Flood Alert: ಭೀಮಾ ನದಿಪಾತ್ರದ ಜನರೇ ಎಚ್ಚರ: ಉಂಟಾಗಿದೆ ಪ್ರವಾಹ ಭೀತಿ
ಸೊನ್ನ ಬ್ಯಾರೇಜ್ ಗೆ 29 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, 6 ಗೇಟುಗಳ ಮಾಡುವ ಮೂಲಕ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಕಲಬುರಗಿ: ಭೀಮಾ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಪ್ರವಾಹದ ಭೀತಿ ಎದುರಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೆಜ್ನಿಂದ 29 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಸಾಮರ್ಥ್ಯದ ಶೇ 70 ರಷ್ಟು ಅಂದರೆ 2.3 ಟಿಎಂಸಿ ನೀರು ಸಂಗ್ರಹವಾಗಿದೆ. ಸೊನ್ನ ಬ್ಯಾರೇಜ್ ಸಂಗ್ರಹ ಸಾಮರ್ಥ್ಯ 3.16 ಟಿಎಂಸಿಯಷ್ಟಿದೆ. ಸದ್ಯ ಸೊನ್ನ ಬ್ಯಾರೇಜ್ ಗೆ 29 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, 6 ಗೇಟುಗಳ ಮಾಡುವ ಮೂಲಕ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಪರಿಹಾರ ನೀಡದ ಕಾರಣ ಕಚೇರಿ ಸಾಮಾಗ್ರಿ ಜಪ್ತಿ ಬಾಗಲಕೋಟೆ: ಸಂತ್ರಸ್ತರಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದಂತೆ ಬಾಗಲಕೋಟೆಯಲ್ಲಿರುವ ಘಟಪ್ರಭಾ, ಮಲಪ್ರಭಾ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಜಪ್ತಿ ಮಾಡಲಾಗಿದೆ. ಕಂಪ್ಯೂಟರ್, ತಿಜೋರಿ, ಮೇಜು, ಕುರ್ಚಿ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿಗೊಳಿಸಲಾಗಿದೆ. ಮುಳುಗಡೆಯಾದ ಜಮೀನಿನ ದ್ರಾಕ್ಷಿ ಬೆಳೆ ಪರಿಹಾರ ನೀಡಿದ ಹಿನ್ನೆಲೆಯಲ್ಲಿ ಕಲಾದಗಿ ಗ್ರಾಮದ ರೈತ ಮಲ್ಲಿನಾಥ ಶೆಟ್ಟರ್ ಎಂಬುವವರಿಗೆ ಪರಿಹಾರ ನೀಡಿರಲಿಲ್ಲ. 2020ರಲ್ಲಿ 40.87 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೂ ಸರ್ಕಾರ ಈವರೆಗೆ ಪರಿಹಾರ ನೀಡಿರಲಿಲ್ಲ. ಹೀಗಾಗಿ ಕೋರ್ಟ್ ಆದೇಶದಂತೆ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:
ಕಲಬುರಗಿ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ನೀಡದ ಮತದಾರ; ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ಕಾರಣ
(Kalburgi Bhima River flood alert heavy rain)
Published On - 9:31 pm, Mon, 6 September 21