‘ತಕ್ಕ ಉತ್ತರ ಕೊಡುತ್ತೇವೆ’ ಎಂಬ ವಿಡಿಯೊ  ಟ್ವೀಟ್ ಮೂಲಕ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿದ ನಾರಾಯಣ್ ರಾಣೆ ಪುತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಶಿವಸೇನೆಯ ಸಂಸದ ವಿನಾಯಕ್ ರಾವುತ್ ಅವರು ರಾಣೆಯನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಈ ರೀತಿ ಭಾಷೆ ಬಳಸುವ ರಾಣೆ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಾರೆ? ಎಂದು ರಾವುತ್ ಪ್ರಶ್ನಿಸಿದ್ದಾರೆ.

‘ತಕ್ಕ ಉತ್ತರ ಕೊಡುತ್ತೇವೆ’ ಎಂಬ ವಿಡಿಯೊ  ಟ್ವೀಟ್ ಮೂಲಕ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿದ ನಾರಾಯಣ್ ರಾಣೆ ಪುತ್ರ
ನಾರಾಯಣ್ ರಾಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 25, 2021 | 11:25 AM

ಮುಂಬೈ: ಕೇಂದ್ರ ಸಚಿವ ನಾರಾಯಣ್ ರಾಣೆ (Narayan Rane) ಅವರ ಪುತ್ರ ನಿತೇಶ್ ಮಂಗಳವಾರ ತಡರಾತ್ರಿ ವಿಡಿಯೊ ಕ್ಲಿಪ್ ಹಂಚಿಕೊಂಡಿದ್ದು, ತನ್ನ ತಂದೆಯ ಬಂಧನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. 2010ರ ಸಿನಿಮಾ ‘ರಾಜನೀತಿ’ಯ ವಿಡಿಯೊ ತುಣುಕೊಂದರಲ್ಲಿ ನಟ ಮನೋಜ್ ಬಾಜಪೇಯಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು ಅವರ ವಿರೋಧಿಗಳಿಗೆ “ಕರಾರ ಜವಾಬ್” (ಖಡಕ್ ಉತ್ತರ) ನೀಡುವುದಾಗಿ ಹೇಳುತ್ತಿರುವ ದೃಶ್ಯವಾಗಿದೆ ಅದು. ಅವರ ತಂದೆ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ್ ರಾಣೆ ಅವರನ್ನು ಮಂಗಳವಾರ ರತ್ನಗಿರಿಯನ್‌ನ ಸಂಗಮೇಶ್ವರದಲ್ಲಿ ಬಂಧಿಸಲಾಗಿದೆ. ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನಾರಾಯಣ್ ರಾಣೆ ಹೇಳಿದ್ದರು. “ಭಾರತದ ಸ್ವಾತಂತ್ರ್ಯದ ವರ್ಷ ಮುಖ್ಯಮಂತ್ರಿಗೆ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣದ ಸಮಯದಲ್ಲಿ ಎಷ್ಟನೇ ವರ್ಷದ ಸ್ವಾತಂತ್ರ್ಯೋತ್ಸವ ಎಂದು ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಅಲ್ಲಿದ್ದಿದ್ದರೆ, ನಾನು ಅವನ (ಠಾಕ್ರೆ) ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಣೆ ಜನ್ ಆಶೀರ್ವಾದ್ ಯಾತ್ರೆ  ವೇಳೆ  ಹೇಳಿದ್ದರು.

