ಓಲಾ ಇ-ಸ್ಕೂಟರ್ಗಳ ಡೆಲಿವರಿ ಶುರುವಾಗಿದೆ, ಭಾರತ 1,000 ನಗರಗಳಲ್ಲಿ ಸ್ಕೂಟರ್ಗಳು ಲಭ್ಯ!
ಭಾರತದ 1,000 ನಗರಗಳಲ್ಲಿ ಎಸ್ 1 ಮತ್ತು ಎಸ್1 ಪ್ರೊ ವಾಹನಗಳ ಡೆಲಿವರಿ ಶುರುವಾಗಿದೆ. ನಾವು ಮೊದಲೇ ತಿಳಿಸಿದ ಹಾಗೆ ಓಲಾ ಇ ಸ್ಕೂಟರ್ಗಳು 10 ಸುಂದರ ಬಣ್ಣಗಳಲ್ಲಿ ಲಭ್ಯವಿವೆ.
ಭಾವಿಷ್ ಅಗರ್ವಾಲ್ ಕುರಿತು ನಾವು ಈಗಾಗಲೇ ಚರ್ಚಿಸಿದ್ದೇವೆ. ಕಳೆದ ತಿಂಗಳು ಸ್ವಾತಂತ್ರ್ಯೋತ್ಸವ ದಿನದಂದು ಅವರು ತಮ್ಮ ಎಸ್ 1 ಮತ್ತು ಎಸ್1 ಪ್ರೊ ಇ ಸ್ಕೂಟರ್ಗಳನ್ನು ಲಾಂಚ್ ಮಾಡಿದರು. ಸ್ಕೂಟರ್ಗಳನ್ನು ಲಾಂಚ್ ಮಾಡಿದ್ದೇನೋ ಆಯಿತು, ಅದರೆ ವಾಹನಗಳು ಗ್ರಾಹಕರ ಕೈಗೆ ಸಿಗುವಂತೆ ಮಾಡಬೇಕಲ್ಲ? ಅದಕ್ಕೂ ಅವರು ಒಂದು ಶುಭದಿನವನ್ನೇ ಆರಿಸಿಕೊಂಡರು. ಇಂದು ಅಂದರೆ ಸೆಪ್ಟೆಂಬರ್ 9 ಅನ್ನು ವಿಶ್ವ ಇಲೆಕ್ಟ್ರಿಕ್ ವಾಹನಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಹಾಗೆ ಇದೇ ದಿನದಂದು ಭಾವಿಷ್ ತಮ್ಮ ಇ-ಸ್ಕೂಟರ್ಗಳ ಡೆಲಿವರಿಯನ್ನು ಆರಂಭಿಸಿದರು.
ಭಾರತದ 1,000 ನಗರಗಳಲ್ಲಿ ಎಸ್ 1 ಮತ್ತು ಎಸ್1 ಪ್ರೊ ವಾಹನಗಳ ಡೆಲಿವರಿ ಶುರುವಾಗಿದೆ. ನಾವು ಮೊದಲೇ ತಿಳಿಸಿದ ಹಾಗೆ ಓಲಾ ಇ ಸ್ಕೂಟರ್ಗಳು 10 ಸುಂದರ ಬಣ್ಣಗಳಲ್ಲಿ ಲಭ್ಯವಿವೆ. ಭಾವಿಷ್ ಅವರು ಸದಭಿರುಚಿಯ ವ್ಯಕ್ತಿ ಥರ ಗೋಚರವಾಗುತ್ತಾರೆ. ಯಾಕೆ ಅಂತೀರಾ? ಅವರು ತಮ್ಮ ವಾಹನಗಳಿಗೆ ಆಯ್ಕೆ ಮಾಡಿಕೊಂಡಿರುವ ಬಣ್ಣಗಳನ್ನು ಗಮನಿಸಿದರೆ ನಮಗೆ ಹಾಗನಿಸದಿರದು. ನಿಜಕ್ಕೂ ಮನಸೆಳೆಯುವ ಬಣ್ಣಗಳು.
ಹಿಂದಿನ ಬಾರಿ ನಾವು ಎಸ್ 1 ಮತ್ತು ಎಸ್1 ಪ್ರೊ ಇ-ವಾಹನಗಳ ಬಗ್ಗೆ ಮಾತಾಡುವಾಗ ಅವುಗಳ ಬೆಲೆಗಳನ್ನು ಬಹಿರಂಗಪಡಿಸಿದೆವೆಯೇ? ಸರಿ ನಾವು ಆಗ ಹೇಳಿಲ್ಲವಾದರೆ ಈಗ ಹೇಳ್ತೀವಿ. ಓಲಾ ಎಸ್ 1 ಇ-ಸ್ಕೂಟರ್ ಬೆಲೆ ರೂ. 99,999 ಮತ್ತು ಎಸ್1 ಪ್ರೊ ಇ-ಸ್ಕೂಟರ್ ಬೆಲೆ ರೂ. 1,29,999. ಇವೆರಡು ದೆಹಲಿಯಲ್ಲಿ ಎಕ್ಸ್-ಶೋರೂಮ್ ಬೆಲೆಗಳು.
ಅಂದಹಾಗೆ ಓಲಾ ಇ-ಸ್ಕೂಟರ್ಗಳ ಮೇಲೆ ಶೇಕಡಾ 15 ರಷ್ಟು ಸಬ್ಸಿಡಿ ಸಿಗುತ್ತದೆ ಮಾರಾಯ್ರೇ. ಸಬ್ಸಿಡಿ ನಂತರ ಇವುಗಳ ಬೆಲೆ ಕ್ರಮವಾಗಿ ರೂ. 85, 059 ಮತ್ತು ರೂ 1,10,149 ಆಗಲಿದೆ. ನೀವು ಈಗಾಗಲೇ ಸ್ಕೂಟರನ್ನು ಬುಕ್ ಮಾಡಿದ್ದರೆ ಇಷ್ಟರಲ್ಲೇ ನಿಮ್ಮ ಕೈ ಸೇರಲಿದೆ. ಬುಕ್ ಮಾಡಿಲ್ಲವಾದರೆ, ಈಗಲೂ ಮಡಬಹುದು, ಆದರೆ ಡೆಲಿವರಿಗೆ ಕೆಲ ದಿನ ಕಾಯಬೇಕಾಗಬಹುದು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ; ವಿಡಿಯೋ ಇಲ್ಲಿದೆ