Afghan Update: ಸೆ 11ರಿಂದ ತಾಲಿಬಾನ್ ಸರ್ಕಾರ ಕಾರ್ಯಾರಂಭ ಸಾಧ್ಯತೆ: ಈವರೆಗಿನ ವಿದ್ಯಮಾನಗಳ ಅಪ್​ಡೇಟ್ ಇಲ್ಲಿದೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ಸೆಪ್ಟೆಂಬರ್ 11ರಂದು ಅಧಿಕೃತವಾಗಿ ಆಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಪ್ರಧಾನಿ, ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

Afghan Update: ಸೆ 11ರಿಂದ ತಾಲಿಬಾನ್ ಸರ್ಕಾರ ಕಾರ್ಯಾರಂಭ ಸಾಧ್ಯತೆ: ಈವರೆಗಿನ ವಿದ್ಯಮಾನಗಳ ಅಪ್​ಡೇಟ್ ಇಲ್ಲಿದೆ
ಕಾಬೂಲ್ ನಗರದಲ್ಲಿ ಪಹರೆ ಕಾಯುತ್ತಿರುವ ತಾಲಿಬಾನ್ ಹೋರಾಟಗಾರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 10, 2021 | 6:31 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ಸೆಪ್ಟೆಂಬರ್ 11ರಂದು ಅಧಿಕೃತವಾಗಿ ಆಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಪ್ರಧಾನಿ, ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ ಅಫ್ಘಾನ್ ಮಹಿಳೆಯರು ಮಕ್ಕಳನ್ನು ಹೆರಲು ಮಾತ್ರ ಲಾಯಕ್‌. ಮಹಿಳೆಯರು ಸರ್ಕಾರದಲ್ಲಿ ಮಂತ್ರಿಯಾಗುವ ಅಗತ್ಯವಿಲ್ಲ ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜಾಕಿರುಲ್ಲಾ ಹಶ್ಮಿ ಹೇಳಿದ್ದಾನೆ. ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡದಿದ್ದರೆ ಅಫ್ಘಾನಿಸ್ತಾನದ ಲಕ್ಷಗಟ್ಟಲೇ ಜನರು ಹಸಿವಿನಿಂದ ಸಾಯಬಹುದು ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಅಫ್ಘಾನಿಸ್ತಾನದ ತಾಲಿಬಾನಿಗಳ ಸರ್ಕಾರದಲ್ಲಿ ಪ್ರಧಾನಿ ಹಾಗೂ ಸಚಿವರಾಗಿ ನಿಯೋಜನೆಗೊಂಡಿರುವವರು ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಆಲ್ ಖೈದಾ ಉಗ್ರಗಾಮಿ ಸಂಘಟನೆಯು ಆಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ವಿಮಾನದ ಮೂಲಕ ದಾಳಿ ನಡೆಸಿ ನಾಳೆಗೆ 20 ವರ್ಷ ಪೂರ್ತಿಯಾಗುತ್ತಿದೆ. ಅದೇ ಕರಾಳ ದಿನದಂದು ಸಂಭ್ರಮದಿಂದ ತಾಲಿಬಾನಿಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ವಿಶ್ವದ ದೊಡ್ಡಣ್ಣ ಆಮೆರಿಕಕ್ಕೆ ಈಗಾಗಲೇ ಆಗಿರುವ ಗಾಯದ ಮೇಲೆ ಮತ್ತಷ್ಟು ಬರೆ ಎಳೆಯುವ ಮೂಲಕ ಮುಜುಗರ ಉಂಟುಮಾಡಲು ನಿರ್ಧರಿಸಿದ್ದಾರೆ. ಆಮೆರಿಕ ಸಹ ತಾಲಿಬಾನ್ ಸಂಘಟನೆಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಹೀಗಾಗಿ ಸೆ.11ರ ಮಹತ್ವ ನಮಗೂ ಗೊತ್ತಿದೆ. ಹೀಗಾಗಿ ಅಂದೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ತಾಲಿಬಾನ್ ನಾಯಕನೊಬ್ಬ ಹೇಳಿದ್ದಾನೆ.

ತಾಲಿಬಾನಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆರು ದೇಶಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ಸಮಾರಂಭದಲ್ಲಿ ಭಾಗಿಯಾಗದೇ ಇರಲು ರಷ್ಯಾ ನಿರ್ಧರಿಸಿದೆ. ಆದರೆ, ತಾಲಿಬಾನ್ ನಾಯಕರು ನಾಳೆ ಯಾವುದೇ ಪ್ರಮಾಣವಚನ ಸ್ವೀಕಾರ ಸಮಾರಂಭವೂ ನಡೆಯಲ್ಲ ಎಂದು ಹೇಳಿದ್ದಾರೆ. ತಾಲಿಬಾನ್ ಆಳ್ವಿಕೆಯಲ್ಲಿ ಎಲ್ಲವೂ ಸಸ್ಪೆನ್ಸ್. ತಾಲಿಬಾನಿಗಳು ನಾಳೆ ಪ್ರಮಾಣವಚನ ಸ್ವೀಕರಿಸುವುದು ವದಂತಿ ಎಂದು ತಾಲಿಬಾನ್ ನಾಯಕ ಎನಾಮುಲ್ಲಾ ಸಾಮನಘನಿ ಹೇಳಿದ್ದಾನೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ರಚನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಷ್ಯಾ ತಿಳಿಸಿದೆ.

ಪಂಜ್​ಶಿರ್ ಪ್ರಾಂತ್ಯದಲ್ಲಿ ಮಾರಣಹೋಮ ತಾಲಿಬಾನ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಇದೀಗ ಪ್ರತೀಕಾರದ ಮಾರಣಹೋಮ ಆರಂಭವಾಗಿದೆ. ಪಂಜ್​ಶಿರ್ ಪ್ರಾಂತ್ಯದಲ್ಲಿ ಮನೆಗಳಿಗೆ ನುಗ್ಗುತ್ತಿರುವ ಉಗ್ರರು, ಯುವಕರನ್ನು ಕೊಲ್ಲುತ್ತಿದ್ದಾರೆ.  ಆಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷನ ಸೋದರ ರೋಹುಲ್ಲಾಗೆ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ.

ಮಹಿಳೆಯರು ಮಕ್ಕಳನ್ನು ಮಾತ್ರ ಹೆರಬೇಕು ಎಂದ ತಾಲಿಬಾನ್ ಮಹಿಳೆಯರ ಹಕ್ಕು, ಸ್ವಾತಂತ್ರ್ಯ ಎಂಬುದನ್ನೆಲ್ಲ ತಾಲಿಬಾನಿಗಳು ಕಾಲ ಕಸ ಮಾಡಿಕೊಂಡಿದ್ದಾರೆ. ಮಹಿಳೆಯರಿಗೆ ಹಕ್ಕು, ಸ್ವಾತಂತ್ರ್ಯ, ಅಧಿಕಾರಗಳು ಮೊದಲೇ ಇಲ್ಲ. ಅಫ್ಘಾನಿಸ್ತಾನದ ಮಹಿಳೆಯರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜಾಕಿರುಲ್ಲಾ ಹಶ್ಮಿ ಹೇಳಿದ್ದಾನೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಂತ್ರಿಯಾಗಲು ಅವಕಾಶವಿಲ್ಲ. ಮಹಿಳೆಯರು ಹೊರಲಾಗದನ್ನು ಅವರ ಕುತ್ತಿಗೆಗೆ ಹಾಕಲು ಸಾಧ್ಯವಿಲ್ಲ. ಮಹಿಳೆಯರು ಸರ್ಕಾರದ ಸಂಪುಟದಲ್ಲಿ ಅವರು ಇರುವ ಅಗತ್ಯವೂ ಇಲ್ಲ. ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಅಫ್ಘಾನಿಸ್ತಾನದ ಎಲ್ಲ ಮಹಿಳೆಯರನ್ನೂ ಪ್ರತಿನಿಧಿಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜಾಕಿರುಲ್ಲಾ ಹಶ್ಮಿ ಹೇಳಿದ್ದಾನೆ.

ಲಕ್ಷಗಟ್ಟಲೆ ಜನರು ಹಸಿವಿನಿಂದ ಸಾಯಬಹುದು: ವಿಶ್ವಸಂಸ್ಥೆ ಎಚ್ಚರಿಕೆ ವಿಶ್ವ ಸಮುದಾಯವು ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸಬೇಕು. ನೊಂದಿರುವ ಅಫ್ಘಾನಿಸ್ತಾನದ ಜನರಿಗೆ ನೆರವು ನೀಡಬೇಕು. ಅಫ್ಘಾನಿಸ್ತಾನದಲ್ಲಿ ಲಕ್ಷಗಟ್ಟಲೆ ಜನರು ಹಸಿವಿನಿಂದ ಸಾಯುವ ರಿಸ್ಕ್ ಇದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹೇಳಿದ್ದಾರೆ. ವಿಶ್ವ ಸಮುದಾಯವು ಅಫ್ಘಾನಿಸ್ತಾನದ ಆರ್ಥಿಕ ಕುಸಿತ ತಡೆಯಬೇಕು. ಇತರ ದೇಶಗಳ ಆರ್ಥಿಕ ನೆರವು ಸಿಕ್ಕರೆ ಮಾತ್ರ ಅಫ್ಘಾನಿಸ್ತಾನ ಉಸಿರಾಡಲು ಸಾಧ್ಯ. ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಅಫ್ಘಾನಿಸ್ತಾನದ ಜನರೆಲ್ಲಾ ಬಡತನ ರೇಖೆಗಿಂತ ಕೆಳಕ್ಕೆ ಕುಸಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಫ್ಘಾನಿಸ್ತಾನಕ್ಕೆ ಅರಬ್ ಸಂಯುಕ್ತ ಸಂಸ್ಥಾನದಿಂದ (ಯುನೈಟೆಡ್ ಅರಬ್ ಎಮಿರೇಟ್ಸ್​ – ಯುಎಇ) ನೆರವು ಹೊತ್ತ ವಿಮಾನವೊಂದು ಕಾಬೂಲ್​ಗೆ ಬಂದಿಳಿದೆ.

ತಾಲಿಬಾನ್ ಸರ್ಕಾರದ ಬಗ್ಗೆ ಅನುಮಾನ ಅಫ್ಘಾನಿಸ್ತಾನದ ತಾಲಿಬಾನಿಗಳ ಮಧ್ಯಂತರ ಸರ್ಕಾರವು ನಮ್ಮ ಭರವಸೆಯಂತೆ ಇಲ್ಲ ಎಂದು ಆಮೆರಿಕ ಹೇಳಿದೆ. ಈ ಸರ್ಕಾರವು ಎಲ್ಲರನ್ನೂ ಒಳಗೊಂಡಿಲ್ಲ. ಕೆಲವರ ಹಿನ್ನೆಲೆ ಕಳವಳಕ್ಕೆ ಕಾರಣವಾಗಿದೆ. ನಾವು ನೋಡಲು ಬಯಸಿದಂತೆ ಸರ್ಕಾರ ಇಲ್ಲ ಎಂದು ಆಮೆರಿಕ ವಿದೇಶಾಂಗ ಇಲಾಖೆ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಈಗಲೂ ತಾಲಿಬಾನ್ ಸಂಪುಟಕ್ಕೆ ವಿರೋಧ ಮುಂದುವರಿದಿದೆ. ಅಫ್ಘಾನಿಸ್ತಾನದ ರಾಜಕೀಯ ಪಕ್ಷಗಳು ಸಹ ತಾಲಿಬಾನಿಗಳ ಹೊಸ ಕ್ಯಾಬಿನೆಟ್ ವಿರೋಧಿಸಿದ್ದಾರೆ. ಎಲ್ಲರನ್ನೂ ಒಳಗೊಂಡ ಕ್ಯಾಬಿನೆಟ್ ಇದಲ್ಲ. ವಿಶ್ವಸಂಸ್ಥೆಯ ಉಗ್ರರ ಪಟ್ಟಿಯಲ್ಲಿರುವವರಿಗೆ ಕ್ಯಾಬಿನೆಟ್​ನಲ್ಲಿ ಅವಕಾಶ ನೀಡಲಾಗಿದೆ ಎಂದು ಅಫ್ಘಾನ್ ರಾಜಕೀಯ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿವೆ.

