ತಾಲಿಬಾನ್​ಗೆ ಧರ್ಮ ಸಂಕಟ! ಈ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿರುವ ಭಾರತ ಕೈಗೊಳ್ಳುವುದೇ ದಿಟ್ಟ ಕ್ರಮ?

UNSC Resolution 2593: ಈ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತಕ್ಕೆ ಈ ಹಿಂದೆಯೇ, ಸಕಾಲದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚುಕ್ಕಾಣಿ ಹಿಡಿಯುವ ಅವಕಾಶ ಪ್ರಾಪ್ತಿಯಾಗಿದೆ. ಆ ಮಂತ್ರ ದಂಡವನ್ನು ಝಳಪಿಸುವುದಕ್ಕೆ ಈಗ ಕಾಲ ಪಕ್ವವಾಗಿದೆ. ತನ್ಮೂಲಕ ಉಗ್ರವಾದದ ವಿರುದ್ಧ ಹೋರಾಡುವುದಕ್ಕೆ ಸದವಕಾಶ ಕೂಡಿಬಂದಿದೆ. ಕೆಚ್ಚೆದೆಯಿಂದ ಈಗ ಭಯೋತ್ಪಾದನೆ ವಿರುದ್ಧ ಖಡಕ್ ನಿರ್ಣಯಗಳನ್ನು ಕೈಗೊಳ್ಳಬೇಕಿದೆ.

ತಾಲಿಬಾನ್​ಗೆ ಧರ್ಮ ಸಂಕಟ! ಈ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿರುವ ಭಾರತ ಕೈಗೊಳ್ಳುವುದೇ ದಿಟ್ಟ ಕ್ರಮ?
ಉಗ್ರ ಧರ್ಮ ಸಂಕಟದಲ್ಲಿರುವ ತಾಲಿಬಾನ್​ಗೆ ಇಕ್ಕಟ್ಟಿನ ಪರಿಸ್ಥಿತಿ! ಇದಕ್ಕೆ ಕಾರಣವಾಗಿರುವುದು ಭಾರತ ಎಂಬುದು ಗಮನಾರ್ಹ
Follow us
ಸಾಧು ಶ್ರೀನಾಥ್​
|

