Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

TV9 Digital Desk

| Edited By: Sushma Chakre

Updated on: Aug 28, 2021 | 8:16 PM

Shocking News | ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ 55 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯ ಗುಪ್ತಾಂಗವನ್ನು ಹೊಲಿದಿದ್ದಾನೆ.

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!
ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು

Follow us on

ಭೂಪಾಲ್: ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ (Extra Marital Affair) ಹೊಂದಿದ್ದಾಳೆ ಎಂಬ ಅನುಮಾನಗೊಂಡ ಗಂಡ ಆಕೆಗೆ ದೊಡ್ಡ ಶಿಕ್ಷೆಯನ್ನೇ ವಿಧಿಸಿದ್ದಾನೆ. ತನ್ನ ಹೆಂಡತಿ ಇನ್ನು ಯಾರೊಂದಿಗೂ ಲೈಂಗಿಕ ಕ್ರಿಯೆ ನಡೆಸಬಾರದು ಎಂದು ವ್ಯಕ್ತಿಯೋರ್ವ ತನ್ನ ಹೆಂಡತಿಯ ಗುಪ್ತಾಂಗಕ್ಕೆ (Private Part) ಹೊಲಿಗೆ ಹಾಕಿ, ಮುಚ್ಚಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ 55 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯ ಗುಪ್ತಾಂಗವನ್ನು ಹೊಲಿದಿದ್ದಾನೆ. ಇಲ್ಲಿನ ರಾಯ್ಲ ಗ್ರಾಮದಲ್ಲಿ ಆ. 24ರಂದು ಈ ಘಟನೆ ನಡೆದಿದೆ. ಆ ವ್ಯಕ್ತಿಯ 52 ವರ್ಷದ ಹೆಂಡತಿ ತಮ್ಮ ಮನೆಯ ಪಕ್ಕದಲ್ಲಿದ್ದ ಇನ್ನೋರ್ವ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಬಗ್ಗೆ ಆತನಿಗೆ ಅನುಮಾನ ಉಂಟಾಗಿತ್ತು. ಇದೇ ವಿಷಯಕ್ಕೆ ಇಬ್ಬರಿಗೂ ಅನೇಕ ಬಾರಿ ಜಗಳವೂ ಆಗಿತ್ತು.

ಹೀಗಾಗಿ, ಜಗಳವಾಡಿದ ನಂತರ ಆತ ತನ್ನ ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ್ದಾನೆ. ನೋವಿನಿಂದ ನರಳಾಡುತ್ತಿದ್ದ ಆ ಹೆಂಡತಿಯ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಯಿತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಆಗಿದ್ದಾರೆ. ಅವರಿಗೆ ಕೂಡ ಮದುವೆಯಾಗಿ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ತನ್ನ ವಿರುದ್ಧ ಕೇಸ್ ದಾಖಲಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: Viral News: ನಿಮಗಿದು ಗೊತ್ತಾ?; ಈ ಕಾಳಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್ ನೀಡಲಾಗುತ್ತೆ!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Viral News: Madhya Pradesh Man stitches wifes Private Part over suspicion of Extra Marital Affair)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada