ಬೊಮ್ಮಾಯಿ ಸೂತ್ರದ ಬೊಂಬೆ ಸೂತ್ರಧಾರಿ ಯಡಿಯೂರಪ್ಪ; ಅವರೇ ಸರ್ಕಾರ ನಡೆಸುತ್ತಿದ್ದಾರೆ ಎಂದರು ಕೋಡಿಮಠ ಸ್ವಾಮೀಜಿ

ಸುಮಾರು ಒಂದೂವರೆ ವರ್ಷದ ಹಿಂದೆ ವಿಶ್ವದ ಭೂಪಟದಿಂದ ಒಂದು ದೇಶ ಕಾಣೆಯಾಗಲಿದೆ ಅಂತ ತಾನು ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ ಎಂದು ಹೇಳಿದ ಅವರು ತಾವು ಯಾವ ದೇಶದ ಬಗ್ಗೆ ಮಾತಾಡುತ್ತಿರೋದು ಅಲ್ಲಿದ್ದವರಿಗೆಲ್ಲ ಗೊತ್ತಿದೆ ಅಂತ ಹೇಳಿದಾಗ, ಸುತ್ತ ನೆರೆದಿದ್ದ ಭಕ್ತಗಣ ಅಫ್ಘಾನಿಸ್ತಾನ ಎಂದು ಹೇಳಿದರು.

ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಬೇಡ ಅಂತ ಅನೇಕ ಮಠಾಧೀಶರು ಅವರು ಪರವಾಗಿ ಹೋರಾಟ ಮಾಡಿದ್ದರು. ಆವರ ಮಾತು ಮತ್ತು ಎಚ್ಚರಿಕೆಯನ್ನು ಧಿಕ್ಕರಿಸಿ ಯಡಿಯೂರಪ್ಪನವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಮಠಾಧೀಶರಲ್ಲಿ ಇನ್ನೂ ಅಸಮಾಧಾನ ಹೊಗೆಯಾಡುತ್ತಿದೆ. ಹಾಗೆ ಬಿ ಎಸ್ ವೈ ಪರ ದನಿಯೆತ್ತಿದ ಸ್ವಾಮೀಜಿಗಳಲ್ಲಿ ಕೋಡಿಮಠದ ಡಾ ಶಿವಾನಂದ ರಾಜೇಂದ್ರ ಸ್ವಾಮೀಜಿ ಸಹ ಒಬ್ಬರು.
ಅದೇ ಅಸಮಾಧಾನದಲ್ಲಿದ್ದ ಶ್ರೀಗಳು ಇಂದು ಹಾಸನ ಜಿಲ್ಲೆಯ ಮಾಡಾಳು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ, ತಾವು ಹೇಳಿದ ಭವಿಷ್ಯ ಹುಸಿಹೋಗುವುದಿಲ್ಲ ಎಂದು ಹೇಳಿ ಸುದ್ದಿಗಾರರಿಗೆ ಮತ್ತು ಅವರ ಸುತ್ತ ನೆರೆದಿದ್ದ ಜನರಿಗೆ ಗಾಬರಿ ಹುಟ್ಟಿಸಿದರು.

ಸುಮಾರು ಒಂದೂವರೆ ವರ್ಷದ ಹಿಂದೆ ವಿಶ್ವದ ಭೂಪಟದಿಂದ ಒಂದು ದೇಶ ಕಾಣೆಯಾಗಲಿದೆ ಅಂತ ತಾನು ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ ಎಂದು ಹೇಳಿದ ಅವರು ತಾವು ಯಾವ ದೇಶದ ಬಗ್ಗೆ ಮಾತಾಡುತ್ತಿರೋದು ಅಲ್ಲಿದ್ದವರಿಗೆಲ್ಲ ಗೊತ್ತಿದೆ ಅಂತ ಹೇಳಿದಾಗ, ಸುತ್ತ ನೆರೆದಿದ್ದ ಭಕ್ತಗಣ ಅಫ್ಘಾನಿಸ್ತಾನ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಇಡೀ ವಿಶ್ವವೇ ಭಯಪಟ್ಟುಕೊಂಡಿದೆ ಮತ್ತು ಮುಂಬರುವ ದಿನಗಳಲ್ಲಿ ಈ ಭಯ ಮತ್ತಷ್ಟು ಹೆಚ್ಚಲಿದೆ ಎಂದು ಸ್ವಾಮೀಜಿ ಹೇಳಿದರು.

ಅವರು ಹೇಳಿದ್ದು ಕೇಳಿ ಕುತೂಹಲ ಹೆಚ್ಚಿಸಿಕೊಂಡ ವರದಿಗಾರರು, ಕೊರೊನಾ ಪಿಡುಗು ಯಾವಾಗ ಪ್ರಪಂಚದಿಂದ ಮಾಯವಾಗುತ್ತದೆ ಎಂದು ಕೇಳಿದರು.

ಸ್ವಾಮೀಜಿಯವರು ಮೊದಲು, ಇನ್ನೂ 2-3 ವರ್ಷ ಕಾಡಲಿದೆ ಅಂತ ಹೇಳಿ ನಂತರ 3-4 ವರ್ಷದವರೆಗೆ ಅದರ ಪ್ರಭಾವ ಇರಲಿದೆ ಎಂದರು. ಕೊರೊನಾ ವೈರಸ್ ರೂಪಾಂತರಗೊಳ್ಳುತ್ತದೆ ಅಂತ ತಾನು ನುಡಿದ ಭವಿಷ್ಯವೂ ನಿಜವಾಗಿದೆ ಎಂದು ಸ್ವಾಮೀಜಿಗಳು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೂತ್ರದ ಬೊಂಬೆ ಎಂದು ಹೇಳಿದ ಶ್ರೀಗಳು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸೂತ್ರಧಾರನಾಗಿದ್ದು ಅವರು ಕುಣಿಸಿದಂತೆ ಬೊಮ್ಮಾಯಿ ಕುಣಿಯುತ್ತಾರೆ ಎಂದರು. ಯಡಿಯೂರಪ್ಪನವರೇ ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ಎಂದು ಶ್ರೀಗಳು ನಗುತ್ತಾ ಹೇಳಿದರು.

ಅವರು ಮುಖ್ಯಮಂತ್ರಿಗಳನ್ನು ಬೊಮ್ಮಾಯಿ ಅಂದರೋ ಅಥವಾ ಬೊಂಬಾಯಿ ಅಂತ ಹೇಳಿದರೋ ಅಂತ ಕೊಂಚ ಗೊಂದಲ ಹುಟ್ಟಿಸಿತು. ಯಾಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಮುಂಬೈ ದೊಡ್ಡ ಪಾತ್ರ ನಿರ್ವಹಿಸಿದೆ ಅಂತ ಎಲ್ಲರಿಗೂ ಗೊತ್ತು.

ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಬಗ್ಗೆ ಮುಂದುವರಿದು ಮಾತಾಡಿದ ಕೋಡಿಮಠದ ಸ್ವಾಮಿಗಳು; ಮಠಾಧೀಶರರು ಯಡಿಯೂರಪ್ಪನವರ ಪರ ವಕಾಲತ್ತೇನೂ ವಹಿಸಿಕೊಂಡಿರಲಿಲ್ಲ, ಅದರೆ ಕೋವಿಡ್-19 ಪಿಡುಗು ರಾಜ್ಯದೆಲ್ಲೆಡೆ ಹಾಹಾಕಾರ ಸೃಷ್ಟಿಸಿದೆ ಮತ್ತು ರಾಜ್ಯದ ಹಲವಾರು ಭಾಗಗಳಲ್ಲಿ ಅತಿವೃಷ್ಟಿಯಿಂದಾಗಿ ಜನ ತೊಂದರೆ ಪಡುತ್ತಿದ್ದಾರೆ, ಊಟಕ್ಕಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿರುವುದರಿಂದ ಇಂಥ ಸಮಯದಲ್ಲಿ ರಾಜನನ್ನು (ಮುಖ್ಯಮಂತ್ರಿ) ಬದಲಾಯಿಸುವುದು ಬೇಡ ಅಂತ ಸ್ವಾಮಿಗಳೆಲ್ಲ ಸೇರಿ ಸಲಹೆ ನೀಡಿದ್ದರು.

ಆದರೆ ಅವರು ತಮ್ಮಗಳ ಸಲಹೆಯನ್ನು ಧಿಕ್ಕರಿಸಿದರು ಎಂದು ಶ್ರೀಗಳು ಹೇಳಿದರು. ಹಿಂದೂ ದೇಶ ಅಂದರೆ ಅದು ದೇವ-ದೈವ, ಧರ್ಮ, ನಂಬಿಕೆ, ಸಾಧು-ಸತ್ಪುರಷರ ಮೇಲೆ ನೆಲೆಗೊಂಡಿರುವಂಥದ್ದು. ಒಂದು ಸದುದ್ದೇಶದಿಂದ ಸಾಧುಗಳು ಬೀದಿಗೆ ಬಂದಾಗ ಅವರಿಗೆ ಅಗೌರವ ತೋರಲಾಗಿದೆ ಮತ್ತು ಅದರ ಫಲವನ್ನು ಅವರೆಲ್ಲ ಇಷ್ಟರಲ್ಲೇ ಉಣ್ಣಲಿದ್ದಾರೆ ಎಂದು ಹೇಳಿ ಸಂಕ್ರಾಂತಿಗೆ ಮೊದಲು ಒಂದು ದೊಡ್ಡ ಕಂಟಕ ಎದುರಾಗಲಿದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:  Viral Video: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ವೃದ್ಧರನ್ನು ಕಾಪಾಡಿದ ಯುವಕರು; ಶಾಕಿಂಗ್ ವಿಡಿಯೋ ಇಲ್ಲಿದೆ

Click on your DTH Provider to Add TV9 Kannada