Updated on:Sep 11, 2021 | 12:28 PM

ಮತಾಂಧತೆಯ ಸಂಕಟದಲ್ಲಿ ಸಿಲುಕಿರುವ ತಾಲಿಬಾನಿಗಳಿಗೆ ​ಧರ್ಮದ ಸೋಗಿನಲ್ಲಿ ಉಗ್ರವಾದ ಪೋಷಿಸುವುದೇ ಆಪದ್ಧರ್ಮವಾಗಿದೆ. ಅದೇ ಈಗ ತಾಲಿಬಾನಿಗಳಿಗೆ ಧರ್ಮಸಂಕಟದಲ್ಲಿ ಸಿಲುಕುವ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣವಾಗಿರುವುದು ಭಾರತ ಎಂಬುದು ಗಮನಾರ್ಹ ಮತ್ತು ಕುತೂಹಲಕಾರಿ ಸಂಗತಿಯಾಗಿದೆ. ಎರಡು ದಶಕಗಳಿಂದ ತನ್ನ ನೆಲದಲ್ಲಿ ಝಂಡಾ ಹೂಡಿದ್ದ ಅಮೆರಿಕದ ಸೇನಾ ಪಡೆಗಳನ್ನು ಹೊರದಬ್ಬಿರುವ ತಾಲಿಬಾನ್​ ಅದೇ ಅತ್ಯುತ್ಸಾಹದಲ್ಲಿ ಈಗ ಅಫ್ಘಾನಿಸ್ತಾನದಲ್ಲಿ ತನ್ನ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿಕೊಂಡಿದೆ. ಅದು ಇಂದಿನಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಿಬೇಕಿತ್ತು. ಆದರೆ ಹಾಗೆ ಮಾಡುವುದು ಅಮಾನವೀಯ ಎಂದು ಅಮೆರಿಕ ಸೇರಿದಂತೆ ತಾಲಿಬಾನ್​ನ ಮಿತ್ರ ರಾಷ್ಟ್ರಗಳು ಜರಿದು, ಬುದ್ಧಿವಾದ ಹೇಳಿದ ಬಳಿಕ ಸದ್ಯದ ಮಟ್ಟಿಗೆ ತಾಲಿಬಾನ್ ಸರ್ಕಾರ ರಚನೆ ಮುಂದೂಡಲ್ಪಟ್ಟಿದೆ. ಆದರೆ ಈ ಮಧ್ಯೆ, ಉಗ್ರವಾದವನ್ನೇ ಅಪ್ಪಿಕೊಂಡು ಧರ್ಮಸಂಕಟದಲ್ಲಿ ತೊಳಲಾಡುತ್ತಿರುವ ತಾಲಿಬಾನ್​ಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ! ಇದಕ್ಕೆ ಕಾರಣವಾಗಿರುವುದು ಭಾರತ ಎಂಬುದು ಗಮನಾರ್ಹ. ಏನದು ಇಕ್ಕಟ್ಟಿನ ಪರಿಸ್ಥಿತಿ ನೋಡೋಣ ಬನ್ನೀ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಸಂಬಂಧ ತಾಲಿಬಾನ್ ಈಗಾಗಲೇ ಘೋಷಿಸಿಕೊಂಡಿರುವ ​ಸಚಿವರು ಸೇರಿದಂತೆ ಅನೇಕ ನಾಯಕರುಗಳ ಹೆಸರುಗಳು ಅದಾಗಲೇ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ರಾರಾಜಿಸುತ್ತಿದೆ. ಇದು ಭಾರತ ಸೇರಿದಂತೆ ಶಾಂತಿ ಬಯಸುವ ಎಲ್ಲ ರಾಷ್ಟ್ರಗಳ ಉಗ್ರ ಕೆಂಗೆಣ್ಣಿಗೆ ಗುರಿಯಾಗಿದೆ. ಸರ್ಕಾರಿ ಮಟ್ಟದಲ್ಲೇ ಉಗ್ರರು ಆಡಳಿತದ ಚುಕ್ಕಾನೀ ಹಿಡಿದರೆ ಹೇಗೆ? ಅದೂ ವಿಶ್ವಸಂಸ್ಥೆಯಿಂದಲೇ ಘೋಷಿಸಲ್ಪಟ್ಟ ಉಗ್ರರು ಆಡಳಿತ ನಡೆಸತೊಡಗಿದರೆ ಗತಿಯೇನು? ಎಂದು ತಮ್ಮತಮ್ಮಲ್ಲೇ ಶಾಂತಿದೂತರು ಮಾತನಾಡಿಕೊಳ್ಳುವಂತಾಗಿದೆ. ಅದು ವಾಸ್ತವೂ ಹೌದು.

ಈ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತಕ್ಕೆ ಈ ಹಿಂದೆಯೇ, ಸಕಾಲದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚುಕ್ಕಾಣಿ ಹಿಡಿಯುವ ಅವಕಾಶ ಪ್ರಾಪ್ತಿಯಾಗಿದೆ. ಆ ಮಂತ್ರ ದಂಡವನ್ನು ಝಳಪಿಸುವುದಕ್ಕೆ ಈಗ ಕಾಲ ಪಕ್ವವಾಗಿದೆ. ತನ್ಮೂಲಕ ಉಗ್ರವಾದದ ವಿರುದ್ಧ ಹೋರಾಡುವುದಕ್ಕೆ ಸದವಕಾಶ ಕೂಡಿಬಂದಿದೆ. ಕೆಚ್ಚೆದೆಯಿಂದ ಈಗ ಭಯೋತ್ಪಾದನೆ ವಿರುದ್ಧ ಖಡಕ್ ನಿರ್ಣಯಗಳನ್ನು ಕೈಗೊಳ್ಳಬೇಕಿದೆ.

ಉಗ್ರರ ನೆರಳಿನಲ್ಲಿ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ತಾಲಿಬಾನಿಗಳಿಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಕಳೆದ ಮಾಸಾಂತ್ಯ (2021 ಆಗಸ್ಟ್​ 30) ಭಾರತದ ಅಧಿಪತ್ಯದಲ್ಲಿ ಕೈಗೊಂಡಿರುವ ನಿರ್ಣಯವೊಂದು ಬಿಸಿತುಪ್ಪವಾಗಿ ಪರಿಣಮಿಸಬೇಕಿದೆ. ರಷ್ಯಾ ಮತ್ತು ಚೀನಾದ ಅನುಪಸ್ಥಿತಿಯಲ್ಲಿ ಈ ನಿರ್ಣಯ ಹೊರಬಿದ್ದಿರುವುದು ಇನ್ನೂ ಗಮನಾರ್ಹವಾಗಿದೆ. ಏಕೆಂದರೆ ಈಗ ರಷ್ಯಾ ಮತ್ತು ಚೀನಾಗೆ ತಾಲಿಬಾನಿಗಳು ಯಾವುದೇ ಬೇನಿಯಾಗಿಲ್ಲ; ಬದಲಿಗೆ ಹಿತವಾಗಿ ಪರಿಣಮಿಸಿದೆ.

