ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ; ವಿಡಿಯೋ ಇಲ್ಲಿದೆ

ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಇಬ್ಬರು ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಆರ್​ಕೆಎಸ್​ ಬದೂರಿಯ ಅವರಿದ್ದ ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ; ವಿಡಿಯೋ ಇಲ್ಲಿದೆ
ವಾಯುಪಡೆಯ ಯುದ್ಧವಿಮಾನದ ತುರ್ತು ಭೂ ಸ್ಪರ್ಶ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 09, 2021 | 2:47 PM

ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಭಾರತೀಯ ವಾಯುಪಡೆಯ ಅತ್ಯಂತ ಅಪಾಯಕಾರಿ ಫೈಟರ್ ಜೆಟ್ ಎಂದೇ ಕರೆಯಲ್ಪಡುವ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಜಸ್ಥಾನದ ಬರ್ಮೆರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ಹೆದ್ದಾರಿಯನ್ನು ನಿರ್ಮಿಸಿದೆ. ಈ ರಸ್ತೆಯಲ್ಲಿ ಇಬ್ಬರು ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಆರ್​ಕೆಎಸ್​ ಬದೂರಿಯ ಅವರಿದ್ದ ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಭಾರತಮಾಲಾ ಯೋಜನೆಯ ಅಡಿ 765.52 ಕೋಟಿ ರೂ. ವೆಚ್ಚದಲ್ಲಿ ಗಗರಿಯಾ-ಭಕಾಸರ್ ಮತ್ತು ಸತ್ತ-ಗಾಂಧವ್ ವಿಭಾಗದ ದ್ವಿಪಥದ ಒಟ್ಟು 196.97 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ವಾಯುಪಡೆಯ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಭಾರತೀಯ ವಾಯುಪಡೆ ತುರ್ತು ಭೂ ಸ್ಪರ್ಶಕ್ಕಾಗಿ ಬಳಸಲಾಗಿರುವ ಮೊದಲ ರಾಷ್ಟ್ರೀಯ ಹೆದ್ದಾರಿ ಇದಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ಕೇಂದ್ರ ಸಚಿವರು ಹಾಗೂ ವಾಯುಪಡೆಯ ಚೀಫ್ ಮಾರ್ಷಲ್ ಇದ್ದ ಯುದ್ಧ ವಿಮಾನ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿರುವ ವಿಡಿಯೋಗಳು ವೈರಲ್ ಆಗಿವೆ. ಈ ಮೂಲಕ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಬರ್ಮೆರ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ 3.5 ಕಿ.ಮೀ. ಉದ್ದದ ಏರ್​ಸ್ಟ್ರಿಪ್​ನಲ್ಲಿ ಯುದ್ಧ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾನು ಈ ಹೊಸ ಪ್ರಯತ್ನದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರಸ್ತೆಯಲ್ಲಿ ಸಾಮಾನ್ಯವಾಗಿ ಕಾರು, ಬಸ್​, ಟ್ರಕ್, ಬೈಕ್​ಗಳು ಮಾತ್ರ ಓಡಾಡುತ್ತಿತ್ತು. ಆದರೆ, ಈಗ ವಿಮಾನ ಕೂಡ ಚಲಿಸುವ ಅತ್ಯಾಧುನಿಕ ಸೌಲಭ್ಯವನ್ನು ಲೋಕಾರ್ಪಣೆ ಮಾಡಿದ್ದೇವೆ. ಈ ಯುದ್ಧ ವಿಮಾನ 1971ರಲ್ಲಿ ನಡೆದ ಯುದ್ಧಕ್ಕೆ ಸಾಕ್ಷಿಯಾಗಿತ್ತು. ಇಲ್ಲೇ ಸಮೀಪದಲ್ಲಿ ಅಂತಾರಾಷ್ಟ್ರೀಯ ಗಡಿಯೂ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಹೆದ್ದಾರಿ ಅನುಕೂಲವಾಗಲಿದೆ ಎಂದಿದ್ದಾರೆ.

