ಪಾಕಿಸ್ತಾನದ ದಗಲ್ಬಾಜಿತನವನ್ನು ತಾಲಿಬಾನಿಗಳು ಅರ್ಥಮಾಡಿಕೊಳ್ಳುವುಷ್ಟರಲ್ಲಿ ಬಹಳ ತಡವಾಗಿ ಬಿಟ್ಟಿರುತ್ತದೆ!
ಮಿಲಿಟರಿ ಉಪಕರಣಗಳು ಸೇರಿದಂತೆ ಅಮೇರಿಕನ್ನರು ಬಿಟ್ಟು ಹೋಗಿ ಸಾಮಾನು ಸರಂಜಾಮುಗಳನ್ನೆಲ್ಲ ತಾಲಿಬಾನಿಗಳು ಪಾಕಿಸ್ತಾನಕ್ಕೆ ರವಾನಿಸಿದ್ದಾರೆ. ರವಾನಿಸಿದ್ದಾರೋ, ಮಾರಿದ್ದಾರೋ ಅಥವಾ ಅವರಿಗೆ ಗೊತ್ತಿಲ್ಲದ ಹಾಗೆ ಕಳ್ಳಸಾಗಣೆ ಮಾಡಲಾಗಿದೆಯೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ವಂಚನೆ ಮತ್ತು ದ್ರೋಹದ ಮತ್ತೊಂದು ರೂಪವೇ ಪಾಕಿಸ್ತಾನ ಅಂತ ವಿಶ್ವಕ್ಕೆ ಗೊತ್ತಿದ್ದರೂ ತಾಲಿಬಾನಿಗಳಿಗೆ ಅದು ಅರ್ಥವಾಗುತ್ತಿಲ್ಲ. ತನ್ನ ನೆಲೆಯನ್ನು ಪಾಕಿಸ್ತಾನ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಅಂತ ತಾಲಿಬಾನ್ ನಾಯಕರಿಗೆ ಗೊತ್ತಾಗುವಷ್ಟರಲ್ಲಿ ಬಹಳ ತಡವಾಗಿಬಿಡಬಹುದು. ಅದರೆ ತಾಲಿಬಾನ್ಗೆ ಬೇರೆ ದಾರಿಯಾರೂ ಯಾವುದಿದೆ? ಇಡೀ ಅಂತರರಾಷ್ಟ್ರೀಯ ಸಮುದಾಯವೇ ಅದನ್ನು ಖಂಡಿಸುತ್ತಿರುವಾಗ ಕೇವಲ ಪಾಕಿಸ್ತಾನ ಮತ್ತು ಚೀನಾ ಬೆಂಬಲಕ್ಕೆ ನಿಂತಿವೆ. ನಿಮಗೆ ಗೊತ್ತಿರಬಹುದು, ನಿನ್ನೆಯಷ್ಟೇ ಚೀನಾ, ತಾಲಿಬಾನ್ ಸರ್ಕಾರಕ್ಕೆ 200 ಕೋಟಿ ರೂ. ಗಳ ಹಣಕಾಸಿನ ನೆರವು ಘೋಷಿಸಿದೆ.
ಇಲ್ಲಿ ನೋಡಿ ಏನಾಗುತ್ತಿದೆ ಅಂತ. ಅಮೇರಿಕ ಸೇನೆ ಬಿಲಿಯನ್ಗಟ್ಟಲೆ ಬಾಳುವ ಹಲಾವಾರು ಬಗೆಯ ವಸ್ತುಗಳನ್ನು ಆಫ್ಘಾನಿಸ್ತಾನದಲ್ಲಿ ಬಿಟ್ಟುಹೋಗಿರುವುದು ಎಲ್ಲರಿಗೂ ಗೊತ್ತಿದೆ. ತಾಲಿಬಾನಿ ಹೆಡ್ಡರಿಗೆ ಅವುಗಳನ್ನು ಬಳಸುವುದು ಹೇಗೆ ಅಂತ ಗೊತ್ತಿಲ್ಲ. ಹಾಗಾಗೇ, ಮಿಲಿಟರಿ ಉಪಕರಣಗಳು ಸೇರಿದಂತೆ ಅಮೇರಿಕನ್ನರು ಬಿಟ್ಟು ಹೋಗಿ ಸಾಮಾನು ಸರಂಜಾಮುಗಳನ್ನೆಲ್ಲ ತಾಲಿಬಾನಿಗಳು ಪಾಕಿಸ್ತಾನಕ್ಕೆ ರವಾನಿಸಿದ್ದಾರೆ. ರವಾನಿಸಿದ್ದಾರೋ, ಮಾರಿದ್ದಾರೋ ಅಥವಾ ಅವರಿಗೆ ಗೊತ್ತಿಲ್ಲದ ಹಾಗೆ ಕಳ್ಳಸಾಗಣೆ ಮಾಡಲಾಗಿದೆಯೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ಅವುಗಳನ್ನು ಕೊಂಡಿರುವ/ ಪಡೆದಿರುವ ಕರಾಚಿ ಮತ್ತು ಲಾಹೋರ್ ವ್ಯಾಪಾರಿಗಳು ‘ಅಮೇರಿಕ ಕಾ ಮಾಲ್ ಸಸ್ತೆ ಮೇ, ಆಧೆ ದಾಮ್ ಮೇ’ ಅಂತ ಹೇಳುತ್ತಾ ನಮ್ಮಲ್ಲಿ ಕ್ಲೀಯರನ್ಸ್ ಸೇಲ್ ನಲ್ಲಿ 100 ರೂ. ಬೆಲೆಯ ವಸ್ತು 10-20 ರೂ. ಗಳಿಗೆ ಮಾರುವ ಹಾಗೆ ಮಾರುತ್ತಿದ್ದಾರೆ.
ಪಾಕಿಸ್ತಾನದ ದಗಲ್ಬಾಜಿತನ ನೋಡಿ. ಈ ವಸ್ತುಗಳು ಅಫ್ಘಾನಿಸ್ತಾನದಲ್ಲೇ ಉಳಿದಿದ್ದರೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಆ ದೇಶಕ್ಕೆ ಯವುದೋ ರೀತಿಯಲ್ಲಿ ಸಹಾಯವಾಗುತಿತ್ತು. ಆದರೆ ಆಫ್ಘನ್ ಜನರ ಕ್ಷೇಮ, ಅಭ್ಯುದಯ ಪಾಕಿಸ್ತಾನಿಗಳಿಗೆ ಬೇಕಿಲ್ಲ. ಅದಕ್ಕೆ ಬೇಕಿರುವುದು ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಲ್ಲಿನ ನೆಲೆ ಹಾಗೂ ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರ ನೆರವು. ಹೇಗಿದೆ ನೋಡಿ ಈ ದೇಶದ ವಂಚನೆಯ ವರಸೆ!
ಇದನ್ನೂ ಓದಿ: Radhika Pandith: ತಾನೇ ಹಾಡು ಹಾಕಿಕೊಂಡು ಡಾನ್ಸ್ ಮಾಡಿದ ಯಥರ್ವ್, ಜೊತೆಗೂಡಿದ ಆಯ್ರಾ; ವಿಡಿಯೊ ನೋಡಿ