ಭಾರತದ ನೇತೃತ್ವದಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವದಲ್ಲಿ ಕೈಗೊಂಡಿರುವ ನಿರ್ಣಯವೆಂದರೆ ತಾಲಿಬಾನ್ ಸರ್ಕಾರದಲ್ಲಿ ಕರಿನೆರಳಿನಂತೆ ನುಸುಳಿರುವ ಭಯೋತ್ಪಾದಕರನ್ನು (Taliban shadowy leaders) ಸರ್ಕಾರದಿಂದ ಹೊರಗಿಡಬೇಕು ಎಂಬ ಮಹತ್ವದ, ಅಗಾಧ ಪರಿಣಾಮ ಬೀರುವ ನಿರ್ಣಯವಾಗಿದೆ. ಅದುವೇ UN Security Council UNSC 2593 ನಿರ್ಣಯ.

ಭಾರತದ ಸಾರಥ್ಯದಲ್ಲಿ ಆಗಸ್ಟ್​ 30ರಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 1267ನೇ ಸಮಿತಿಯು (UN Security Council 1267 Committee) ಹೊರಡಿಸಿರುವ ಕಾನೂನಾತ್ಮಕ ನಿರ್ಬಂಧಗಳು/ ನಿಷೇಧಗಳ (sanctions list) ಪ್ರಕಾರ ತಾಲಿಬಾನ್ ಸರ್ಕಾರದಲ್ಲಿರುವ 33 ಸಚಿವರ ಪೈಕಿ 17 ಮಂದಿ ಉಗ್ರಪಟ್ಟ ಹಣೆಪಟ್ಟಿಯೊಂದಿಗೆ ದಿಗ್ಬಂಧನಕ್ಕೆ ಈಡಾಗಿದ್ದಾರೆ.

ಕರ್ಮಠ ಮನಸಿನ ಷರಿಯಾ ಧರ್ಮಕ್ಕೆ ಅಂಟಿಕೊಂಡಿರುವ ಸುನ್ನಿ ಇಸ್ಲಾಂನ ತಾಲಿಬಾನ್​ ಸರ್ಕಾರಕ್ಕೆ ಈ 17 ಮಂದಿ ಸೇರ್ಪಡೆಯಾಗಬೇಕು ಅಂದರೆ ಮೊದಲು ಅವರ ವಿರುದ್ಧ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಹೊರಡಿಸಿರುವ ಕಾನೂನಾತ್ಮಕ ನಿರ್ಬಂಧಗಳನ್ನು ಕಳಚಿಕೊಳ್ಳಬೇಕು. ಗಮನಾರ್ಹ ಸಂಗತಿಯೆಂದರೆ ಭಾರತದ ಅಧಿಪತ್ಯವು 2022ರ ಡಿಸೆಂಬರ್​​ವರೆಗೂ ಚಾಲ್ತಿಯಲ್ಲಿರಲಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 2593 ನೇ ನಿರ್ಣಯದ 2ನೆಯ ಪ್ಯಾರಾ (UNSC resolution 2593) ಪ್ರಜಾಪ್ರಭುತ್ವ ಆಳ್ವಿಕೆಯ ರಾಷ್ಟ್ರಗಳಿಗೆ ವರದಾನವಾಗಿದೆ. ಅದೇನೆಂದರೆ ಅಫ್ಘಾನಿಸ್ತಾನದ ನೆಲೆಯನ್ನು ಬಳಸಿಕೊಂಡು ಬೇರೆ ಯಾವುದೇ ರಾಷ್ಟ್ರವನ್ನು ಬೆದರಿಸುವುದು ಅಥವಾ ಯಾವುದೇ ದೇಶದ ಮೇಲೆ ದಾಳಿ ಮಾಡಲು ಅಥವಾ ಅಂತಹ ಕುಕೃತ್ಯಕ್ಕೆ ಆಶ್ರಯ ನೀಡುವುದು ಅಥವಾ ಭಯೋತ್ಪಾದಕರಿಗೆ ತರಬೇತಿ ನೀಡುವುದು ಅಥವಾ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ಆರ್ಥಿಕ ನೆರವು ನೀಡುವುದು ಅಸಾಧುವಾಗುತ್ತದೆ. ಹಾಗಾಗಿ ಅಫ್ಘಾನಿಸ್ತಾನದ ನೆಲೆಯನ್ನು ಇಂತಹ ಕುಕೃತ್ಯಗಳಿಗೆ ಬಳಸಲೇಬಾರದು ಎಂದು ಆ ಮಹತ್ವದ ನಿರ್ಣಯದಲ್ಲಿ ಹೇಳಲಾಗಿದೆ.

