ಕಾರಲ್ಲಿ ಬಂದು ಲೂಟಿ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳ ಕಳ್ ಮಂಜ ಅರೆಸ್ಟ್; 5 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಭರಣ ವಶಕ್ಕೆ
ಆಗಸ್ಟ್ 5ರಂದು ವಕೀಲರಿಗೆ ಹಣ ಕೊಡಲು ಬೆಂಗಳೂರು ಉತ್ತರ ತಾಲ್ಲೂಕಿನ ಗೋವಿಂದಪುರ ಗ್ರಾಮದ ಗಂಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮಂಜುನಾಥ ಅದರಿಂದಲೇ ಶುಲ್ಕ ಕಟ್ಟಿದ್ದ. 5 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನ ಕದ್ದಿದ್ದ ಖದೀಮ ಮಂಜುನಾಥನ ಕೃತ್ಯ ಮನೆಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ನೆಲಮಂಗಲ: ಕಾರಿನಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳ ಮಂಜುನಾಥ್ ಅಲಿಯಾಸ್ ಕಳ್ ಮಂಜ (35) ಎಂಬಾತನನ್ನು ಮಾದನಾಯಕನಹಳ್ಳಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ತುಮಕೂರು ಮೂಲದ ಮಂಜುನಾಥ್ 10ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ ಅರೋಪ ಎದುರಿಸುತ್ತಿದ್ದು, ಕಳ್ಳತನಕ್ಕಿಳಿಯುವಾಗ ಮೊಬೈಲ್ ಫೋನ್ ಬಳಸದೇ, ಯಾವುದೇ ಸುಳಿವು ಬಿಟ್ಟುಕೊಡದೇ ಪೊಲೀಸರಿಗೆ ತಲೆನೋವಾಗಿದ್ದ. ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ವಾಸವಿದ್ದ ಮಂಜುನಾಥ್ ಅಲಿಯಾಸ್ ಕಳ್ ಮಂಜ ತಾನು ಕದ್ದ ಚಿನ್ನವನ್ನ ಇಬ್ಬರು ಪತ್ನಿಯರ ಕಡೆಯಿಂದ ಗಿರಿವಿ ಇಡಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಚಾಲಾಕಿ ಕಳ್ಳ ಆಗಸ್ಟ್ 5ರಂದು ವಕೀಲರಿಗೆ ಹಣ ಕೊಡಲೆಂದು ಕಳ್ಳತನ ಮಾಡಲು ಹೋಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಮಂಜುನಾಥನನ್ನು ಬಂಧಿಸಿದ್ದು, ಈ ಕಾರ್ಯಾಚರಣೆಗೆ ಸಿಸಿಟಿವಿ ಸಹಕಾರಿಯಾಗಿದೆ. ಆಗಸ್ಟ್ 5ರಂದು ವಕೀಲರಿಗೆ ಹಣ ಕೊಡಲು ಬೆಂಗಳೂರು ಉತ್ತರ ತಾಲ್ಲೂಕಿನ ಗೋವಿಂದಪುರ ಗ್ರಾಮದ ಗಂಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮಂಜುನಾಥ ಅದರಿಂದಲೇ ಶುಲ್ಕ ಕಟ್ಟಿದ್ದ. 5 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನ ಕದ್ದಿದ್ದ ಖದೀಮ ಮಂಜುನಾಥನ ಕೃತ್ಯ ಮನೆಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಾರಿನೊಂದಿಗೆ ಆತನ ದೃಶ್ಯವೂ ಸೆರೆಯಾಗಿದ್ದರಿಂದ ಪೊಲೀಸರು ಅದರ ಜಾಡು ಹಿಡಿದು ಹೊರಟಿದ್ದಾರೆ.
ಸಿಸಿ ಕ್ಯಾಮೆರಾದ ದೃಶ್ಯ ಆಧರಿಸಿ ತನಿಖೆ ನಡೆಸುವಾಗ ಮಂಜುನಾಥ್ ಅಲಿಯಾಸ್ ಕಳ್ ಮಂಜ ಅಂಧ್ರಹಳ್ಳಿಯ ಚಿಕನ್ ಅಂಗಡಿ ಬಳಿ ಸೆರೆಯಾಗಿದ್ದಾನೆ. ಆತನಿಂದ ಸುಮಾರು 5 ಲಕ್ಷ ರೂಪಾಯಿ ಬೆಲೆಬಾಳುವ 160ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ಪೊಲೀಸರಿಗೆ ತಲೆನೋವಾಗಿ ಕಾಡಿದ್ದವನು ಕೊನೆಗೂ ಮಾದನಾಯಕನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕಾರಿನಲ್ಲೇ ಹೋಗಿ ಕಳ್ಳತನ ಮಾಡುತ್ತಿದ್ದ ಈತ ಕಳ್ಳತನಕ್ಕಿಳಿಯುವಾಗ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ, ಯಾವುದೇ ಸುಳಿವು ಬಿಟ್ಟು ಕೊಡುತ್ತಿರಲಿಲ್ಲ ಹಾಗೂ ಕದ್ದ ಚಿನ್ನವನ್ನ ಇಬ್ಬರು ಪತ್ನಿಯರ ಕಡೆಯಿಂದ ಗಿರಿವಿ ಇಡುತ್ತಿದ್ದ ಎನ್ನುವ ಅಂಶವೂ ಗಮನಾರ್ಹವಾಗಿದ್ದು, 10ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ ಅರೋಪ ಈತನ ಮೇಲಿರುವುದರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಮೈಸೂರು: ತಮ್ಮನ್ನು ಹಿಡಿಯಲು ಬರುತ್ತಿದ್ದಾನೆ ಎಂದು ಭಾವಿಸಿ ಅಮಾಯಕ ಹುಡುಗನಿಗೆ ಗುಂಡು ಹೊಡೆದು ಕೊಂದ ಕಳ್ಳರು
(Police arrest house robber named Kalmanja in Nelamangala)