AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

Crime News | ತನ್ನ ಮಗಳ ಜೊತೆ ಶಾಪಿಂಗ್​ಗೆ ಹೋಗಿದ್ದ ಮಹಿಳೆ ಹೋಟೆಲ್​ಗೆ ಊಟಕ್ಕೆ ಹೋಗಿದ್ದಳು. ಅಲ್ಲಿ ತನ್ನ ಗಂಡ ಬೇರೊಬ್ಬಳೊಂದಿಗೆ ಹೋಟೆಲ್ ರೂಮಿನೊಳಗೆ ಹೋಗಿದ್ದನ್ನು ನೋಡಿದ ಆಕೆ ಆ ರೂಮಿನಿಂದ ಗಂಡನ ಪ್ರೇಯಸಿಯನ್ನು ಎಳೆದುಕೊಂಡು ಬಂದಿದ್ದಾಳೆ.

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ
ಗಂಡನ ಪ್ರೇಯಸಿಗೆ ಥಳಿಸುತ್ತಿರುವ ಹೆಂಡತಿ
TV9 Web
| Updated By: ಸುಷ್ಮಾ ಚಕ್ರೆ|

Updated on: Sep 08, 2021 | 5:01 PM

Share

ಔರಂಗಾಬಾದ್: ಗಂಡ-ಹೆಂಡತಿಯ ನಡುವೆ ಬೇರೊಬ್ಬರು ಬಂದಾಗ ಸಂಸಾರವೇ ಹಾಳಾಗುತ್ತದೆ. ಅದು ಗಂಡಿರಲಿ, ಹೆಣ್ಣೇ ಇರಲಿ ಅಕ್ರಮ ಸಂಬಂಧದಿಂದ ಅದೆಷ್ಟೋ ಸಂಸಾರಗಳು ಹಾಳಾಗಿವೆ. ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಹೋಟೆಲ್ ಎದುರು ಕಾರಿನಲ್ಲಿ ತನ್ನ ಗಂಡನ ಜೊತೆ ಬೇರೆ ಯುವತಿ ಇರುವುದನ್ನು ನೋಡಿದ ಮಹಿಳೆ ಆ ಕಾರಿಗೆ ಅಡ್ಡಹಾಕಿ, ಕಾರಿನಿಂದ ಗಂಡನ ಪ್ರೇಯಸಿಯನ್ನು ಕೆಳಗಿಳಿಸಿ ಮನಬಂದಂತೆ ಆಕೆಗೆ ಥಳಿಸಿದ್ದಾಳೆ. ಇದರಿಂದ ಅವಮಾನಗೊಂಡ ಆ ಯುವತಿ ತನ್ನ ಮುಖ ಕಾಣದಂತೆ ದುಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆ ದುಪಟ್ಟಾವನ್ನು ಎಳೆದು ಹಾಕಿದ ಮಹಿಳೆ, ನಿನಗೆ ಇಂತಹ ಕೆಲಸ ಮಾಡೋವಾಗ ನಾಚಿಕೆಯಾಗಲಿಲ್ವ? ಈಗ ಯಾಕೆ ಮುಖ ಮುಚ್ಚಿಕೊಳ್ಳುತ್ತಿದ್ದೀಯಾ? ಎಂದು ಕಿಡಿ ಕಾರಿದ್ದಾಳೆ. ಅಲ್ಲದೆ, ಗಂಡನತ್ತ ಹೋಗಿ ಇವಳು ಯಾರು ಎಂಬುದು ನನಗೆ ಈಗಲೇ ಗೊತ್ತಾಗಬೇಕು. ಅವಳ ಜೊತೆ ಯಾಕೆ ಸುತ್ತಾಡುತ್ತಿದ್ದೀರ? ಎಂದು ಕಿರುಚಾಡಿದ್ದಾಳೆ. ಅದಕ್ಕೆ ಉತ್ತರಿಸದ ಆತ ತನ್ನ ಪ್ರೇಯಸಿಯನ್ನು ಹೆಂಡತಿಯಿಂದ ಕಾಪಾಡಲು ಪ್ರಯತ್ನಿಸಿದ್ದಾನೆ.

