ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್ ಅರವಿಂದ್
ಕೊರೊನಾದಿಂದಾಗಿ ಪ್ರಸ್ತುತ ಚಿತ್ರರಂಗದ ಕಾರ್ಮಿಕರು ಮತ್ತು ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಯಿ ಎದುರು ರಮೇಶ್ ಅರವಿಂದ್ ವಿವರಣೆ ನೀಡಿದರು. ಅದಕ್ಕೆ ಮುಖ್ಯಮಂತ್ರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರ ಎದುರು ಹಲವು ಸವಾಲುಗಳಿವೆ ಹಲವು ಕ್ಷೇತ್ರದ ಜನರು ತಮ್ಮ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಸೂಕ್ತ ಪರಿಹಾರ ಕಲ್ಪಿಸುವ ಭರವಸೆಗಳನ್ನು ಬೊಮ್ಮಾಯಿ ನೀಡುತ್ತಿದ್ದಾರೆ. ಟಿವಿ9 ನಡೆಸಿದ ನೇರ ಸಂದರ್ಶನದಲ್ಲಿ ಹಲವಾರು ಜನರು ಸಿಎಂ ಎದುರು ತಮ್ಮ ಸಮಸ್ಯೆಗಳನ್ನು ವಿವರಿಸಿದ್ದಾರೆ. ಅದೇ ರೀತಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಎಲ್ಲರ ಪರವಾಗಿ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರು ಕೆಲವು ಬೇಡಿಕೆಗಳನ್ನು ಇಟ್ಟರು. ಅವುಗಳ ಬಗ್ಗೆ ಕೂಡಲೇ ಗಮನ ಹರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
‘ಚಿತ್ರರಂಗ ಒಂದು ದೊಡ್ಡ ಉದ್ಯಮ. ಬಹಳ ಜನರಿಗೆ ಅನ್ನ ನೀಡುವಂತಹ ಕ್ಷೇತ್ರ. ಮನರಂಜನೆ ಮೂಲಕ ಜನರಿಗೆ ನೀತಿ ತಿಳಿಸುವ ಪ್ರಬಲ ಮಾಧ್ಯಮವಿದು. ಕೊರೊನಾ ಕಾರಣದಿಂದ ಚಿತ್ರರಂಗದ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿದ್ದೇವೆ. ಮೂರನೇ ಅಲೆ ಬರುವ ಸಂದರ್ಭದಲ್ಲಿ ನಾವು ಹುಷಾರಾಗಿ ಇರಬೇಕು ಎಂಬುದು ನಮ್ಮ ಕಳಕಳಿ. ಸದಾ ನಾವು ಚಿತ್ರರಂಗದ ಪರವಾಗಿಯೇ ಇರುವಂಥವರು’ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ:
Kichcha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್; ಫೋಟೋ ವೈರಲ್
‘ನಮ್ಮ ಕಾಲದ ಈ 3 ಹೀರೋಯಿನ್ಸ್ ನಂಗಿಷ್ಟ’: ಸಿಎಂ ಬಸವರಾಜ ಬೊಮ್ಮಾಯಿ ಹಂಚಿಕೊಂಡ ಫಿಲ್ಮೀ ಮಾತುಗಳು