ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ

ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ
ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ

ವಿಶ್ವ ಸಂಸ್ಥೆಯಿಂದ ಭಯೋತ್ಪಾದಕರು ಎಂದು ಘೋಷಿತವಾಗಿರುವ ಉಗ್ರರಿಂದ ತುಂಬಿತುಳುಕುತ್ತಿರುವ ಕಟ್ಟರ್​ ಮತೀಯ ತಾಲೀಬಾನ್​ ಗ್ಯಾಂಗ್​ ಅಫ್ಘಾನಿಸ್ತಾನದಲ್ಲಿ ಅಧಿಕೃತವಾಗಿ ಅಧಿಕಾರಕ್ಕೆ ಏರಲು (Afghanistan government inauguration ) ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲವೂ ತಾಲೀಬಾನಿಗಳ ತಾಳಕ್ಕೆ ತಕ್ಕಂತೆ ನಡೆಯುವ ಹಾಗಿದ್ದರೆ ಸೆಪ್ಟೆಂಬರ್​ 11 ಅಂದರೆ ಇಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರದ ಗದ್ದುಗೆ ಏರಬೇಕಿತ್ತು. ವಾಸ್ತವವಾಗಿ ಸೆಪ್ಟೆಂಬರ್​ 11 ಅವಳಿ ಗೋಪುರಗಳ ಮೇಲೆ (September 11) ಬಿನ್​ ಲಾಡೆನ್​ ನಡೆಸಿದ ಪೈಶಾಚಿಕ ದಾಳಿಯ ವಾರ್ಷಿಕ. 20 ವರ್ಷಗಳ ಹಿಂದೆ ನಡೆದ ಘನಘೋರ ಕೃತ್ಯದಲ್ಲಿ ಅಮೆರಿಕದಲ್ಲಿ ಲಾಡೆನ್​ ಗ್ಯಾಂಗ್​ ಭೀಕರ ದಾಳಿ ನಡೆಸಿತ್ತು. ಆ ದಿನವನ್ನು ಸಂಸ್ಮರಿಸುವ ನಿಟ್ಟಿನಲ್ಲಿ ಇದೇ ತಾಲಿಬಾನಿಗಳು ಇಂದು ಅಫ್ಘಾನಿಸ್ತಾನದಲ್ಲಿ ತಮ್ಮ ತಾಲಿಬಾನ್ ಸರ್ಕಾರ ಉದ್ಘಾಟನೆ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ ಅದೀಗ ಪೋಸ್ಟ್​ಪೋನ್​ ಆಗಿದೆ ಎಂದು ವರದಿಗಳು ತಿಳಿಸಿವೆ.

ತಾಲಿಬಾನ್ ತನ್ನ ಮೈತ್ರಿಗಳ (Taliban Allies) ಒತ್ತಡಕ್ಕೆ ಮಣಿದಿದ್ದು, ಸೆಪ್ಟೆಂಬರ್​ 11 ದಾಳಿಯ ವಾರ್ಷಿಕ ದಿನದಂದೇ ಸಾಂಕೇತಿಕವಾಗಿ ಅಧಿಕಾರ ಹಿಡಿಯುವ ಪ್ರಯತ್ನದಿಂದ ಹಿಂದೆ ಸರಿದಿದೆ ಎಂದು ವರದಿಗಳು ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಹವಣಿಸುತ್ತಿರುವ ತಾಲಿಬಾನ್ ಸೆ.11ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ಘೋಷಿಸಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್ ​ಖೈದಾ ಉಗ್ರರು ದಾಳಿ ನಡೆಸಿದ ದಿನದಂದು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದು ತಾಲಿಬಾನ್​ ಉದ್ದೇಶವಾಗಿತ್ತು.

