ಅಫ್ಘಾನಿಸ್ತಾನದ ಪರುಷರೂ ತಾಲಿಬಾನಿಗಳ ಎದುರು ಎದೆಸೆಟೆಸಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ

ಅಫ್ಘಾನಿಸ್ತಾನದಲ್ಲಿ ಎರಡು ಪಂಗಡಗಳಾಗಿ ಬಿಟ್ಟಿವೆ. ಒಂದು ತಾಲಿಬಾನ್ ವಿರೋಧಿ, ಇನ್ನೊಂದು ತಾಲಿಬಾನಿಗಳಿ ಹೇಳಿದ್ದೇ ಸರಿ ಅಂತ ಹೇಳುವ ಗುಂಪು. ನಿಸ್ಸಂದೇಹವಾಗಿ ಅವರಿಗೆ ಹಿಂದೆ ತಾಲಿಬಾನಿಗಳ ಕುಮ್ಮಕ್ಕು ಇರುತ್ತದೆ.

ಅಫ್ಘಾನಿಸ್ತಾನದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಅಲ್ಲಿನ ಜನರಲ್ಲಿ ಎರಡು ಗುಂಪುಗಳಾಗಿಬಿಟ್ಟಿವೆ. ಒಂದು ತಾಲಿಬಾನ್ ಪರವಾದರೆ ಮತ್ತೊಂದು ಅದರ ವಿರುದ್ಧ ಮಾರಾಯ್ರೇ. ತಮ್ಮ ವಿರುದ್ಧ ಗುಟುರು ಹಾಕಿದರೆ ತಾಲಿಬಾನಿಗಳು ನಡುರಸ್ತೆಯಲ್ಲೇ ಸುಟ್ಟು ಬಿಡುತ್ತಾರೆ ಎಂದು ಗೊತ್ತಿದ್ದರೂ ಸಾವಿರಾರು ಆಫ್ಘನ್ನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದೂಕುಧಾರಿ ತಾಲಿಬಾನಿಗಳ ಎದುರು ನಿಂತು ‘ನಿಮ್ಮ ಕೈಲಾದರೆ ಗುಂಡು ಹಾರಿಸಿ ನೋಡೋಣ’ ಅಂತ ಎದೆ ಸೆಟೆಸಿ ಹೇಳುತ್ತಿದ್ದಾರೆ. ಮುಕ್ತವಾಗಿ ಜೀವಿಸುವ ಹಕ್ಕು ಕಳೆದುಕೊಂಡು, ಮುಂಬರುವ ದಿನಗಳಲ್ಲಿ ತಾಲಿಬಾನಿಗಳ ಗುಲಾಮರಂತೆ ಜೀವಿಸಬೇಕಾಗುತ್ತದೆ, ಮನೆಗಳಲ್ಲಿರುವ ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ನಡೆಸುತ್ತಾರೆ ಎನ್ನುವುದನ್ನು ಮನಗಂಡಿರುವ ಆಫ್ಘನ್ನರು ತಾಲಿಬಾನಿಗಳ ವಿರುದ್ಧ ಯಾವುದೇ ಆಯುಧವಿಲ್ಲದೆ ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದಾರೆ.

ಅದರೆ, ಅಫ್ಘಾನಿಸ್ತಾನದಲ್ಲಿ ಎರಡು ಪಂಗಡಗಳಾಗಿ ಬಿಟ್ಟಿವೆ. ಒಂದು ತಾಲಿಬಾನ್ ವಿರೋಧಿ, ಇನ್ನೊಂದು ತಾಲಿಬಾನಿಗಳಿ ಹೇಳಿದ್ದೇ ಸರಿ ಅಂತ ಹೇಳುವ ಗುಂಪು. ನಿಸ್ಸಂದೇಹವಾಗಿ ಅವರಿಗೆ ಹಿಂದೆ ತಾಲಿಬಾನಿಗಳ ಕುಮ್ಮಕ್ಕು ಇರುತ್ತದೆ. ತಾಲಿಬಾನಿಗಳು ಈ ಗುಂಪಿಗೆ ಆಮಿಷಗಳನ್ನೊಡ್ಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ.

ಈ ವಿಡಿಯೋನಲ್ಲಿ ಎರಡು ಗುಂಪುಗಳು ಪ್ರತಿಭಟನೆ ನಡೆಸುತ್ತಿರುವುದು ಕಾಣುತ್ತಿದೆ. ತಾಲಿಬಾನ್ ಸರ್ಕಾರವನ್ನು ವಿರೋಧಿಸುವ ಗುಂಪು ಪೊಲಿಸರು ಮತ್ತು ಸೇನಾ ಪಡೆಯ ಯೋಧರಂತೆ ಕಾಣುತ್ತಿರುವ ಜನರ ಮುಂದೆ ನಿಂತ ಅವರನ್ನು ಗುಂಡು ಹಾರಿಸುವಂತೆ ಕೆಣಕುತ್ತಿದ್ದಾರೆ. ಗುಂಡು ಹಾರಿಸಿದರೆ ಅನಾಹುತವಾಗುತ್ತದೆ ಅಂತ ಗೊತ್ತಿರುವ ಪಡೆಗಳು ಸುಮ್ಮನೆ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮತ್ತೊಂದೆಡೆ ತಾಲಿಬಾನ್-ಪ್ರೇರಿತ ಗುಂಪು ಬುರ್ಖಾ ಧರಿಸುವುದು ಕಡ್ಡಾಯ, ಅಫ್ಘಾನಿಸ್ತಾನದ ಮಹಿಳೆಯರು ಅದನ್ನು ಧರಿಸಿಯೇ ಹೊರಬರಬೇಕು ಅಂತ ರ‍್ಯಾಲಿ ನಡೆಸಿದ್ದಾರೆ. ಕೇವಲ ಎರಡು ದಿನಗಳ ಹಿಂದೆ ಸರ್ಕಾರ ರಚಿಸಿರುವ ತಾಲಿಬಾನ್ ಧುರೀಣರಿಗೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ.

ಇದನ್ನೂ ಓದಿ:  Opinion: ತಾಲಿಬಾನ್​ ರಾಷ್ಟ್ರಕ್ಕೆ ಜಗತ್ತಿನ ಮನ್ನಣೆ; ಮಕ್ಕಳಿಗೆ ತೋರಿಸಲು ಒಳ್ಳೆಯದು-ಕೆಟ್ಟದು ಪರಿಕಲ್ಪನೆಗಳೇ ಇನ್ನಿಲ್ಲ!

Click on your DTH Provider to Add TV9 Kannada