Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?

ತಂದೆಯ ಹಾದಿಯಲ್ಲಿ ಮುನ್ನಡೆದಿರುವ ಅಹ್ಮದ್ ಮಸೂದ್ ಇದೀಗ ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

Ahmad Massoud: ಪಂಜ್​ಶಿರ್​ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟ ಮುಂದುವರಿಸುತ್ತಿರುವ ಅಹ್ಮದ್ ಮಸೂದ್ ಯಾರು?
ಅಹ್ಮದ್ ಮಸೂದ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 24, 2021 | 10:46 PM

1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಅಫ್ಘಾನಿಸ್ತಾನದಲ್ಲಿ ನಡೆದ ಸಂಘರ್ಷದ ನೇತೃತ್ವ ವಹಿಸಿದ್ದ ಮುಂಚೂಣಿಯ ನಾಯಕರಲ್ಲಿ ಅಹ್ಮದ್ ಶಾ ಮಸೂದ್ ಸಹ ಒಬ್ಬರು. ಸೆಪ್ಟೆಂಬರ್ 9, 2001ರಂದು ತಾಲಿಬಾನ್ ಮತ್ತು ಅಲ್​ಖೈದಾ ಉಗ್ರರು ಮಸೂದ್​ರನ್ನು ಕೊಂದಿದ್ದರು. ಇದೇ ಅಹ್ಮದ್ ಶಾ ಮಸೂದ್​ರ ಮಗ ಅಹ್ಮದ್ ಮಸೂದ್. ತಂದೆಯ ಹಾದಿಯಲ್ಲಿ ಮುನ್ನಡೆದಿರುವ ಈತ ಇದೀಗ ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಹೋರಾಟವನ್ನು (National Resistance Front) ಅಹ್ಮದ್ ಮಸೂದ್ ಸಂಘಟಿಸಿದ್ದಾರೆ. ದಾಳಿ ಸಂಘಟನೆ, ವ್ಯೂಹ ರಚನೆ ಮತ್ತು ನಾಯಕತ್ವದ ಗುಣದಲ್ಲಿ ಅಹ್ಮದ್ ಮಸೂದ್ ತನ್ನ ತಂದೆಯನ್ನೇ ಬಹುಪಾಲು ಹೋಲುತ್ತಾರೆ,

ತಾಲಿಬಾನ್ ವಿರೋಧಿ ಹೋರಾಟದ ಸಂಘಟನೆ ಮತ್ತು ಮುಂದಿನ ಹಾದಿಗಳ ಬಗ್ಗೆ ವಾಷಿಂಗ್​ಟನ್​ ಪೋಸ್ಟ್​ ದಿನಪತ್ರಿಕೆಗೆ ಅಹ್ಮದ್ ಮಸೂದ್ ಲೇಖನವೊಂದನ್ನು ಬರೆದಿದ್ದಾರೆ. ‘ನಾನು ಪಂಜ್​ಶಿರ್​ ಕಣಿವೆಯಿಂದ ಈ ಬರಹ ಬರೆಯುತ್ತಿದ್ದೇನೆ. ಮುಜಾಹಿದ್ದೀನ್ ಹೋರಾಟಗಾರರೊಂದಿಗೆ ನನ್ನ ತಂದೆಯ ಹೆಜ್ಜೆಗುರುತುಗಳನ್ನೇ ಅನುಸರಿಸುತ್ತೇನೆ. ತಾಲಿಬಾನ್ ವಿರುದ್ಧ ಮತ್ತೊಮ್ಮೆ ಹೋರಾಡಲು ಸಿದ್ಧವಾಗಿದ್ದೇವೆ. ನಮಗೆ ಶಸ್ತ್ರಾಸ್ತ್ರಗಳ ಕೊರತೆಯಿಲ್ಲ. ನನ್ನ ತಂದೆಯ ಕಾಲದಿಂದಲೂ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳ ಸಂಗ್ರಹ ನಮ್ಮ ಬಳಿಯಿವೆ. ಇಂಥ ಪರಿಸ್ಥಿತಿ ಬರಬಹುದು ಎಂದು ಮೊದಲೇ ಊಹಿಸಿದ್ದೆವು ಎಂದು ಹೇಳಿದ್ದರು.

