ಕಲಬುರಗಿ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ನೀಡದ ಮತದಾರ; ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ಕಾರಣ

Kalaburagi News: ಕಲಬುರಗಿ ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಯಾವ ಪಕ್ಷವು ಕೂಡಾ ಸರಳ ಬಹುಮತವನ್ನು ಗಳಿಸಿಲ್ಲ. ಹೀಗಾಗಿ ಕಲಬುರಗಿ ಪಾಲಿಕೆ ಅತಂತ್ರವಾಗಿದೆ.

ಕಲಬುರಗಿ ಪಾಲಿಕೆ ಚುನಾವಣೆ: ಸ್ಪಷ್ಟ ಬಹುಮತ ನೀಡದ ಮತದಾರ; ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ಕಾರಣ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Sep 06, 2021 | 7:06 PM

ಕಲಬುರಗಿ: ಕಲಬುರಗಿ ನಗರ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆ ಮೊದಲಿನಿಂದಲು ಕಾಂಗ್ರೆಸ್ ಭದ್ರಕೋಟೆ. ಇಂತಹ ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದವು. ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ ಮಾಡಿದರೆ, ಬಿಜೆಪಿ ಮೊದಲ ಬಾರಿಗೆ ಕಲಬುರಗಿ ಪಾಲಿಕೆಯಲ್ಲಿ ಕಮಲ ಅರಳಿಸಲು ಸಾಕಷ್ಟು ತಂತ್ರ ಪ್ರತಿತಂತ್ರ ಮಾಡಿತ್ತು. ಜೆಡಿಎಸ್, ಎಐಎಂಐಎಂ, ಆಪ್, ಎಸ್​ಡಿಪಿಐ ಸೇರಿದಂತೆ ಅನೇಕ ಪಕ್ಷಗಳು ಕೂಡಾ ತಮ್ಮ ಅಸ್ವಿತ್ವಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದವು. ಆದರೆ ಇಂದು ನಡೆದ ಮತ ಎಣಿಕೆಯಲ್ಲಿ ಕಲಬುರಗಿ ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಯಾವ ಪಕ್ಷವು ಕೂಡಾ ಸರಳ ಬಹುಮತವನ್ನು ಗಳಿಸಿಲ್ಲ. ಹೀಗಾಗಿ ಕಲಬುರಗಿ ಪಾಲಿಕೆ ಅತಂತ್ರವಾಗಿದೆ.

ಸ್ಪಷ್ಟ ಬಹುಮತ ನೀಡದ ಕಲಬುರಗಿ ಮತದಾರ ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್​ಗಳಿಗೆ ಸೆಪ್ಟಂಬರ್ ಮೂರರಂದು ಮತದಾನ ನಡೆದಿತ್ತು. 55 ವಾರ್ಡ್ ಗಳ ಪೈಕಿ ಎಲ್ಲಾ ವಾರ್ಡ್​ಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ಬಿಜೆಪಿ 47 ವಾರ್ಡಗಳಲ್ಲಿ, ಜೆಡಿಎಸ್ 45 ವಾರ್ಡ್ ಗಳಲ್ಲಿ, ಆಪ್ 26 ಸ್ಥಾನಗಳಲ್ಲಿ, ಎಐಎಂಐಎಂ ಪಕ್ಷ 20 ಸ್ಥಾನಗಳಲ್ಲಿ ಸೇರಿದಂತೆ ಒಟ್ಟು ಮೂನ್ನೂರು ಅಭ್ಯರ್ಥಿಗಳು ಕಣದಲ್ಲಿದ್ದರು. ಶೇಕಡಾ 49.92 ರಷ್ಟ ಮತದಾನ ನಡೆದಿತ್ತು. ಇಂದು ಕಲಬುರಗಿ ನಗರದ ಎನ್​ವಿ ಶಾಲೆಯಲ್ಲಿ ಮತ ಎಣಿಕೆ ನಡೆಯಿತು. ಕಾಂಗ್ರೆಸ್ , ಬಿಜೆಪಿ ಪಕ್ಷಗಳು ತಮಗೆ ಸರಳ ಬಹುಮತ ಸಿಗುವ ವಿಶ್ವಾಸದಲ್ಲಿತ್ತು. ಆದರೆ ಕಲಬುರಗಿ ಮತದಾರರು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲ. 55 ವಾರ್ಡ್​ಗಳ ಪೈಕಿ ಕಾಂಗ್ರೆಸ್ 27 ವಾರ್ಡ್​ಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಬಿಜೆಪಿ 23 ವಾರ್ಡ್​ಗಳಲ್ಲಿ ಗೆದ್ದರೆ, ಜೆಡಿಎಸ್ 4 ವಾರ್ಡ್​ಗಳಲ್ಲಿ ಜಯಗಳಿಸಿದೆ. ಪಕ್ಷೇತರರು ಕೇವಲ ಒಂದು ವಾರ್ಡ್​ನಲ್ಲಿ ಮಾತ್ರ ಜಯಗಳಿಸಿದ್ದಾರೆ.

