AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ನಾರಾಯಣ ರಾಣೆಗೆ ರಾತ್ರಿ ಜಾಮೀನು ನೀಡಿದ ಕೋರ್ಟ್​; ಷರತ್ತು ಅನ್ವಯ

Narayan Rane: ಕಳೆದ 20ವರ್ಷಗಳಲ್ಲಿ ಅಧಿಕಾರ ಅವಧಿಯಲ್ಲೇ ಬಂಧಿತರಾದ ಮೂರನೇ ಕೇಂದ್ರ ಸಚಿವರು ನಾರಾಯಣ ರಾಣೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಪ್ರಕರಣವನ್ನು ನ್ಯಾಯಾಧೀಶ ಶೇಖಬಾಬಾಸೊ ಎಸ್. ಪಾಟೀಲ್ ವಿಚಾರಣೆ ನಡೆಸಿದ್ದಾರೆ.

ಕೇಂದ್ರ ಸಚಿವ ನಾರಾಯಣ ರಾಣೆಗೆ ರಾತ್ರಿ ಜಾಮೀನು ನೀಡಿದ ಕೋರ್ಟ್​; ಷರತ್ತು ಅನ್ವಯ
ನಾರಾಯಣ ರಾಣೆ
TV9 Web
| Updated By: Lakshmi Hegde|

Updated on:Aug 25, 2021 | 9:10 AM

Share

ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿ ಬಂಧಿತರಾಗಿದ್ದ ಕೇಂದ್ರ ಸಚಿವ, ಬಿಜೆಪಿ ನಾಯಕ ನಾರಾಯಣ ರಾಣೆಯವರಿಗೆ ಮಹದ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಜಾಮೀನು ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಸ್ವಾತಂತ್ರ್ಯ ದಿನ ಬಂದ ದಿನ ಗೊತ್ತಿಲ್ಲ. ಭಾಷಣದ ವೇಳೆ ಹಿಂದಕ್ಕೆ ಬಾಗಿ, ಕೇಳಿದ್ದರು. ನಾನು ಅಲ್ಲೇ ಇದ್ದಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು. ಅದು ಶಿವಸೇನೆ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದ ಆಕ್ರೋಶ ಹುಟ್ಟುಹಾಕಿತ್ತು. ನಂತರ ​ ಪೊಲೀಸರು ನಾರಾಯಣ ರಾಣೆಯವರನ್ನು ಬಂಧಿಸಿದ್ದರು. ನಂತರ ಅವರನ್ನು ಮಹದ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ರಾತ್ರಿ 11.30ರ ಹೊತ್ತಿಗೆ ಅವರಿಗೆ ಜಾಮೀನು ಸಿಕ್ಕಿದೆ. ಹಾಗೇ, ಜಾಮೀನು ಬಾಂಡ್​​ 15,000 ರೂ.ನೀಡಬೇಕು ಮತ್ತು ಆಗಸ್ಟ್​ 30 ಮತ್ತು ಸೆಪ್ಟೆಂಬರ್​ 6ರಂದು ರಾಯಗಡ್​ನಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ಕಳೆದ 20ವರ್ಷಗಳಲ್ಲಿ ಅಧಿಕಾರ ಅವಧಿಯಲ್ಲೇ ಬಂಧಿತರಾದ ಮೂರನೇ ಕೇಂದ್ರ ಸಚಿವರು ನಾರಾಯಣ ರಾಣೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಪ್ರಕರಣವನ್ನು ನ್ಯಾಯಾಧೀಶ ಶೇಖಬಾಬಾಸೊ ಎಸ್. ಪಾಟೀಲ್ ವಿಚಾರಣೆ ನಡೆಸಿದ್ದಾರೆ. ಇಂಥ ತಪ್ಪನ್ನು ಮತ್ತೆ ಮಾಡಬೇಡಿ ಎಂದು ರಾಣೆಯವರಿಗೆ ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲ, ನಾರಾಯಣ ರಾಣೆಯವರ ಧ್ವನಿ ಮಾದರಿಯನ್ನು ಸಂಗ್ರಹಿಸುವುದಕ್ಕೂ ಏಳು ದಿನ ಮುಂಚೆ ಅವರಿಗೆ ನೋಟಿಸ್​ ಕೊಡಿ ಎಂದೂ ಪೊಲೀಸರಿಗೆ ಹೇಳಿದೆ.  ನಿನ್ನೆ ರಾಣೆಯವರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದ ಪೊಲೀಸರು, ರಾಣೆಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಅದರ ವಿರುದ್ಧವಾಗಿ ರಾಣೆ ಪರ ವಕೀಲರು ಜಾಮೀನು ನೀಡಬೇಕು ಎಂದು ಕೇಳಿದ್ದರು. ಪೊಲೀಸರ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಷರತ್ತುಬದ್ಧ ಜಾಮೀನು ನೀಡಿದೆ.

ನಿನ್ನೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಣೆ ಹೇಳಿಕೆ ನೀಡಿದ ಬಳಿಕ ಗೋಲ್ವಾಲಿಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು, ಸಂಗಮೇಶ್ವರ ಠಾಣೆಗೆ ಕರೆದುಕೊಂಡುಹೋಗಲಾಗಿತ್ತು. ನಂತರ ರಾಣೆಯವರನ್ನು ರಾಯಗಡ್​ ಪೊಲೀಸರು ರಾಣೆಯವರನ್ನು ಬಂಧಿಸಿದ್ದರು. ಮೂರು ಕಡೆ ಅವರ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಆ ಎಫ್​ಐಆರ್​​ಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿ, ರಾಣೆ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ಕೋರ್ಟ್ ನಿರಾಕರಿಸಿತ್ತು.

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ; ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು

Hyderabad Biryani: ಅಫ್ಘಾನಿಸ್ತಾನ ತಾಲಿಬಾನ್ ಕೈಗೆ: ಹೈದರಾಬಾದ್ ಬಿರಿಯಾನಿ ಬೆಲೆ ಏರುವುದು ಖಚಿತ

Published On - 8:59 am, Wed, 25 August 21