ಅಷ್ಟೇ ಅಲ್ಲ ಈ ಹಿಂದೆಯೂ ಭಯೋತ್ಪಾದಕತೆ ವಿರುದ್ಧದ ನಿರ್ಣಯದಲ್ಲಿ 1999ರಲ್ಲಿ ಕೈಗೊಳ್ಳಲಾಗಿರುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 1267ನೇ ನಿರ್ಣಯದಲ್ಲಿ (UNSC resolution 1267) ಅಫ್ಘಾನಿಸ್ತಾನದ ನೆಲೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಬಗ್ಗೆ ಪುನರುಚ್ಚರಿಸುತ್ತಾ ಭಯೋತ್ಪಾದನೆಯಲ್ಲಿ ತೊಡಗುವ ಅಥವಾ ಪೋಷಿಸುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧವೂ ಕ್ರಮ ಜರುಗಿಸಬಹುದು ಎಂಬ ಮತ್ತೊಂದು ಮಹತ್ವದ ನಿರ್ಣಯವೂ ಅಡಗಿದೆ! ಅಲ್ಲಿಗೆ ಭಯೋತ್ಫಾದನೆ ವಿರುದ್ಧ ಹೋರಾಡಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧಿನಾಯಕನಾಗಿ ಭಾರತ ಈಗ ಅಸ್ತ್ರ ಝಳಪಿಸಬಹುದಾಗಿದೆ.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ತಾಲಿಬಾನ್​ ಅನ್ನು ಭಯೋತ್ಪಾದಕ ಸಂಘಟನೆ ಎಂದು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಘೋಷಿಸಿಲ್ಲ. ಆದರೆ ತಾಲಿಬಾನ್​ನ ಅನೇಕ ನಾಯಕರನ್ನು UNSC resolution 1267 ಅಡಿ ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ಇದರಲ್ಲಿ ಹಾಲಿ ತಾಲಿಬಾನ್ ಸರ್ಕಾರದಲ್ಲಿ​ ಒಳಾಡಳಿತ ಸಚಿವನಾಗಿ ನೇಮಕಗೊಂಡಿರುವ ಸಿರಾಜುದ್ದೀನ್​ ಹಖ್ಖಾನಿ (Interior Minister Sirajuddin Haqqani) ಕುಖ್ಯಾತ ವ್ಯಕ್ತಿಯಾಗಿದ್ದಾನೆ. ಅಷ್ಟೇ ಅಲ್ಲ ವಿಶ್ವ ಸಂಸ್ಥೆ ಮತ್ತು ಯುಎಸ್ ವಿದೇಶಾಂಗ ಇಲಾಖೆಯು ​(N and US Department of State) ಹಖ್ಖಾನಿ ಜಾಲದ ಮುಖ್ಯಸ್ಥನ ತಲೆಯ ಮೇಲೆ 50 ಲಕ್ಷ ಡಾಲರ್​ ಬಹುಮಾನವನ್ನೂ ಘೋಷಿಸಿದೆ.

ತಾಲಿಬಾನಿ ಭಯೋತ್ಪಾದಕ ಜಾಲದ ಉಳಿದ ಕುಖ್ಯಾತರೆಂದರೆ ಅಬ್ದುಲ್​ ಹಖ್ ವಾಸಿಖ್- ಈತ ಬೇಹುಗಾರಿಕೆ ಮುಖ್ಯಸ್ಥ(head of intelligence). ಮೊಹಮ್ಮದ್ ಫಝಲ್ – ರಕ್ಷಣಾ ಉಪ ಸಚಿವ (Deputy Minister for Defence), ಖೈರುಲ್ಲಾ ಖೈರ್​​ಖ್ವಾ​ – ಮಾಹಿತಿ ಮತ್ತು ಪ್ರಸಾರ ಸಚಿವ (Minister of Information and Broadcasting), ನೂರುಲ್ಲಾ ನೂರಿ – ಗಡಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ (Minister for Border and Tribal Affairs). ಈ ಕುಖ್ಯಾತರೆಲ್ಲಾಅಫ್ಘಾನಿಸ್ತಾನದಲ್ಲಿರುವ ಹಾಲಿ ತಾಲಿಬಾನಿ ಸರ್ಕಾರದಲ್ಲಿ ಸಚಿವರುಗಳು!