ಸರಳ ಬಹುಮತಕ್ಕೆ ಹಿನ್ನಡೆಯಾಗಲು ಕಾರಣವೇನು ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಕೂಡಾ ಸರಳ ಬಹುಮತ ಗಳಿಸಲು ವಿಫಲವಾಗಿವೆ. ಎರಡು ಪಕ್ಷದ ನಾಯಕರು ತಾವು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಅನ್ನೋ ವಿಶ್ವಾಸದಲ್ಲಿದ್ದರು. ಆದ್ರೆ ಎರಡು ಪಕ್ಷಕ್ಕೆ ಬಹುಮತ ಗಳಿಸಲು ಆಗಿಲ್ಲ. ಇದಕ್ಕೆ ಟಿಕೆಟ್ ಹಂಚಿಕೆ, ಕಾರ್ಯಕರ್ತರ ಅಸಮಾಧಾನ ತಣ್ಣಗೆ ಮಾಡುವಲ್ಲಿ ವಿಫಲವಾಗಿದ್ದೇ ಕಾರಣವಾಯ್ತಾ ಅನ್ನೋ ಚರ್ಚೆ ಪ್ರಾರಂಭವಾಗಿದೆ. ಬಿಜೆಪಿಯ ಟಿಕೆಟ್ ಕೇಳಿದ್ದ ಇಬ್ಬರಿಗೆ ಬಿಜೆಪಿ ನಾಯಕರು ಟಿಕೆಟ್ ನೀಡಲಿಲ್ಲ. ಹೀಗಾಗಿ ಓಬ್ಬರು ಪಕ್ಷೇತರರಾಗಿ, ಮತ್ತೋರ್ವ ಜೆಡಿಎಸ್​ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನು ಕೆಲವರು ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದರು. ಅವರ ಅತೃಪ್ತಿಯನ್ನು ಬಿಜೆಪಿ ನಾಯಕರು ಶಮನಗೊಳಿಸಿದರು ಕೂಡಾ ಅತೃಪ್ತರು ಬಿಜೆಪಿ ಪರವಾಗಿ ಕೆಲಸ ಮಾಡಿಲ್ಲ. ಇದು ಕೆಲವೆಡೆ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ.

ಕಲಬುರಗಿ ಜಿಲ್ಲೆಗೆ ಮಂತ್ರಿ ಸ್ಥಾನ ನೀಡದೇ ಇರೋದರಿಂದ ಅನೇಕ ಕಾರ್ಯಕರ್ತರು ಪಕ್ಷದ ನಾಯಕರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಕೆಲವೆಡೆ ಬಿಜೆಪಿಯ ಹಿನ್ನಡೆಗೆ ಕಾರಣವಾಗಿದೆ. ಕಾಂಗ್ರೆಸ್​ನಲ್ಲಿ ಅನೇಕ ಆಂತರಿಕ ಗೊಂದಲಗಳಿಂದ ಕೆಲವು ವಾರ್ಡ್​ಗಳಲ್ಲಿ ಸೋಲನ್ನು ಅನುಭವಿಸುವಂತಾಗಿದೆ. ಚುನಾವಣೆ ಘೋಷಣೆಯಾದ ಮೇಲೆ ಅನೇಕ ಹಾಲಿ ಕಾರ್ಪೋರೇಟರ್​ಗಳಿಗೆ ಟಿಕೆಟ್ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಅನೇಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅನೇಕರು ಜೆಡಿಎಸ್, ಎಐಎಂಐಎಮ್ ಪಕ್ಷಗಳಿಗೆ ಹೋಗಿ, ಕಾಂಗ್ರೆಸ್ ಸೋಲಿಗೆ ಕಾರಣವಾಗಿದ್ದಾರೆ.

