Hyderabad Biryani: ಅಫ್ಘಾನಿಸ್ತಾನ ತಾಲಿಬಾನ್ ಕೈಗೆ: ಹೈದರಾಬಾದ್ ಬಿರಿಯಾನಿ ಬೆಲೆ ಏರುವುದು ಖಚಿತ

ಅಫ್ಘಾನಿಸ್ತಾನದಿಂದ ಡ್ರೈ ಫ್ರುಟ್ಸ್ ಆಮದಾಗದಿದ್ದರೂ ಇತರ ಮೂಲಗಳಿಂದ ನಾವು ಡ್ರೈ ಫ್ರುಟ್ಸ್ ಆಮದು ಮಾಡಿಕೊಳ್ಳುತ್ತೇವೆ’ ಎಂದು ಭಾರತೀಯ ರಫ್ತು ಮಂಡಳಿಯ ಮಹಾ ನಿರ್ದೇಶಕ ಡಾ.ಅಜಯ್ ಸಹಾಯ್ ತಿಳಿಸಿದರು.

Hyderabad Biryani: ಅಫ್ಘಾನಿಸ್ತಾನ ತಾಲಿಬಾನ್ ಕೈಗೆ: ಹೈದರಾಬಾದ್ ಬಿರಿಯಾನಿ ಬೆಲೆ ಏರುವುದು ಖಚಿತ
ಹೈದರಾಬಾದ್ ಬಿರಿಯಾನಿ
Follow us
TV9 Web
| Updated By: shruti hegde

Updated on: Aug 25, 2021 | 8:50 AM

ಹೈದರಾಬಾದ್: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವುದು ಭಾರತದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಈಗಾಗಲೇ ಡ್ರೈ ಫ್ರುಟ್ಸ್ ಬೆಲೆ ಗಗನಕ್ಕೇರುವ ಎಲ್ಲ ಸೂಚನೆಗಳು ದೊರೆತಿದ್ದು ಇದು ವಿಶ್ವವಿಖ್ಯಾತ ಹೈದರಾಬಾದ್ ಬಿರಿಯಾನಿಯ ಬೆಲೆ ತುಟ್ಟಿಯಾಗುವ ಎಲ್ಲ ಸುಳಿವು ನೀಡಿದೆ. ಹೈದರಾಬಾದ್ ಬಿರಿಯಾನಿ ತಯಾರಿಸಲು ಅತ್ಯಂತ ಪ್ರಮುಖ ಸಾಮಾಗ್ರಿಯಾದ ಡ್ರೈ ಫ್ರುಟ್ಸ್ ಬೆಲೆ ಏರಿಕೆ ಸಹಜವಾಗಿ ಬಿರಿಯಾನಿಯ ಬೆಲೆ ಏರಿಕೆಗೆ ಕಾರಣವಾಗಲಿದೆ. ಈಕುರಿತು ಪ್ರತಿಕ್ರಿಯೆ ನೀಡಿದ ಭಾರತೀಯ ರಫ್ತು ಮಂಡಳಿಯ (Federation of Indian Export Organisation – FIEO) ಮಹಾ ನಿರ್ದೇಶಕ ಡಾ.ಅಜಯ್ ಸಹಾಯ್ , ‘ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದಿಂದ ಆಮದಾಗುವ ವಸ್ತುಗಳನ್ನು ತಡೆಹಿಡಿದಿದೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಆದರೆ ಸದ್ಯ ದೇಶದಲ್ಲಿ ಇರುವ ಡ್ರೈ ಫ್ರುಟ್ಸ್ ಬಳಸಿಯೇ ವ್ಯವಹಾರ ನಡೆಸುತ್ತೇವೆ. ಅಫ್ಘಾನಿಸ್ತಾನದಿಂದ ಡ್ರೈ ಫ್ರುಟ್ಸ್ ಆಮದಾಗದಿದ್ದರೂ ಇತರ ಮೂಲಗಳಿಂದ ನಾವು ಡ್ರೈ ಫ್ರುಟ್ಸ್ ಆಮದು ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಭಾರತದೊಂದಿಗೆ ಎಲ್ಲ ರೀತಿಯ ಆಮದು-ರಫ್ತು ವ್ಯವಹಾರಗಳನ್ನು ನಿರ್ಬಂಧಿಸಿರುವುದಾಗಿ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ಆಡಳಿತ ಹೇಳಿದೆ. ಈ ಬಗ್ಗೆ ಭಾರತೀಯ ರಫ್ತು ಮಂಡಳಿಯ ಮಹಾ ನಿರ್ದೇಶಕ ಡಾ.ಅಜಯ್ ಸಹಾಯ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಮೂಲಕ ರಸ್ತೆ ಮಾರ್ಗವಾಗಿ ಬರುತ್ತಿದ್ದ ಸರಕುಗಳನ್ನು ತಾಲಿಬಾನ್ ನಿರ್ಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಪಾಕಿಸ್ತಾನ ಮಾರ್ಗವಾಗಿ ಸರಕುಗಳು ಬರುತ್ತಿದ್ದವು. ಆದರೆ ಈಗ ತಾಲಿಬಾನ್ ಪಾಕಿಸ್ತಾನದ ಮಾರ್ಗವಾಗಿ ಸರಕು ಸಾಗಣೆಯನ್ನು ನಿರ್ಬಂಧಿಸಿದೆ. ಹೀಗಾಗಿ ಎಲ್ಲ ಬಗೆಯ ಆಮದು ನಿಂತುಹೋಗಿದೆ ಎಂದು ಅವರು ವಿವರಿಸಿದ್ದಾರೆ.

