ಟೊಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ರೌಡಿಪಟ್ಟಿ ಬೀಳುತ್ತೆ! ಹುಷಾರು ಇದು ಬೆಂಗಳೂರು ಪೊಲೀಸರ ಕ್ರಮ
ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಸಿ ಕ್ಯಾಟಗರಿ ರೌಡಿ ಪಟ್ಟಿ ಜಾರಿಗೊಳಿಸಿದ್ದಾರೆ. ಯಲಹಂಕದಲ್ಲಿ ಜುಲೈ 28ರಂದು ಬೈಕ್ ಸವಾರರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು.
ಬೆಂಗಳೂರು: ಸುಖಾ ಸುಮ್ಮನೆ ಟೋಯಿಂಗ್ (Towing) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಮೇಲೆ ಸಂಚಾರಿ ಪೊಲೀಸರು ರೌಡಿ ಪಟ್ಟಿ ಜಾರಿಗೊಳಿಸಿದ್ದಾರೆ. ಇತ್ತೀಚೆಗೆ ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವ ಪ್ರಕರಣ ಹೆಚ್ಚಾಗುತ್ತಿವೆ. ಯಲಹಂಕ ಮತ್ತು ಇಂದಿರಾನಗರ ವ್ಯಾಪ್ತಿಯಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಹಲ್ಲೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ಸಿ ಕ್ಯಾಟಗರಿ ರೌಡಿ ಪಟ್ಟಿ ಜಾರಿಗೊಳಿಸಿದ್ದಾರೆ. ಯಲಹಂಕದಲ್ಲಿ ಜುಲೈ 28ರಂದು ಬೈಕ್ ಸವಾರರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ವಿಜಯ್ ಮತ್ತು ರಾಜಶೇಖರ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಬ್ಬರ ವಿರುದ್ಧ ರೌಡಿ ಶೀಟ್ ಓಪನ್ ಆಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಬ್ಬಂದಿ ಬೈಕ್ ಟೋಯಿಂಗ್ ಮಾಡುತ್ತಿದ್ದರು. ಈ ವೇಳೆ ಟೋಲ್ ವಾಹನ ಏರಿ ಹೆಲ್ಮಟ್ನಿಂದ ಬೈಕ್ ಟೋಯಿಂಗ್ ಸಿಬ್ಬಂದಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇನ್ನು ಇದೇ ತಿಂಗಳು ಇಂದಿರಾನಗರದಲ್ಲಿ ಟೋಯಿಂಗ್ ಸಿಬ್ಬಂದಿಗಳ ಮೇಲೆ ನಡೆದಿತ್ತು. ಟೋಯಿಂಗ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಕೆಂಚೇಗೌಡ ಮತ್ತು ಪಾಷನನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದ ಕೆಂಚೇಗೌಡ ಸ್ಥಳೀಯರ ಪ್ರಚೋದನೆಗೊಳಗಾಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಚಪ್ಪಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದರು. ಸದ್ಯ ಬಂಧಿತರ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಸಿದ್ಧತೆ ನಡೆಯುತ್ತಿದೆ. ಟೋಯಿಂಗ್ ಸಿಬ್ಬಂದಿಗಳ ಮೇಲೆ ದೂರು ಇದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಆಗ ಕಾನೂನು ಕೈಗೆತ್ತಿಕೊಂಡು ಆರೋಪಿಗಳ ಮೇಲೆ ರೌಡಿ ಪಟ್ಟಿ ಅಸ್ತ್ರ ಪ್ರಯೋಗಿಸುತ್ತಾರೆ.
ಇದನ್ನೂ ಓದಿ
ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೂ ಆತಂಕ
ಬಾಡಿಗೆ ಕೇಳಿದಕ್ಕೆ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಬಾಡಿಗೆದಾರ, ಮಾಲೀಕ ಹಾಗೂ ಆತನ ಪತ್ನಿ ತಲೆಗೆ ಗಾಯ
(A rowdy list has been issued by the traffic police on charges of assaulting a towing crew)
Published On - 11:44 am, Wed, 25 August 21