ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಗೂ ಆತಂಕ

ಮಂಗಳವಾರ ಬಂದ 78 ಜನರಲ್ಲಿ 46ಮಂದಿ ಅಫ್ಘಾನ್​ ಸಿಖ್​ ಹಾಗೂ ಹಿಂದು ಸಮುದಾಯದವರು ಇದ್ದಾರೆ. ಇವರೆಲ್ಲ ಕಾಬೂಲ್​ನಿಂದ ದುಶಾಂಬೆ ಮಾರ್ಗವಾಗಿ, ಏರ್​ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ.

ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಗೂ ಆತಂಕ
ಕಾಬೂಲ್​​ನಿಂದ ಬಂದ ಪ್ರಯಾಣಿಕರು
Follow us
| Updated By: Lakshmi Hegde

Updated on:Aug 25, 2021 | 10:09 AM

ಉಗ್ರರ ಕೈವಶದಲ್ಲಿರುವ ಅಫ್ಘಾನಿಸ್ತಾನ (Afghanistan) ಜನರನ್ನು ಭಾರತಕ್ಕೆ ಕರೆತರುವ ‘ಆಪರೇಶನ್​ ದೇವಿ ಶಕ್ತಿ’ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಸೋಂಕಿ (Coronavirus)ನ ಆತಂಕ ಕೂಡ ಹೆಚ್ಚಾಗುತ್ತಿದೆ. ಮಂಗಳವಾರ ಕಾಬೂಲ್​ (Kabul)ನಿಂದ ಬಂದ 78 ಜನರಲ್ಲಿ 16 ಮಂದಿಗೆ ಕೊವಿಡ್​ 19 ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೀಗ ಅಫ್ಘಾನಿಸ್ತಾನದ ಗುರುದ್ವಾರಗಳಿಂದ ಗುರು ಗ್ರಂಥ ಸಾಹೀಬ್​​ ಪವಿತ್ರ ಗ್ರಂಥ ತಂದ ಮೂವರಲ್ಲೂ ಸಹ ಕೊರೊನಾ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಯವರಿಗೂ ಸೋಂಕಿನ ಆತಂಕ ಶುರುವಾಗಿದೆ.  ಯಾಕೆಂದರೆ ನಿನ್ನೆ ಈ ಮೂವರು ತಂದಿದ್ದ ಗುರು ಗ್ರಂಥ ಸಾಹೀಬ್​ ಸ್ವರೂಪ್​​ನ್ನು ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ, ವಿ ಮುರಳೀಧರನ್ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್. ಪಿ. ಸಿಂಗ್ ಸ್ವೀಕರಿಸಿದ್ದರು. 

ಮಂಗಳವಾರ ಬಂದ 78 ಜನರಲ್ಲಿ 46ಮಂದಿ ಅಫ್ಘಾನ್​ ಸಿಖ್​ ಹಾಗೂ ಹಿಂದು ಸಮುದಾಯದವರು ಇದ್ದಾರೆ. ಇವರೆಲ್ಲ ಕಾಬೂಲ್​ನಿಂದ ದುಶಾಂಬೆ ಮಾರ್ಗವಾಗಿ, ಏರ್​ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ. ಅದರಲ್ಲಿ ಮೂವರು ಸಿಖ್​ರು ತಂದಿದ್ದ ಪವಿತ್ರ ಪುಸ್ತಕದ ಪ್ರತಿಯನ್ನು ದೆಹಲಿ ಇಂದಿರಾ ಗಾಂಧಿ ಏರ್​ಪೋರ್ಟ್​ನಲ್ಲಿ ಹರ್ದೀಪ್​ ಸಿಂಗ್​ ಪುರಿ, ವಿ.ಮುರಳೀಧರನ್​ ಮತ್ತು ಆರ್​.ಪಿ.ಸಿಂಗ್​ ಸ್ವೀಕರಿಸಿದ್ದಾರೆ. ನಂತರ ಅದನ್ನು ನ್ಯೂ ಮಹಾವೀರ್ ನಗರದಲ್ಲಿರುವ ಗುರು ಅರ್ಜನ್​ ದೇವ್​ ಜಿ ಗುರುದ್ವಾರಕ್ಕೆ ಕೊಂಡೊಯ್ಯಲಾಗಿದೆ. ಇದೀಗ ಆ ಮೂವರಲ್ಲೂ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಬಿಜೆಪಿ ನಾಯಕರಿಗೂ ಕೊರೊನಾ ಆತಂಕ ಶುರುವಾಗಿದೆ.

ತಾಲಿಬಾನ್​​ನಿಂದ ಎಚ್ಚರಿಕೆ ಈ ಮಧ್ಯೆ ತಾಲಿಬಾನ್​ ಯುಎಸ್​ಗೆ ಒಂದು ಖಡಕ್​ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಆಗಸ್ಟ್​ 31ರೊಳಗೆ ಮುಗಿಸಬೇಕು ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ ಜೋ ಬೈಡನ್​ ಕೂಡ, ತಾವು ಆಗಸ್ಟ್​ 31ರೊಳಗೆ ಸ್ಥಳಾಂತರ ಕಾರ್ಯ  ಪೂರ್ಣಗೊಳಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈಗ ಭದ್ರತಾ ಸವಾಲುಗಳೊಂದಿಗೆ ಕೊರೊನಾ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್​; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

Published On - 9:58 am, Wed, 25 August 21

ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​