ಇದು ಕೇವಲ ಯುದ್ಧದ ಸಂದರ್ಭದಲ್ಲಿ ಬಳಸಲು ನಿರ್ಮಿಸಿರುವುದಲ್ಲ. ಇದರಿಂದ ರಕ್ಷಣಾ ಕಾರ್ಯಾಚರಣೆಗೂ ಬಹಳ ಸಹಕಾರಿಯಾಗಲಿದೆ. ಇಲ್ಲಿ ಹೆಲಿಪ್ಯಾಡ್​ ಅನ್ನು ಕೂಡ ನಿರ್ಮಿಸಲಾಗುತ್ತಿದೆ. ನೈಸರ್ಗಿಕ ವಿಕೋಪಗಳು ಕೂಡ ಯಾವ ಯುದ್ಧಕ್ಕೂ ಕಡಿಮೆಯಿಲ್ಲ. ಯುದ್ಧದ ವೇಳೆ ಆಗುವ ಅನಾಹುತ, ನಷ್ಟಗಳು ಇಂತಹ ಪ್ರಾಕೃತಿಕ ದುರಂತದ ಸಂದರ್ಭದಲ್ಲೂ ನಡೆಯುತ್ತವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಭಾರತೀಯ ವಾಯುಪಡೆಗಾಗಿ 15 ದಿನಗಳಲ್ಲಿ ಏರ್​ಸ್ಟ್ರಿಪ್ ನಿರ್ಮಿಸುವ ಮೂಲಕ ರಸ್ತೆ ಸಾರಿಗೆ ಇಲಾಖೆ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆಯಿಟ್ಟಿದೆ. ಏರ್​ಸ್ಟ್ರಿಪ್ ನಿರ್ಮಿಸಲು ಸಾಮಾನ್ಯವಾಗಿ ಒಂದರಿಂದ ಒಂದೂವರೆ ವರ್ಷ ಸಮಯ ಬೇಕಾಗುತ್ತದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್​ಕೆಎಸ್​ ಬದೌರಿಯ ಹೇಳಿದ್ದರು. ಆದರೆ, ಕೇವಲ 15 ದಿನಗಳಲ್ಲಿ ಉತ್ತಮ ಉಣಮಟ್ಟದಲ್ಲಿ ಅದನ್ನು ನಿರ್ಮಿಸಿಕೊಡುವುದಾಗಿ ನಾನು ಅವರಿಗೆ ಭರವಸೆ ನೀಡಿದ್ದೆ. ಅದರಂತೆ ನಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕೊವಿಡ್ ಅಬ್ಬರದ ನಡುವೆಯೂ ನಾವು ಪ್ರತಿ ದಿನ 38 ಕಿ.ಮೀ. ರಸ್ತೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ವಿಶ್ವದಲ್ಲೇ ಮೊದಲಾಗಿದೆ. ಕೇವಲ 24 ಗಂಟೆಯಲ್ಲಿ 2.5 ಕಿ.ಮೀ ಉದ್ದದ ಮುಂಬೈ- ದೆಹಲಿ ಎಕ್ಸ್​ಪ್ರೆಸ್​ ಹೈವೇ ನಿರ್ಮಿಸಿದ್ದೇವೆ. ಒಂದೇ ದಿನದಲ್ಲಿ ಬಿಜಾಪುರದಿಂದ ಸೋಲಾಪುರದವರೆಗೆ 26 ಕಿ.ಮೀ. ಉದ್ದದ ಸಿಂಗಲ್ ಲೇನ್ ರಸ್ತೆಯನ್ನು ನಿರ್ಮಿಸಿದ್ದೇವೆ. ಈ ಮೂರು ಕೂಡ ವಿಶ್ವ ದಾಖಲೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!

ಪ್ರಥಮ ‘ಸ್ವದೇಶಿ’ ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ: ರಾಜನಾಥ್ ಸಿಂಗ್

(WATCH Video IAF Drill on India’s New Emergency Landing Strip on Rajasthan Highway Rajnath Singh, Nitin Gadkari on Board)

Published On - 1:54 pm, Thu, 9 September 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