ಅಫ್ಘಾನಿಸ್ತಾನದೊಂದಿಗೆ ಭಾರತವು ಹಲವು ವರ್ಷಗಳಿಂದ ವ್ಯಾಪಾರ ಮತ್ತು ಹೂಡಿಕೆ ವಹಿವಾಟನ್ನು ನಡೆಸುತ್ತಿದೆ. ಅಫ್ಘಾನಿಸ್ತಾನವು ದೊಡ್ಡ ಪ್ರಮಾಣದಲ್ಲಿ ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. 2021ರಲ್ಲಿ ಈವರೆಗೆ ₹ 83 ಕೋಟಿಯಷ್ಟು ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದೇವೆ. ಅಲ್ಲಿಂದ ₹ 51 ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ಭಾರತೀಯರ ಹೂಡಿಕೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಸುಮಾರು 400 ಯೋಜನೆಗಳಿಗಾಗಿ ಭಾರತವು ₹ 22,000 ಕೋಟಿ ಮೌಲ್ಯದ ಹೂಡಿಕೆ ಮಾಡಿದೆ. ಈ ಪೈಕಿ ಕೆಲ ಕಾಮಗಾರಿಗಳು ಇನ್ನೂ ಅನುಷ್ಠಾನದ ಹಂತದಲ್ಲಿವೆ ಎಂದು ಸಹಾಯ್ ಹೇಳಿದ್ದಾರೆ.

ಕೆಲ ಸಾಮಗ್ರಿಗಳನ್ನು ಉತ್ತರ-ದಕ್ಷಿಣ ಸರಕು ಸಾಗಣೆ ಮಾರ್ಗದಲ್ಲಿ ಕಳುಹಿಸಿಕೊಡಲಾಗುತ್ತಿದೆ. ಕೆಲವೊಂದಿಷ್ಟು ಸರಕುಗಲು ದುಬೈ ಮಾರ್ಗದಲ್ಲಿಯೂ ಸಾಗುತ್ತಿವೆ ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಭಾರತವು ಉತ್ತಮ ವ್ಯಾಪಾರ ಸಂಬಂಧ ಹೊಂದಿದೆ. ಪ್ರಸ್ತುತ ಭಾರತವು ಸಕ್ಕರೆ, ಔಷಧ, ಬಟ್ಟೆ, ಟೀ, ಕಾಫಿ, ಸಾಂಬಾರ ಪದಾರ್ಥಗಳು ಮತ್ತು ಟ್ರಾನ್ಸ್​ಮಿಷನ್ ಟವರ್​ಗಳನ್ನು ರಫ್ತ ಮಾಡುತ್ತಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಒಣಹಣ್ಣುಗಳು, ಅಂಟು ಮತ್ತು ಈರುಳ್ಳಿ ಆಮದಾಗುತ್ತಿದೆ.

ಇದನ್ನೂ ಓದಿ: 

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

(Afghanistan Crisis dry fruits import is stopped Hyderabad Biryani price is sure to increase)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