ಟೋಣ: ಚಂದ್ರಶೇಖರ ಶಿವಾಚಾರ್ಯ ಶ್ರೀ

ಇನ್ನು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ನನಗೆ ಎಲ್ಲರನ್ನೂ ಒಂದು ಮಾಡೋದು ಅಷ್ಟೇ ಗೊತ್ತು, ಉಳಿದಿದ್ದು ನನಗೆ ಗೊತ್ತಿಲ್ಲ. ಎಲ್ಲರೂ ಒಗ್ಗೂಡಿ ಸಮಾಜ ಕಟ್ಟೋದು. ಆ ನಿಟ್ಟಿನಲ್ಲಿ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆಂಬ ಆಶಾಭಾವನೆ ಇದೆ ಎಂದರು.

ನಾನು ಆಶಾವಾದಿ, ಕಟ್ಟುವ ಕೆಲಸದಲ್ಲಿ ಸದಾ ಜೊತೆಗೆ ಇರ್ತೀನಿ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಅದರ ಬಗ್ಗೆ ಚರ್ಚೆ ಮಾಡಲು ದೊಡ್ಡ ದೊಡ್ಡ ಜಗದ್ಗುರುಗಳು ಸ್ವಾಮೀಜಿಗಳು ಇದ್ದಾರೆ ಎಂದು ಇದೇ ವೇಳೆ ಅವರು ಸೂಕ್ಷ್ಮವಾಗಿ ಹೇಳಿದರು.

ಪಕ್ಷಬೇಧ, ಜಾತಿಬೇಧ ಮರೆತು ಬೆಳಗಾವಿ ಅಭಿವೃದ್ಧಿ ಮಾಡಲಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಲು ಆಗ್ರಹ ಕೇಳಿ ಬಂದಿರುವ ವಿಚಾರವಾಗಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿ ಅಂತಾ ಎಲ್ಲರೂ ಹೇಳ್ತಿದಾರೆ. ಆ ಸಮುದಾಯ – ಈ ಸಮುದಾಯ ಅನ್ನುವ ಬದಲು ಪಕ್ಷಬೇಧ ಮರೆತು ಬೆಳಗಾವಿ ಅಭಿವೃದ್ಧಿ ಮಾಡಲಿ. ಪಕ್ಷಬೇಧ, ಜಾತಿಬೇಧ ಮರೆತು ಬೆಳಗಾವಿ ಗಟ್ಟಿಗೊಳಿಸಲು ಪ್ರಯತ್ನಿಸಿ. ಸಮುದಾಯ ವಿಚಾರಕ್ಕೆ ಬಂದಾಗ ಯಾವ ಸಮುದಾಯಕ್ಕೆ ಏನ್ ಬೇಕು ಆಯಾ ರಾಜಕೀಯ ಪಕ್ಷಗಳು ಮಾಡ್ತವೆ ಎಂದುಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಸ್ವಾಮೀಜಿ ಹೇಳಿದರು.

Also Read: ನಮ್ಮ ಸಿನಿಮಾದಲ್ಲಿ ಸಿಎಂ ಬೊಮ್ಮಾಯಿ ಹೀರೋ, ಯಡಿಯೂರಪ್ಪ ನಿರ್ದೇಶಕ: ಸಚಿವ ಶ್ರೀರಾಮುಲು ವ್ಯಾಖ್ಯಾನ

Also Read: ತಾಲಿಬಾನ್​ಗೆ ಧರ್ಮ ಸಂಕಟ! ಈ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿರುವ ಭಾರತ ಕೈಗೊಳ್ಳುವುದೇ ದಿಟ್ಟ ಕ್ರಮ?

(Former chief minister bs yediyurappa to be honoured with maiden veerabhadreshwara award)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada