ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಂತ್ರಿಗಳಾಗುವಂತಿಲ್ಲ; ಮಕ್ಕಳು ಹೆರುವುದಷ್ಟೇ ಅವರ ಕೆಲಸ: ತಾಲಿಬಾನ್

ಮಹಿಳೆಯರು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಸೀಮಿತ. ಮಹಿಳೆಯರಿಂದ ಆಗದ್ದನ್ನು ಅವರ ಕುತ್ತಿಗೆಗೆ ಹಾಕಲು ಆಗಲ್ಲ. ಮಹಿಳೆಯರು ಸಚಿವ ಸಂಪುಟದಲ್ಲಿ ಇರುವ ಅಗತ್ಯವಿಲ್ಲ. ಅವರನ್ನು ಸೇರಿಸಿಕೊಳ್ಳುವುದೂ ಇಲ್ಲ ಎಂದು ತಾಲಿಬಾನ್ ವಕ್ತಾರ ಸೈಯದ್​ ಜಾಕಿರುಲ್ಲಾ ಹಶ್ಮಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಂತ್ರಿಗಳಾಗುವಂತಿಲ್ಲ; ಮಕ್ಕಳು ಹೆರುವುದಷ್ಟೇ ಅವರ ಕೆಲಸ: ತಾಲಿಬಾನ್
ಅಫ್ಘಾನಿಸ್ತಾನದ ಮಹಿಳೆಯರು (ಸಂಗ್ರಹ ಚಿತ್ರ)
Follow us
TV9 Web
| Updated By: Skanda

Updated on: Sep 10, 2021 | 12:36 PM

ಅಫ್ಘಾನಿಸ್ತಾನದಲ್ಲಿ ತಮ್ಮದೇ ಸರ್ಕಾರ ರಚಿಸಿ ಅಧಿಪತ್ಯ ಸಾಧಿಸಿರುವ ತಾಲಿಬಾನಿಗಳು ಇಡೀ ದೇಶವನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುತ್ತಿದ್ದಾರೆ. ಮಹಿಳೆಯರ ವಿಚಾರದಲ್ಲಂತೂ ಕಟ್ಟುನಿಟ್ಟಿನ ನಿಯಮ ರಚಿಸಿರುವ ತಾಲಿಬಾನ್​ ಸಂಘಟನೆ ಸ್ತ್ರೀ ಸ್ವಾತಂತ್ರ್ಯವನ್ನು ಅಕ್ಷರಶಃ ನಿರ್ನಾಮ ಮಾಡಿದೆ. ಇದೀಗ ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ಮಹಿಳೆಯರು ಮಂತ್ರಿಯಾಗಲು ಅವಕಾಶವಿಲ್ಲ ಎಂದು ತಾಲಿಬಾನ್ ವಕ್ತಾರ ಸೈಯದ್​ ಜಾಕಿರುಲ್ಲಾ ಹಶ್ಮಿ ಹೇಳಿಕೆ ನೀಡಿದ್ದು, ಮಹಿಳೆಯರು ಸಚಿವ ಸಂಪುಟದಲ್ಲಿ ಇರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮಹಿಳೆಯರು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಸೀಮಿತ. ಮಹಿಳೆಯರಿಂದ ಆಗದ್ದನ್ನು ಅವರ ಕುತ್ತಿಗೆಗೆ ಹಾಕಲು ಆಗಲ್ಲ. ಮಹಿಳೆಯರು ಸಚಿವ ಸಂಪುಟದಲ್ಲಿ ಇರುವ ಅಗತ್ಯವಿಲ್ಲ. ಅವರನ್ನು ಸೇರಿಸಿಕೊಳ್ಳುವುದೂ ಇಲ್ಲ ಎಂದು ತಾಲಿಬಾನ್ ವಕ್ತಾರ ಸೈಯದ್​ ಜಾಕಿರುಲ್ಲಾ ಹಶ್ಮಿ ತಿಳಿಸಿದ್ದಾರೆ. ಆ ಮೂಲಕ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ರೀತಿ ಪ್ರಾತಿನಿಧ್ಯ ಇರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಆಫ್ಘನ್​​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಇಡೀ ದೇಶದ ಎಲ್ಲಾ ಮಹಿಳೆಯರನ್ನು ಪ್ರತಿನಿಧಿಸುವುದಿಲ್ಲ. ಅವರ ಪ್ರತಿಭಟನೆಯನ್ನು ಪರಿಗಣಿಸಿ ಮನ್ನಣೆ ನೀಡಲಾಗುವುದೂ ಇಲ್ಲ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಕ್ಕಳನ್ನು ಹೆರಬೇಕು.‌ ಅದನ್ನು ಬಿಟ್ಟು ಮಂತ್ರಿಯಾಗಲು ಅವಕಾಶ ನೀಡಲಾಗುವುದಿಲ್ಲ. ಅವರ ಕೈಯ್ಯಲ್ಲಿ ಆಗದ್ದನ್ನು ಕುತ್ತಿಗೆಗೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ಸ್ತ್ರೀಯರು ನೂತನ ಸರ್ಕಾರದ ಕ್ಯಾಬಿನೆಟ್​ ಭಾಗವಾಗುವುದು ಅಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ.

ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆಯ ಕಟ್ಟಡಗಳನ್ನು ತಾಲಿಬಾನ್ ಉಗ್ರರು ವಿಮಾನ ನುಗ್ಗಿಸಿ, ಉರುಳಿಸಿದ ದಿನಾಂಕ ಸೆಪ್ಟೆಂಬರ್ 11, 2001. ಅಮೆರಿಕ ಸೇರಿದಂತೆ ವಿಶ್ವ ಈ ದುರಂತವನ್ನು 9/11 ಎಂದೇ ಗುರುತಿಸುತ್ತದೆ. ಜಾಗತಿಕ ವಿದ್ಯಮಾನದಲ್ಲಿ ಹಲವು ತಲ್ಲಣಗಳಿಗೆ ಮುನ್ನುಡಿ ಬರೆದ 9/11ರಂದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾಗಲಿದೆ. ಸರ್ಕಾರದ ಕಾರ್ಯಾರಂಭಕ್ಕೆ ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಾಲಿಬಾನ್ ಅಮೆರಿಕಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದೆ.

‘ಈ ದಿನದ ಮಹತ್ವ ನಮಗೆ ಗೊತ್ತಿದೆ. ಸರ್ಕಾರದ ಕಾರ್ಯಾರಂಭಕ್ಕೆ ನಿರ್ದಿಷ್ಟವಾಗಿ ಇದೇ ದಿನ ಆರಿಸಿಕೊಳ್ಳುವ ಮೂಲಕ ಅಮೆರಿಕಕ್ಕೆ ಇರಿಸುಮುರಿಸು ಉಂಟು ಮಾಡುವುದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದು ತಾಲಿಬಾನ್​ನ ಹಿರಿಯ ನಾಯಕನೊಬ್ಬನ ವ್ಯಂಗ್ಯವಾಡಿರುವುದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ನಮ್ಮನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕೆಟ್ಟದಾಗಿ ನಡೆಸಿಕೊಂಡಿರುವ ಅವಮಾನ ಇಂದಿಗೂ ಹಸಿರಾಗಿದೆ. ನಮ್ಮ ಸರ್ಕಾರದ ಗೃಹ ಸಚಿವರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಅಮೆರಿಕದ ಈ ಕ್ರಮಗಳಿಂದ ನಮಗೂ ಇರಿಸುಮುರಿಸು ಉಂಟಾಗಿದೆ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರಬಾರದು: ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 

ಪ್ರತಿಭಟಿಸುತ್ತಿರುವ ಆಫ್ಘನ್ ಮಹಿಳೆಯರ ವಿರುದ್ಧ ತಾಲಿಬಾನ್-ಪರ ಮಹಿಳೆಯರನ್ನೇ ಛೂಬಿಟ್ಟ ತಾಲಿಬಾನಿಗಳು!

(No place for Afghanistan Women in New Taliban Government they must produce children only)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