Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!

Trending Video: ಬಂಧಿತರಾಗಿದ್ದ ಉಗ್ರರು ಜೈಲಿನಲ್ಲಿದ್ದ ತಮ್ಮ ಬಾತ್​ ರೂಂನ ನೆಲವನ್ನು ಅಗೆದು, ಗುಪ್ತ ಮಾರ್ಗ ಸಿದ್ದಪಡಿಸಿಕೊಂಡಿದ್ದರು. ಆ ಬಾತ್​ ರೂಂ ಕ್ಲೀನ್ ಮಾಡಲು ಬೇರೆ ಯಾರೂ ಬರುತ್ತಿರಲಿಲ್ಲವಾದ್ದರಿಂದ ಇವರು ಹಲವು ದಿನಗಳಿಂದ ನೆಲವನ್ನು ಅಗೆದಿದ್ದು ಯಾರಿಗೂ ಗೊತ್ತಾಗಿರಲಿಲ್ಲ.

Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!
ಇಸ್ರೇಲ್​ನ ಜೈಲಿನಿಂದ ಉಗ್ರರು ಪರಾರಿ

ಜೆರುಸಲೆಂ: ಬಿಗಿ ಭದ್ರತೆಯಿದ್ದ ಜೈಲಿನಲ್ಲಿದ್ದ 6 ಪ್ಯಾಲೆಸ್ತೀನ್ ಉಗ್ರರು (Palestinian Militants) ಚಮಚಗಳಿಂದಲೇ ಟಾಯ್ಲೆಟ್​ ನೆಲವನ್ನು ಕೊರೆದು ಪರಾರಿಯಾಗಿದ್ದಾರೆ. ಹಾಲಿವುಡ್​ (Hollywood) ಸ್ಟೈಲ್​ನಲ್ಲಿ ಇಸ್ರೇಲ್​ನಲ್ಲಿ ಈ ಘಟನೆ ನಡೆದಿದೆ. ತಮ್ಮ ಸೆಲ್​ನ ನೆಲವನ್ನು ಅಗೆದು ಜೈಲಿನಿಂದ ಪರಾರಿಯಾಗಿರುವ ಕೈದಿಗಳ ವರ್ತನೆಯಿಂದ ಜೈಲಧಿಕಾರಿಗಳು ಶಾಕ್ ಆಗಿದ್ದಾರೆ. ಈ ಕೈದಿಗಳ ಪೈಕಿ ಅಲ್​-ಅಕ್ಸಾ ಬ್ರಿಗೇಡ್ (Al-Aqsa Martyrs’ Brigade) ಉಗ್ರ ಸಂಘಟನೆಯ ಮಾಜಿ ನಾಯಕ ಕೂಡ ಇದ್ದ ಎನ್ನಲಾಗಿದೆ.

ಬಂಧಿತರಾಗಿದ್ದ ಉಗ್ರರು ಜೈಲಿನಲ್ಲಿದ್ದ ತಮ್ಮ ಬಾತ್​ ರೂಂನ ನೆಲವನ್ನು ಅಗೆದು, ಗುಪ್ತ ಮಾರ್ಗ ಸಿದ್ದಪಡಿಸಿಕೊಂಡಿದ್ದರು. ಆ ಬಾತ್​ ರೂಂ ಕ್ಲೀನ್ ಮಾಡಲು ಬೇರೆ ಯಾರೂ ಬರುತ್ತಿರಲಿಲ್ಲವಾದ್ದರಿಂದ ಇವರು ಹಲವು ದಿನಗಳಿಂದ ನೆಲವನ್ನು ಅಗೆದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ತಮ್ಮ ಬಳಿಯಿದ್ದ ಚಮಚ, ಲೋಟಗಳನ್ನೇ ಬಳಸಿ ಹೊಂಡ ತೋಡಿ ಉಗ್ರರು ಪರಾರಿಯಾಗಿದ್ದಾರೆ.

ಬಾತ್​ ರೂಂನಿಂದ ಕೆಳಗೆ ಜೈಲಿನಿಂದ ಹೊರಗೆ ಸಂಪರ್ಕ ಕಲ್ಪಿಸುವ ಗೋಡೆಯಾಚೆ ಸಣ್ಣದಾದ ಕಂದಕ ಕೊರೆದ ಉಗ್ರರು ಅದರ ಮೂಲಕ ಜೈಲಿನಿಂದ ಹೊರಗೆ ಹೋಗಿದ್ದಾರೆ. ಉಗ್ರರು ಮಾಡಿರುವ ಈ ಕೃತ್ಯದ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಜೈಲಿನ ಪಕ್ಕದ ತೋಟದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಿ ಹೋಗುತ್ತಿದ್ದುದನ್ನು ನೋಡಿದ ರೈತರು ಜೈಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗ ಪರಿಶೀಲನೆ ಮಾಡಿದಾಗ 6 ಉಗ್ರರಿದ್ದ ಸೆಲ್​ ಖಾಲಿಯಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

(Viral Video 6 Prisoners Dig Hole in Toilet Floor With Spoon Escape from High Security Israel Jail)

Read Full Article

Click on your DTH Provider to Add TV9 Kannada