ನಿರ್ದೇಶನಕ್ಕೆ ಉಪೇಂದ್ರ ರೆಡಿ; ಅಧಿಕೃತ ಘೋಷಣೆ ಯಾವಾಗ?

ಸೆಪ್ಟೆಂಬರ್​ 18 ಉಪೇಂದ್ರ ಅವರ ಜನ್ಮದಿನ. ಈ ವಿಶೇಷ ದಿನದಂದು ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಉಪೇಂದ್ರ ಅವರ ಸಿನಿಮಾ ನಿರ್ದೇಶನಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ನಿರ್ದೇಶನದ ಸಿನಿಮಾಗಳನ್ನು ನೋಡಬೇಕು ಎಂದು ಅನೇಕರು ಕಾದು ಕೂತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಈಗ ಉಪೇಂದ್ರ ಅವರ ಹೊಸ ಸಿನಿಮಾ ಬಗ್ಗೆ ಗಾಂಧಿ ನಗರದಲ್ಲಿ ಸುದ್ದಿ ಒಂದು ಹರಿದಾಡಿದೆ.

ಹೌದು, ಸೆಪ್ಟೆಂಬರ್​ 18 ಉಪೇಂದ್ರ ಅವರ ಜನ್ಮದಿನ. ಈ ವಿಶೇಷ ದಿನದಂದು ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ‘ಕಬ್ಜ’ ಸಿನಿಮಾ ಕೆಲಸದಲ್ಲಿ ಉಪೇಂದ್ರ ಬ್ಯುಸಿ ಇದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ರಿಲೀಸ್​ ಆಗಿತ್ತು.

ಇದನ್ನೂ ಓದಿ: ಪ್ರಜಾಕೀಯದ ಹೈಕಮಾಂಡ್​ ಯಾರು ಎಂಬುದನ್ನು ಬಹಿರಂಗಪಡಿಸಿದ ಉಪೇಂದ್ರ

Click on your DTH Provider to Add TV9 Kannada