AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delta Plus Variant: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿಯ ಹಾವಳಿ; 103ಕ್ಕೆ ಏರಿದ ಸೋಂಕಿತರ ಸಂಖ್ಯೆ

ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದರೂ ಈ ಡೆಲ್ಟಾ ಪ್ಲಸ್​ ರೂಪಾಂತರಿಯಿಂದ ಸಂಪೂರ್ಣವಾಗಿ ಪಾರಾಗಲು ಸಾಧ್ಯವಿಲ್ಲ. ಈ ರೂಪಾಂತರಿ ಸೋಂಕು ಲಸಿಕೆ ಪಡೆದವರಿಗೆ, ಪಡೆಯದವರಿಗೆ ಎರಡೂ ವರ್ಗಕ್ಕೂ ತಗುಲುತ್ತದೆ.

Delta Plus Variant: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿಯ ಹಾವಳಿ; 103ಕ್ಕೆ ಏರಿದ ಸೋಂಕಿತರ ಸಂಖ್ಯೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Aug 25, 2021 | 9:37 AM

Share

ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ಅಪಾಯಕಾರಿ ಡೆಲ್ಟಾ ಪ್ಲಸ್​ ರೂಪಾಂತರಿ (Delta Plus Variant) ವೈರಾಣು ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 24ಗಂಟೆಯಲ್ಲಿ 27 ಹೊಸ ಕೇಸ್​ಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಲ್ಟಾ ಪ್ಲಸ್​ ರೂಪಾಂತರಿ ಸೋಂಕಿತರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.  ಈಗ ಹೊಸದಾಗಿ ಗಡ್​ಚಿರೋಲಿಯಲ್ಲಿ ಆರು, ಅಮರಾವತಿಯಲ್ಲಿ ಆರು, ನಾಗ್ಪುರದಲ್ಲಿ 5, ಅಹ್ಮದ್​ನಗರದಲ್ಲಿ 4, ಯವತ್ಮಲ್​​ನಲ್ಲಿ ಮೂರು ಮತ್ತು ನಾಸಿಕ್​ನಲ್ಲಿ ಎರಡು ಡೆಲ್ಟಾ ಪ್ಲಸ್​ ಕೊರೊನಾ ಕೇಸ್​ಗಳು ದಾಖಲಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಹಾಗೇ, ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತ (Covid 19)ರ ಸಂಖ್ಯೆ 53,433ರಷ್ಟಿದೆ. ಇಲ್ಲಿಯವರೆಗೆ ಒಟ್ಟು 1,36,067 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ. 

ಲಸಿಕೆ ಪಡೆದರೂ ತಗುಲತ್ತೆ ಡೆಲ್ಟಾ ಪ್ಲಸ್ ಸದ್ಯ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದರೂ ಈ ಡೆಲ್ಟಾ ಪ್ಲಸ್​ ರೂಪಾಂತರಿಯಿಂದ ಸಂಪೂರ್ಣವಾಗಿ ಪಾರಾಗಲು ಸಾಧ್ಯವಿಲ್ಲ. ಈ ರೂಪಾಂತರಿ ಸೋಂಕು ಲಸಿಕೆ ಪಡೆದವರಿಗೆ, ಪಡೆಯದವರಿಗೆ ಎರಡೂ ವರ್ಗಕ್ಕೂ ತಗುಲುತ್ತದೆ. ಆದರೆ ಒಂದು ಸಮಾಧಾನದ ಸಂಗತಿಯೆಂದರೆ ಲಸಿಕೆ ಪಡೆದ ವರ್ಗದಲ್ಲಿ ಸಾವಿನ ಪ್ರಮಾಣ ಕಡಿಮೆ ಇರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.  ಹಾಗಿದ್ದಾಗ್ಯೂ, ಡೆಲ್ಟಾ ಪ್ಲಸ್​ ಅಪಾಯತೆಯನ್ನು ಕಡಿಮೆ ಮಾಡಿಕೊಳ್ಳಲು ಲಸಿಕೆಯ ವೇಗ ಹೆಚ್ಚಿಸಿಕೊಳ್ಳಬೇಕು ಎಂದು ಐಸಿಎಂಆರ್ ತಿಳಿಸಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲೇ ಹೆಚ್ಚಿನ ಡೆಲ್ಟಾ ಪ್ಲಸ್​ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ; ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅನ್ಯ ಪಕ್ಷಗಳ ಸವಾಲು

Published On - 9:22 am, Wed, 25 August 21