ತಮ್ಮ ಶಕ್ತಿ ವೃದ್ದಿಸಿಕೊಂಡ ಬಿಜೆಪಿ, ಕಾಂಗ್ರೆಸ್ 2013 ರಲ್ಲಿ ನಡೆದ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ 23 ಸ್ಥಾನಗಳಲ್ಲಿ, ಬಿಜೆಪಿ 7 ಸ್ಥಾನಗಳಲ್ಲಿ, ಜೆಡಿಎಸ್ 10 ಸ್ಥಾನಗಳಲ್ಲಿ, ಕೆಜೆಪಿ 7 ಸ್ಥಾನಗಳಲ್ಲಿ, ಎಂಟು ಜನ ಪಕ್ಷೇತರರು ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ನಾಲ್ಕು ಹೆಚ್ಚು ಸ್ಥಾನ ಗಳಿಸಿದರೆ, ಬಿಜೆಪಿ 16 ಸ್ಥಾನಗಳನ್ನು ಹೆಚ್ಚುವರಿ ಪಡೆದುಕೊಂಡಿದೆ. ಈ ಹಿಂದೆ ಹತ್ತು ಸ್ಥಾನದಲ್ಲಿದ್ದ ಜೆಡಿಎಸ್ ಇದೀಗ ನಾಲ್ಕು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎಂಟರಲ್ಲಿ ಗೆದ್ದಿದ್ದ ಪಕ್ಷೇತರರು ಈ ಬಾರಿ ಕೇವಲ ಒಂದು ಸ್ಥಾನ ಮಾತ್ರ ಪಡೆಯುವಲ್ಲಿ ಸಫಲರಾಗಿದ್ದಾರೆ. ಕಲಬುರಗಿ ಪಾಲಿಕೆ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಎರಡಂಕಿಯನ್ನು ದಾಟಿ, ನಿರೀಕ್ಷೆಗೆ ಮೀರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ? ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನ ಸೆಪ್ಟಂಬರ್ ಮೂರರಂದು ಅಂದರೆ ಶುಕ್ರವಾರದ ದಿನವಿತ್ತು. ಇದೇ ಶುಕ್ರವಾರ ಮತದಾನ ಇದ್ದಿದ್ದು ತಮಗೆ ಹಿನ್ನಡೆಗೆ ಕಾರಣವಾಯ್ತು ಅಂತಿದ್ದಾರೆ ಬಿಜೆಪಿ ನಾಯಕರು. ಹೌದು ಮತದಾನವಿದ್ದ ಶುಕ್ರವಾರ, ಶ್ರಾವಣದ ಕೊನೆಯ ಶುಕ್ರವಾರವಾಗಿತ್ತು. ಹೀಗಾಗಿ ಜನರು ಪೂಜೆಯಲ್ಲಿಯೇ ಹೆಚ್ಚು ತೊಡಗಿಕೊಂಡಿದ್ದರು. ಮತದಾನ ಬಿಟ್ಟು ಮನೆಯಲ್ಲಿಯೇ ಪೂಜೆಯಲ್ಲಿ ಹೆಚ್ಚು ನಿರತರಾಗಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತಹಾಕಲಿಲ್ಲ. ಹೀಗಾಗಿ ಈ ಬಾರಿ ಕೇವಲ 49.92 ರಷ್ಟ ಮಾತ್ರ ಮತದಾನವಾಗಿತ್ತು. ಒಂದುವೇಳೆ ಇನ್ನು ಶೇಕಡಾ ಎರಡರಿಂದ ಮೂರರಷ್ಟು ಮತದಾನವಾಗಿದ್ದರೆ, ಬಿಜೆಪಿ ಇನ್ನು ಕೆಲ ಸ್ಥಾನಗಳನ್ನು ಗೆಲ್ಲುತ್ತಿತ್ತು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ. ಹೀಗಾಗಿ ತಮಗೆ ಶುಕ್ರವಾರ ಶುಭ ತರುವ ಬದಲಾಗಿ ಹಾನಿ ಮಾಡಿತು ಅನ್ನೋದು ಬಿಜೆಪಿ ನಾಯಕರ ಮಾತಾಗಿದೆ.

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಕಲಬುರಗಿ ಮತದಾರರು ಬಿಜೆಪಿಯ ಕೆಲಸಗಳನ್ನು ನೋಡಿ ಮತ ಹಾಕಿದ್ದಾರೆ. ಇದೀಗ ಮೇಯರ್ ಸ್ಥಾನವನ್ನು ಕೂಡಾ ಬಿಜೆಪಿ ಅಲಂಕರಿಸೋ ಮೂಲಕ, ಕಲಬುರಗಿ ನಗರದಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇವೆ. ಬಿಜೆಪಿಗೆ ಬೆಂಬಲಿಸದ ಮತದಾರರಿಗೆ ಧನ್ಯವಾದಗಳು ಎಂದು ಬಿಜೆಪಿ ವಕ್ತಾರ ರಾಜಕುಮಾರ್ ಪಾಟೀಲ್ ಹೇಳಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯ ಘಟನಾನುಘಟಿ ನಾಯಕರು ಕಲಬುರಗಿಯಲ್ಲಿಯೇ ಬೀಡು ಬಿಟ್ಟು ಅಬ್ಬರದ ಪ್ರಚಾರ ಮಾಡಿದ್ರು ಕೂಡಾ ಬಿಜೆಪಿಗಿಂತ ಕಾಂಗ್ರೆಸ್ ಗೆ ಮತದಾರರು ಜೈ ಅಂದಿದ್ದಾರೆ. ಪಾಲಿಕೆಯ ಮೇಯರ್ ಸ್ಥಾನವನ್ನು ಪಡೆಯಲು ಕಾಂಗ್ರೆಸ್ ಕೂಡಾ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್​ನ ಡಾ. ಅಜಯಸಿಂಗ್ ತಿಳಿಸಿದ್ದಾರೆ.

ವಿಶೇಷ ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ

ಇದನ್ನೂ ಓದಿ: ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ: ಮುರುಗೇಶ್ ನಿರಾಣಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