ಅಧಿಕಾರ ಸ್ವೀಕಾರ ಸಮಾರಂಭಕ್ಕೆ ತಮ್ಮ ಪರ ಸಹಾನುಭೂತಿ ಹೊಂದಿರುವ ಆರು ಪ್ರಮುಖ ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿತ್ತು. ವರದಿಗಳ ಪ್ರಕಾರ ರಷ್ಯಾ, ಚೀನಾ, ಟರ್ಕಿ, ಇರಾನ್, ಪಾಕಿಸ್ತಾನ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಆಹ್ವಾನ ಕಳುಹಿಸಿದೆ. ವಿದೇಶಾಂಗ ವ್ಯವಹಾರದಲ್ಲಿ ಈ ಮೂಲಕ ತನ್ನ ಹೆಜ್ಜೆಯನ್ನು ದೃಢಪಡಿಸಿಕೊಳ್ಳಲು ತಾಲಿಬಾನ್ ಯತ್ನಿಸಿದೆ.

ಸೆಪ್ಟೆಂಬರ್​ 11ರಂದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉದ್ಘಾಟನೆ ಮಾಡುವುದು ಅಮಾನವೀಯ (inhuman) ಎಂದು ತಾಲಿಬಾನ್ ಪರ ಸಹಾನುಭೂತಿ ಹೊಂದಿರುವ ಮೈತ್ರಿಗಳು ಅಭಿಪ್ರಾಯಪಟ್ಟಿದ್ದರು. ಅಲ್ಲದೆ ಖತಾರಿ ಸರ್ಕಾರದ (Qatari government) ಮೂಲಕ ಒತ್ತಡ ತಂದು ತಾಲಿಬಾನಿಗಳಿಗೆ ತಿಳಿಯಹೇಳುವಂತೆ ಸೂಚಿಸಿತ್ತು. ಅಮೆರಿಕ ಸಹ ಇದನ್ನೇ ಬಯಸಿತ್ತು… ತನ್ನ ಸಾರ್ವಭೌಮತೆಗೆ ಧಕ್ಕೆ ತಂದ ದಿನದಂದು ಸಂತೋಷ ಪಡುವುದು ಸಮಂಜಸವಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿತ್ತು.

ಆಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆಲ್ ಖೈದಾ ದಾಳಿಯ 20 ನೇ ವರ್ಷಾಚರಣೆ ದಿನ ಇಂದು. 2001 ರ ಸೆಪ್ಟೆಂಬರ್ 11 ರಂದು ವಿಮಾನ ಹೈಜಾಕ್ ಮಾಡಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆಲ್ ಖೈದಾ ದಾಳಿ ನಡೆಸಿತ್ತು. ದಾಳಿಯಲ್ಲಿ ಮೂರು ಸಾವಿರ ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹತ್ತು ವರ್ಷದ ಬಳಿಕ ಒಸಾಮಾ ಬಿನ್ ಲಾಡೆನ್​ನನ್ನು ಪಾಕಿಸ್ತಾನದಲ್ಲಿ ಆಮೆರಿಕಾ ಹತ್ಯೆಗೈದಿತ್ತು.

ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಬೆನ್ನಿಗೆ (Taliban government inauguration) ಆಫ್ಘನ್ ರಾಜಧಾನಿ ಕಾಬೂಲ್ ಏರ್​ಪೋರ್ಟ್ ಹೆಸರನ್ನು ಬದಲಾವಣೆ ಮಾಡಲಾಗಿದೆ. ಹಮೀದ್ ಕರ್ಜಾಯ್​ ಏರ್​ಪೋರ್ಟ್ ಹೆಸರು (Hamid Karzai International Airport) ಬದಲಿಸಿದ ತಾಲಿಬಾನ್​ ಸರ್ಕಾರ ಅದನ್ನು ಕಾಬೂಲ್ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಎಂದು ಬದಲಾವಣೆ ಮಾಡಿಕೊಂಡಿದೆ.Also Read:

ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?

Also Read:
Afghan Update: ಸೆ 11ರಿಂದ ತಾಲಿಬಾನ್ ಸರ್ಕಾರ ಕಾರ್ಯಾರಂಭ ಸಾಧ್ಯತೆ: ಈವರೆಗಿನ ವಿದ್ಯಮಾನಗಳ ಅಪ್​ಡೇಟ್ ಇಲ್ಲಿದೆ

(Taliban postpone Afghanistan government inauguration ceremony slated for september 11 20 th anniversary)

Click on your DTH Provider to Add TV9 Kannada