ತಾಲಿಬಾನ್ ಕೇವಲ ಅಫ್ಘಾನಿಸ್ತಾನ ಒಂದರ ಸಮಸ್ಯೆಯಲ್ಲ. ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನವು ಮುಂದಿನ ದಿನಗಳಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ತವರೂರು ಆಗಲಿದೆ. ವಿವಿಧ ದೇಶಗಳ ಪ್ರಜಾಸತ್ತಾತ್ಮಕ ಸರ್ಕಾರಗಳ ವಿರುದ್ಧ ಸಂಚುಗಳು ಇಲ್ಲಿ ರೂಪುಗೊಳ್ಳುತ್ತವೆ ಎಂದು ವಿಶ್ಲೇಷಿಸಿದ್ದರು. ತಾಲಿಬಾನ್ ವಿರುದ್ಧ ಎಲ್ಲರೂ ಕೈಜೋಡಿಸಬೇಕು ಎಂದು ಫ್ರೆಂಚ್ ತತ್ವಶಾಸ್ತ್ರಜ್ಞ ಬರ್​ನರ್ಡ್​-ಹೆನ್ರಿ ಲಿವಿ ಅವರೊಂದಿಗೆ ಮಾತನಾಡುವಾಗ ಹೇಳಿದ್ದ ಮಸೂದ್, ಪ್ರತಿರೋಧ ಇದೀಗ ಆರಂಭವಾಗಿದೆ. ಶರಣಾಗತಿ ಎನ್ನುವ ಪದವೇ ನನ್ನ ಪದಕೋಶದಲ್ಲಿ ಇಲ್ಲ ಎಂದು ಹೇಳಿದ್ದರು.

1998ರಲ್ಲಿ ಪಂಜ್​ಶಿರ್​ ಗುಹೆಗಳಲ್ಲಿ ಅಹ್ಮದ್ ಶಾ ಮಸೂದ್​ರ ತಂದೆ ಹೋರಾಟಗಾರರನ್ನು ಸಂಘಟಿಸಿದಾಗ ಮಸೂದ್​ಗೆ ಕೇವಲ 9 ವರ್ಷ. ನೀವು ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ, ನಮ್ಮ ಸ್ವಾತಂತ್ರ್ಯಕ್ಕೂ ಹೋರಾಡುತ್ತಿರುತ್ತೀರಿ ಎಂಬುದು ಅವರ ನಂಬಿಕೆ.

ತಮ್ಮ ಬರಹದಲ್ಲಿಯೂ ಮಸೂದ್ ಇದೇ ವಿಚಾರವನ್ನು ಪ್ರತಿಪಾದಿಸಿ, ಪಾಶ್ಚಿಮಾತ್ಯ ದೇಶಗಳ ನೆರವು ಯಾಚಿಸಿದ್ದಾರೆ. ಸ್ವತಂತ್ರ ಸಮಾಜ ನಿರ್ಮಿಸಲು ನಾವು ಬಹುಕಾಲದಿಂದ ಹೋರಾಡಿದ್ದೇವೆ. ನಮ್ಮ ಹೆಣ್ಮಕ್ಕಳು ವೈದ್ಯರಾಗಲು, ನಮ್ಮ ಪತ್ರಕರ್ತರು ಮುಕ್ತವಾಗಿ ವರದಿ ಮಾಡಲು, ಯುವಜನರು ತಮಗೆ ಬೇಕಾದಂತೆ ಹಾಡಿ-ಕುಣಿಯಲು, ಫುಟ್​ಬಾಲ್ ಮ್ಯಾಚ್ ನೋಡಲು ಅವಕಾಶವಿರುವ ಸಮಾಜ ರೂಪಿಸಲು ಶ್ರಮಿಸಿದ್ದೆವು ಎಂದು ಹೇಳಿದ್ದರು. ತಾಲಿಬಾನ್ ಆಡಳಿತದಲ್ಲಿ ಇವೆಲ್ಲವೂ ಮರಣದಂಡನೆಗೆ ಯೋಗ್ಯ ಎನಿಸುವ ಅಪರಾಧಗಳಾಗಿದ್ದವು.

(Details about Ahmad Massoud who is leading fight against Taliban in Panjjshir Valley)

ಇದನ್ನೂ ಓದಿ: ಪಂಜ್​ಶಿರ್​ ಹೋರಾಟಕ್ಕೆ ತಜಕಿಸ್ತಾನ್ ಬೆಂಬಲ: ಮತ್ತೊಂದು ಮಜಲಿಗೆ ಅಫ್ಘಾನಿಸ್ತಾನ ಯುದ್ಧ

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್