AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಗಾರ್ಡ್ಸ್ ಅರೆಸ್ಟ್, 4 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಆರೋಪಿಗಳು ಮುತ್ತೂಟ್ ಫೈನಾನ್ಸ್ನಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಿದ್ರು. ಮೂಲತಃ ನೇಪಾಳದವರಾಗಿದ್ದ ರೋಹನ್, ಅಗ್ರಿ ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾರೆ. ಬಳಿಕ ತಡರಾತ್ರಿ ಯಾರು ಇಲ್ಲದನ್ನು ನೋಡಿ ಮುತ್ತೂಟ್ ಶಾಖೆಯ ರೋಲಿಂಗ್ ಶೆಟರ್ ಹೊಡೆದು ಒಳನುಗ್ಗಿದ್ದಾರೆ.

ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಗಾರ್ಡ್ಸ್ ಅರೆಸ್ಟ್, 4 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ
ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ಸ್
TV9 Web
| Updated By: ಆಯೇಷಾ ಬಾನು|

Updated on:Aug 25, 2021 | 1:29 PM

Share

ಬೆಂಗಳೂರು: ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬೆಂಗಳೂರಿನ ಬಾಣಸವಾಡಿ ಪೊಲೀಸರು ಹಿಡಿದಿದ್ದಾರೆ. ಹಾಗೂ ಬಂಧಿತರಿಂದ 4 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ರೋಹನ್ ಮತ್ತು ಅಗ್ರಿ ಬಂಧಿತ ಆರೋಪಿಗಳು.

ಆರೋಪಿಗಳು ಅಪಾರ್ಟ್ಮೆಂಟ್​ನಲ್ಲಿ ಸೆಕ್ಯೂರಿಟಿ ಕೆಲಸ ಮಾಡ್ತಿದ್ರು. ಮೂಲತಃ ನೇಪಾಳದ ಕಾಲಿಕೋಟ್​ನವರಾಗಿದ್ದ ರೋಹನ್, ಅಗ್ರಿ ಬೇರೆ ಬೇರೆ ಅಪಾರ್ಟ್ಮೆಂಟ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ಗಳಾಗಿದ್ದರು. ಕಳ್ಳತನಕ್ಕೂ ಮೊದಲು ಸ್ವಿಗ್ಗಿ ಮತ್ತು ಜೊಮ್ಯಾಟೊ ಡೆಲಿವರಿ ಬಾಯ್​ಗಳ ರೀತಿ ಟಿ-ಶರ್ಟ್​ ಧರಿಸಿ ಆರೋಪಿಗಳು ಹಲವಾರು ಬಾರಿ ಏರಿಯಾದಲ್ಲಿ ರೌಂಡ್ಸ್ ಹಾಕಿದ್ದಾರೆ. ನಂತ್ರ ಕಳ್ಳತನ ಮಾಡುವಾಗಲೂ ಸ್ವಿಗ್ಗಿ ಫುಡ್ ಡೆಲಿವರಿ ಬ್ಯಾಗ್​ನಲ್ಲಿ ಕಳ್ಳತನ ಮಾಡಲು ಬೇಕಾದ ಆಯುಧಗಳನ್ನು ತೆಗೆದುಕೊಂಡು ಬಂದಿದ್ದಾರೆ. ಬಳಿಕ ತಡರಾತ್ರಿ ಯಾರು ಇಲ್ಲದನ್ನು ನೋಡಿ ಮುತ್ತೂಟ್ ಶಾಖೆಯ ರೋಲಿಂಗ್ ಶೆಟರ್ ಹೊಡೆದು ಒಳನುಗ್ಗಿದ್ದಾರೆ.

ನಂತರ ಲಾಕರ್ ಮುರಿದು ಚಿನ್ನ ದೋಚಿದ್ದಾರೆ. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಸ್ವಲ್ಪವೂ ತಡ ಮಾಡದೇ ಸ್ಥಳಕ್ಕೆ ಬಂದ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕಳ್ಳತನ ಮಾಡಿ ಪರಾರಿಯಾಗಲು ರೆಡಿಯಾಗಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆಗಸ್ಟ್ 21ರ ರಾತ್ರಿ ನಡೆದಿದ್ದ ಕಳ್ಳತನ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಿಂದ ನಾಲ್ಕು ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Rashid Khan: ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ ರಶೀದ್ ಖಾನ್; ವಿಡಿಯೊ ನೋಡಿ

Published On - 12:24 pm, Wed, 25 August 21