ಹೋಟೆಲ್ ರೂಮ್ ಬುಕ್ ಮಾಡಿದ್ದ ಆ ಗಂಡ ಮತ್ತು ಆತನ ಪ್ರೇಯಸಿ ಅದೇ ಹೋಟೆಲ್​ ಎದುರು ಇನ್ನೇನು ಕಾರು ನಿಲ್ಲಿಸಬೇಕು ಎಂಬಷ್ಟರಲ್ಲಿ ಹೆಂಡತಿ ಎದುರು ಬಂದಿದ್ದಳು. ಗಂಡನ ವರ್ತನೆ ಬಗ್ಗೆ ಅನುಮಾನಗೊಂಡಿದ್ದ ಹೆಂಡತಿ ಆತನನ್ನು ಹಿಂಬಾಲಿಸಿದ್ದಳು. ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆತನ ವಿಡಿಯೋ ಭಾರೀ ವೈರಲ್ ಆಗಿದೆ.

ಅದೇ ರೀತಿ ಗುಜರಾತ್​ನಲ್ಲಿ ಕೂಡ ಒಂದು ಘಟನೆ ನಡೆದಿದ್ದು, ತನ್ನ ಗಂಡ ಬೇರೊಬ್ಬಳೊಂದಿಗೆ ಹೋಟೆಲ್ ರೂಂನಲ್ಲಿ ಸರಸ-ಸಲ್ಲಾಪ ನಡೆಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಕೆಂಡಾಮಂಡಲವಾದ ಹೆಂಡತಿ ಆ ಯುವತಿಯನ್ನು ರೂಮಿನಿಂದ ಹೊರಗೆ ಎಳೆದುಕೊಂಡು ಬಂದು ಕೆನ್ನೆಗೆ ಹೊಡೆದಿದ್ದಾಳೆ. ತನ್ನ ಮಗಳ ಜೊತೆ ಶಾಪಿಂಗ್​ಗೆ ಹೋಗಿದ್ದ ಮಹಿಳೆ ಹೋಟೆಲ್​ಗೆ ಊಟಕ್ಕೆ ಹೋಗಿದ್ದಳು. ಅಲ್ಲಿ ತನ್ನ ಗಂಡ ಬೇರೊಬ್ಬಳೊಂದಿಗೆ ಹೋಟೆಲ್ ರೂಮಿನೊಳಗೆ ಹೋಗಿದ್ದನ್ನು ನೋಡಿದ ಆಕೆ ಆ ರೂಮಿನಿಂದ ಗಂಡನ ಪ್ರೇಯಸಿಯನ್ನು ಎಳೆದುಕೊಂಡು ಬಂದಿದ್ದಾಳೆ.

ಆ ಮಹಿಳೆ ಮತ್ತು ಆಕೆಯ ಮಗಳು ಸೇರಿ ರೂಮಿನಲ್ಲಿದ್ದ ಯುವತಿಯನ್ನು ಎಳೆದುಕೊಂಡು ಬಂದಿದ್ದು, ಬಟ್ಟೆಯಿಲ್ಲದೆ ರೂಮಿನಿಂದ ಹೊರಗೆ ಹೋಗಬೇಕೆಂದು ಗಲಾಟೆ ಮಾಡಿದ್ದಾರೆ. ನಂತರ ಆ ಯುವತಿಯ ಜೊತೆಗೆ ತನ್ನ ಗಂಡನಿಗೂ ಎಲ್ಲರೆದುರು ಹೊಡೆದಿರುವ ಆಕೆ ಮಾಡಿದ ಹೈಡ್ರಾಮದಿಂದ ಗಂಡನ ಅನೈತಿಕ ಸಂಬಂಧ ಬಟಾ ಬಯಲಾಗಿದೆ.

ಇದನ್ನೂ ಓದಿ: Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

(Crime News Wife Catches Cheating Husband With his Girlfriend Outside the Hotel Thrashes Her Video Viral)