ತಾಲಿಬಾನಿಗಳು ಪಂಜಶೀರ್ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸಿದ್ದು, ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ಅಗತ್ಯ ಸಾಮಗ್ರಿಗಳು ಪೂರೈಕೆಯಾಗದೇ ಜನರು ಹಸಿವಿನಿಂದ ನರಳುವ ಪರಿಸ್ಥಿತಿ ಬರಲಿದೆ ಎಂದು ಪಂಜ್​ಶಿರ್ ಪ್ರಾಂತ್ಯದ ಜನರು ಹೇಳಿದ್ದಾರೆ. ಇನ್ನೂ ತಾಲಿಬಾನ್ ಉಗ್ರರು, ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹಾ ಸೋದರನನ್ನು ಹತ್ಯೆಗೈದಿದ್ದಾರೆ. ಕೆಲ ದಿನಗಳ ಹಿಂದೆ ಅಮರುಲ್ಲಾ ಸಲೇಹಾ ಹೇಳಿಕೆ ರೆಕಾರ್ಡ್ ಮಾಡಿದ್ದ ಸ್ಥಳಕ್ಕೆ ಹೋಗಿ ಈಗ ತಾಲಿಬಾನ್ ಉಗ್ರನೊಬ್ಬ ಪೋಟೊ ತೆಗೆಸಿಕೊಂಡಿದ್ದಾನೆ. ಈ ಮೂಲಕ ಅಮರುಲ್ಲಾ ಸಲೇಹ್ ಇದ್ದ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂಬ ಸಂದೇಶ ರವಾನಿಸಿದ್ದಾನೆ.

ವಿಮಾನವೇ ಈಗ ಉಗ್ರರಿಗೆ ಜೋಕಾಲಿ ತಾಲಿಬಾನ್ ಉಗ್ರರ ಕೈಲಿ ಈಗ ಅತ್ಯಾಧುನಿಕ ಯುದ್ಧವಿಮಾನಗಳಿವೆ, ಶಸ್ತ್ರಾಸ್ತ್ರಗಳಿವೆ. ಆದರೆ, ಇವುಗಳನ್ನೆಲ್ಲಾ ಹೇಗೆ ಬಳಸುವುದು ಎನ್ನುವುದೇ ಉಗ್ರರಿಗೆ ಗೊತ್ತಿಲ್ಲ. ಹೀಗಾಗಿ ವಿಮಾನದ ರೆಕ್ಕೆಗೆ ಜೋಕಾಲಿ ಕಟ್ಟಿಕೊಂಡು ಉಗ್ರನೊಬ್ಬ ಜೋಕಾಲಿ ಆಡುತ್ತಿದ್ದಾನೆ. ಈ ವಿಡಿಯೊ ನೋಡಿ, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ ಎಂದು ಮುಸಿಮುಸಿ ನಗುತ್ತಿದೆ.

(Taliban may form Afghanistan Government on September 11 Here is an update of what happened Until now)

ಇದನ್ನೂ ಓದಿ: Geopolitics: ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 6 ದೇಶಗಳಿಗೆ ಆಹ್ವಾನ, ಅಫ್ಘಾನಿಸ್ತಾನದ ಭವಿಷ್ಯದ ಮೇಲೆ ಪ್ರಭಾವಿ ದೇಶಗಳ ನೆರಳು

ಇದನ್ನೂ ಓದಿ: ಸೆ 11ರಂದೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಕಾರ್ಯಾರಂಭ: ಈ ದಿನಾಂಕದ ಮೂಲಕ ಅಮೆರಿಕವನ್ನು ಲೇವಡಿ ಮಾಡಿದ ತಾಲಿಬಾನ್

Published On - 6:16 pm, Fri, 10 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್