Viral Video: ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಕಾರನ್ನು ಮನೆಗೆ ಕಟ್ಟಿ ಹಾಕಿದ ಮಾಲೀಕ; ವಿಡಿಯೋ ವೈರಲ್
Telangana Flood | ತಮ್ಮ ಮನೆಯ ಎದುರು ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಕಾರು ಕೊಚ್ಚಿ ಹೋಗುತ್ತದೆ ಎಂಬ ಭೀತಿಯಲ್ಲಿ ಆ ಕಾರಿನ ಮಾಲೀಕ ತನ್ನ ಕಾರನ್ನು ಕಟ್ಟಿಹಾಕಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ತೆಲಂಗಾಣ: ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ಮಳೆ (Heavy Rain) ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ಇನ್ನೆರಡು ದಿನ ಮಳೆ ಮುಂದುವರೆಯಲಿದೆ. ತೆಲಂಗಾಣದಲ್ಲಿ (Telangana Rain) ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಇಲ್ಲಿನ ಸಿರಿಸಿಲ್ಲದಲ್ಲಿ ಪ್ರವಾಹದಿಂದ ಯಾವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವಿಡಿಯೋ ವೈರಲ್ (Viral Video) ಆಗಿದೆ. ಪ್ರವಾಹದಲ್ಲಿ ಕಾರೊಂದು ಕೊಚ್ಚಿ ಹೋಗುವುದನ್ನು ತಪ್ಪಿಸಲು ಕಾರನ್ನು ಮನೆಯ ಕಿಟಕಿಯ ಕಂಬಿಗಳಿಗೆ ಹಾಗೂ ಟೆರೇಸ್ನ ಸರಳಿಗೆ ಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿದೆ.
ತಮ್ಮ ಮನೆಯ ಎದುರು ಹರಿಯುತ್ತಿದ್ದ ಪ್ರವಾಹದ ನೀರಿನಲ್ಲಿ ಕಾರು ಕೊಚ್ಚಿ ಹೋಗುತ್ತದೆ ಎಂಬ ಭೀತಿಯಲ್ಲಿ ಆ ಕಾರಿನ ಮಾಲೀಕ ತನ್ನ ಕಾರನ್ನು ಕಟ್ಟಿಹಾಕಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆ ಮನೆಯ ಅಕ್ಕಪಕ್ಕದಲ್ಲಿದ್ದ ಮನೆಗಳ ಕಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಎರಡು ದಿನಗಳಿಂದ ತೆಲಂಗಾಣದಲ್ಲಿ ವಿಪರೀತ ಮಳೆಯಾಗುತ್ತಿದೆ.
Siricilla is famous for KTR
It is now become famous for this ??
For the first time a car owner in Siricilla tied his car with ropes.
When was the last time you witnessed this in Telangana?
— Saffron Sagar Goud(SG) (@Sagar4BJP) September 7, 2021
ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹದಿಂದ ಯಾವ ರೀತಿಯ ಅವಾಂತರಗಳು ಸೃಷ್ಟಿಯಾಗಿವೆ ಎಂಬ ಸಾಕಷ್ಟು ವಿಡಿಯೋಗಳು ಟ್ವಿಟ್ಟರ್ನಲ್ಲಿ ಹರಿದಾಡುತ್ತಿವೆ. ಇಲ್ಲಿನ ಹೆದ್ದಾರಿಗಳು ಹಾಗೂ ನಗರದೊಳಗಿನ ರಸ್ತೆಗಳು ಕೂಡ ನೀರಿನಿಂದ ಆವೃತವಾಗಿದ್ದು, ಕೆಲವು ರಸ್ತೆಗಳಲ್ಲಿ ಕಾರು, ಬೈಕುಗಳು ಕೊಚ್ಚಿಕೊಂಡು ಬಂದು ರಾಶಿ ಬಿದ್ದಿವೆ.
Telangana:
అంతులేని వ్యధ..!
ప్రజా ధనాన్ని కుప్పలుతెప్పలుగా కుమ్మరించి, నాణ్యతకు తూట్లు పొడిచి అభివృద్ధి చేసిన Rajanna Sircilla పట్టణం. pic.twitter.com/vNRnae9BjU
— కమల దళం (@BJP4indo) September 7, 2021
Smart Warangal- Smart Roads- Smart Drains- Smart Politicians- Smart Officals- Smart Governance. pic.twitter.com/XZnDrak3EP
— Santhosh Manduva (@santhoshmanduva) September 7, 2021
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪಂಜಾಬ್, ಗೋವಾ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕೊಂಕಣ, ಗುಜರಾತ್, ರಾಜಸ್ಥಾನದಲ್ಲಿ ಸೆ. 10ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ದಕ್ಷಿಣ ಒಡಿಶಾ, ಕರಾವಳಿ ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ವಿದರ್ಭ ಮತ್ತು ದಕ್ಷಿಣ ಛತ್ತೀಸ್‌ಗಢದ ಕಡಿಮೆ ಒತ್ತಡದ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರಾಖಂಡ ಮತ್ತು ಮಹಾರಾಷ್ಟ್ರದ ಒಳನಾಡಿನಲ್ಲಿ ಇಂದು ವಿಪರೀತ ಮಳೆಯಾಗಲಿದೆ. ಲಡಾಖ್, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕದ ಕರಾವಳಿ ಜಿಲ್ಲೆಗಳು, ಅಂಡಮಾನ್ ನಿಕೋಬಾರ್ನಲ್ಲಿಯೂ ಮಳೆ ಹೆಚ್ಚಾಗಲಿದೆ..
ಇದನ್ನೂ ಓದಿ: Karnataka Rain: ಕರಾವಳಿಯಲ್ಲಿ ಇಂದಿನಿಂದ ವಿಪರೀತ ಮಳೆ; ಕರ್ನಾಟಕದ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
Flood Alert: ಭೀಮಾ ನದಿಪಾತ್ರದ ಜನರೇ ಎಚ್ಚರ: ಉಂಟಾಗಿದೆ ಪ್ರವಾಹ ಭೀತಿ
(Viral Video Car Tied With Ropes In Flood hit Siricilla to Prevent From Being Washed Away after Heavy Rain in Telangana)
Published On - 2:11 pm, Wed, 8 September 21