ಅವರ ಭಾಷಣವು ಶಿವಸೇನೆಯ ಬೆಂಬಲಿಗರಿಂದ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಿತು ಮತ್ತು ಅವರ ವಿರುದ್ಧ ಐದು ಎಫ್ಐಆರ್ ಗಳನ್ನು ದಾಖಲಿಸಲಾಯಿತು. ಬಂಧಿಸಿದ ಸುಮಾರು ಒಂಬತ್ತು ಗಂಟೆಗಳ ನಂತರ ರಾಣೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ರಾಜ್ಯದಲ್ಲಿ ಆತನ ವಿರುದ್ಧ ಇತರ ನಾಲ್ಕು ಎಫ್‌ಐಆರ್‌ಗಳಿವೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ರಾಣೆ ಅವರ ಹೇಳಿಕೆಗಳನ್ನು ಒಪ್ಪದಿದ್ದರೂ ಅವರ ಬಂಧನವು ಸಾಂವಿಧಾನಿಕ ಪ್ರಕ್ರಿಯೆಗಳನ್ನು ಉಲ್ಲಂಘಿಸಿದೆ ಬಿಜೆಪಿ ಹೇಳಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಶಿವಸೇನೆಯ ಸಂಸದ ವಿನಾಯಕ್ ರಾವುತ್ ಅವರು ರಾಣೆಯನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಈ ರೀತಿ ಭಾಷೆ ಬಳಸುವ ರಾಣೆ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಾರೆ? ಎಂದು ರಾವುತ್ ಪ್ರಶ್ನಿಸಿದ್ದಾರೆ.

ರಾಣೆ ಮಂಗಳವಾರ ಠಾಕ್ರೆ ವಿರುದ್ಧ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು, “ನಾನು ಯಾವುದೇ ಅಪರಾಧ ಮಾಡಿಲ್ಲ. ನಾನು ಯಾಕೆ ವಿಷಾದಿಸಬೇಕು? ” ರಾಣೆ ತನ್ನ “ಸನ್ನಿಹಿತ” ಬಂಧನದ ಬಗ್ಗೆ ಊಹಿಸದಂತೆ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು. “ನಾನು ಮಾಧ್ಯಮಗಳಲ್ಲಿ ಟಿವಿಯಲ್ಲಿನ ಸುದ್ದಿಯನ್ನು ಪರಿಶೀಲಿಸುವಂತೆ ಒತ್ತಾಯಿಸುತ್ತೇನೆ, ಇಲ್ಲದಿದ್ದರೆ ಊಹಾಪೋಹಗಳ ಆಧಾರದ ಮೇಲೆ ಸುದ್ದಿ ಪ್ರಕಟಿಸಿದ್ದಕ್ಕೆ ಪ್ರಕರಣ ದಾಖಲಿಸುತ್ತೇನೆ. ನಾನು ಸಾಮಾನ್ಯ (ಸಾಮಾನ್ಯ) ವ್ಯಕ್ತಿ ಎಂದು ನೀವು ಭಾವಿಸುತ್ತೀರಾ? ” ಅವರು ಹೇಳಿದರು.

ರಾಜ್ಯಸಭಾ ಸದಸ್ಯರು ಬಾಂಬೆ ಹೈಕೋರ್ಟನ್ನು ಸಂಪರ್ಕಿಸಿ ವಿವಾದದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿದರು. ನ್ಯಾಯಮೂರ್ತಿ ಎಸ್.ಎಸ್.ಶಿಂಧೆ ಮತ್ತು ನ್ಯಾಯಮೂರ್ತಿ ಎನ್.ಜೆ.ಜಮಾದರ್ ಅವರ ವಿಭಾಗೀಯ ಪೀಠದ ಮುಂದೆ, ರಾಣೆ ಅವರ ವಿರುದ್ಧ ಎಫ್ಐಆರ್ ಆಧಾರದ ಮೇಲೆ  “ಅನಿಯಂತ್ರಿತ” ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವ ನಾರಾಯಣ ರಾಣೆಗೆ ರಾತ್ರಿ ಜಾಮೀನು ನೀಡಿದ ಕೋರ್ಟ್​; ಷರತ್ತು ಅನ್ವಯ

(Union Minister Narayan Rane’s son Nitesh shared a video clip Karara jawaab milega attacks Maharashtra govt)

Published On - 11:24 am, Wed, 25 August 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