ಸಿರಾಜುದ್ದೀನ್​ ಹಖ್ಖಾನಿ ಇವರಿಗೆಲ್ಲಾ ನೆರಳಾಗಿ ಕಾಯುವ ಕೆಲಸದಲ್ಲಿದ್ದು, ಉಳಿದ ನಾಲ್ವರನ್ನು ಬರಾಕ್​ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದಾಗ ಗ್ವಾಟಾನಮೊ ಕೊಲ್ಲಿ ಜೈಲಿನಿಂದ (Guantanamo Bay detention facility) ಬಿಡುಗಡೆ ಮಾಡಲಾಗಿದೆ. ಅಮೆರಿಕಾದ ಸೇನೆ ಬಿಟ್ಟಿದ್ದ ಯೋಧನನ್ನು (US Army deserter) ವಾಪಸ್​ ಪಡೆಯಲು ವಿನಿಮಯದ ಅಂಗವಾಗಿ ಈ ನಾಲ್ವರು ದುರುಳುರನ್ನು ಜೈಲಿಂದ ಬಿಡುಗಡೆ ಮಾಡಲಾಗಿತ್ತು.

ಇಷ್ಟೆಲ್ಲಾ ಹೇಳಿ ಮೇಲೆಯೂ ಈ ದುರುಳರು ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಧಿಕ್ಕರಿಸಿ (Violation of 2593 resolution) ತಾಲಿಬಾನಿ ಸರ್ಕಾರದಲ್ಲಿ ಆಡಳಿತ ನಡೆಸತೊಡಗಿದರೆ ವಿಶ್ವಸಂಸ್ಥೆಗೆ ದಿಗ್ಬಂಧನಗಳನ್ನು ಅನ್ವಯಗೊಳಿಸುವುದು ಅನಿವಾರ್ಯವಾಗುತ್ತದೆ. ಅದರಲ್ಲೂ ಸುನ್ನಿ ಇಸ್ಲಾಂ ಸಂಘಟನೆಯು ಪಾಕಿಸ್ತಾನದ ಅಲ್​ ಖೈದಾ, ಜೈಷೆ ಮೊಹಮದ್, ಲಷ್ಕರ್ ಎ ತೊಯ್ಬಾ ಮತ್ತು ತೆಹ್ರೀಕ್ ಎ ತಾಲಿಬಾನ್ ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣಗಳಾಗಿ ಆಶ್ರಯ ನೀಡಿದರೆ ಅದು ನೇರವಾಗಿ ತಾಲಿಬಾನ್​ ಸರ್ಕಾರದ ಮೇಲೆ ದಿಗ್ಬಂಧನ ಘೋಷಿಸಿವುದಕ್ಕೆ ಭಾರತ ನಾಯಕತ್ವದ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಸ್ತ್ರವಾಗಲಿದೆ.

ಗಮನಾರ್ಹವೆಂದರೆ ಈ ಉಗ್ರ ಸಂಘಟನೆಗಳೆಲ್ಲಾ ಸಾರ್ವಜನಿಕವಾಗಿಯೇ ತಾಲಿಬಾನ್ ಮುಖ್ಯಸ್ಥ ಹಿಬಾತುಲ್ಲಾ ಅಕುಂದಝಾದನಿಗೆ (Taliban chief Hibatullah Akundzada) ಬೆಂಬಲ ಘೋಷಿಸಿದೆ. ಇನ್ನು ಜೈಷೆ ಮೊಹಮದ್ (JeM chief Mufti Abdul Rauf Azhar aka MARA) ಮುಖ್ಯಸ್ಥ ಮುಫ್ತಿ ಅಬ್ದುಲ್​ ರಾಫ್ ನನ್ನು ಕಳೆದ ತಿಂಗಳು ಇವರೆಲ್ಲಾ ಕಂದಹಾರ್​​ನಲ್ಲಿ ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:  ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು? ಇದನ್ನೂ ಓದಿ:  ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ

(UN Security Council Resolution UNSC 2593 is mantra for India for delisting Taliban shadowy leaders from Afghanistan government)

Published On - 12:22 pm, Sat, 11 September 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್