ಪ್ರತಿಭಟಿಸುತ್ತಿರುವ ಆಫ್ಘನ್ ಮಹಿಳೆಯರ ವಿರುದ್ಧ ತಾಲಿಬಾನ್-ಪರ ಮಹಿಳೆಯರನ್ನೇ ಛೂಬಿಟ್ಟ ತಾಲಿಬಾನಿಗಳು!
ಮಹಿಳೆಯರ ವಿಷಯದಲ್ಲಿ ತಾವು ಮಾಡಿರುವ ವಾಗ್ದಾನಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಗೊತ್ತಾಗಿರುವುದರಿಂದ ಮತ್ತು ಅನೇಕ ದೇಶಗಳ ಮಾಧ್ಯಮಗಳಲ್ಲಿ ಅವು ಬಿತ್ತರಗೊಂಡಿರುವುದರಿಂದ ಸದ್ಯಕ್ಕೆ ತಾಲಿಬಾನಿಗಳು ಮಹಿಳೆಯರನ್ನು ಸಾರ್ವಜನಿಕವಾಗಿ ಶಿಕ್ಷೆಗೊಳಡಿಸಲು ಹಿಂಜರಿಯುತ್ತಿದ್ದಾರೆ
ಹೆಣ್ಣುಮಕ್ಕಳು ಅಫ್ಘಾನಿಸ್ತಾನದಲ್ಲಿ ಬೇರೆ ರಾಷ್ಟಗಳಲ್ಲಿನ ಮಹಿಳೆಯರ ಹಾಗೆಯೇ, ಸ್ವತಂತ್ರರು ಮತ್ತು ಸುರಕ್ಷಿತರು, ಅವರಿಗೆ ಸಮಾನ ಆವಕಾಶಗಳನ್ನು ಕಲ್ಪಿಸಲಾಗುವುದು ಎಂದು ಹೇಳುತ್ತಲೇ ತಾಲಿಬಾನಿಗಳು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ಅವರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದ್ದಾರೆ. ಬುರ್ಖಾ ಧರಿಸದೆ ಮತ್ತು ಪುರುಷರ ಜೊತೆಯಿಲ್ಲದೆ ಮನೆಯಿಂದ ಆಚೆ ಬರುವ ಮಹಿಳೆಯರನ್ನು ಶಿಕ್ಷೆಗೊಳಪಡಿಸಲಾಗುತ್ತಿದೆ. ಆದರೆ ತಾಲಿಬಾನಿಗಳು ಮರೆತಿರುವ ಅಂಶಬವೇನೆಂದರೆ, ತಾವು 20 ವರ್ಷಗಳ ಹಿಂದೆ ಆಳಿದ ಅಫ್ಘಾನಿಸ್ತಾನ ಮತ್ತು ಈಗಿನ ಅಫ್ಘಾನಿಸ್ತಾನದ ನಡುವೆ ವ್ಯತ್ಯಾಸವಿದೆ. ಈಗಿನ ಮಹಿಳೆಯರು ಸುಶಿಕ್ಷಿತರಾಗಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಅವರಿಗೆ ಅರಿವಿದೆ. ಹಾಗಾಗೇ, ಸಶಸ್ತ್ರಧಾರಿ ತಾಲಿಬಾನಿಗಳ ಎದುರು ನಿಂತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಮತ್ತು ಅವರ ಕಣ್ಣಲ್ಲಿ ಕಣ್ಣಿಟ್ಟು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಮಹಿಳೆಯರ ವಿಷಯದಲ್ಲಿ ತಾವು ಮಾಡಿರುವ ವಾಗ್ದಾನಗಳು ಅಂತರರಾಷ್ಟ್ರೀಯ ಸಮುದಾಯಕ್ಕೆ ಗೊತ್ತಾಗಿರುವುದರಿಂದ ಮತ್ತು ಅನೇಕ ದೇಶಗಳ ಮಾಧ್ಯಮಗಳಲ್ಲಿ ಅವು ಬಿತ್ತರಗೊಂಡಿರುವುದರಿಂದ ಸದ್ಯಕ್ಕೆ ತಾಲಿಬಾನಿಗಳು ಮಹಿಳೆಯರನ್ನು ಸಾರ್ವಜನಿಕವಾಗಿ ಶಿಕ್ಷೆಗೊಳಡಿಸಲು ಹಿಂಜರಿಯುತ್ತಿದ್ದಾರೆ. ಅದರೆ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ವಾಪಸ್ಸು ಹೋಗುವಂತೆ ಮಾಡಲು ಅವರು ಬೇರೆ ದಾರಿ ಹುಡುಕಿದ್ದಾರೆ. ಅದೇನು ಅನ್ನೋದು ನಿಮಗೆ ಈ ವಿಡಿಯೋನಲ್ಲಿ ಕಾಣುತ್ತದೆ.
ಇಲ್ಲೂ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರ ಕೈಗಳಲ್ಲಿರುವ ಧ್ವಜಗಳನ್ನು ಒಮ್ಮೆ ನೋಡಿ. ಅವು ತಾಲಿಬಾನ್ ನ ಕಪ್ಪು-ಬಿಳುಪು ಧ್ವಜಗಳು. ಅಂದರೆ, ಇವರು ತಾಲಿಬಾನ ಪರವಾಗಿ ಬೀದಿಗಿಳಿದವರು. ಒಬ್ಬಾಕೆ ಕೈಯಲ್ಲಿ ಸ್ಪೀಕರ್ ಹಿಡಿದು ಏನ್ನನ್ನೋ ಹೇಳುತ್ತಿದ್ದಾಳೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅವರು ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಮತ್ತು ಅವರು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುತ್ತಾರಲ್ಲ, ಆ ಪಾಲಿಸಿಯನ್ನು ಪ್ರಯೋಗಿಸುವ ಪ್ರಯತ್ನವನ್ನು ತಾಲಿಬಾನಿಗಳು ಮಾಡುತ್ತಿದ್ದಾರೆ.