ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಏರ್​ಲಿಫ್ಟ್​ಗೆ ನೆರವಾಗುತ್ತಿದೆ ತಜಕಿಸ್ತಾನದಲ್ಲಿರುವ ಭಾರತದ ವಾಯುನೆಲೆ

ಅಯ್ನಿ ವಾಯುನೆಲೆಯು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಚೀನಾ ಗಡಿಗಳಿಗೆ ಸಮೀಪದಲ್ಲಿದೆ. ತಜಕಿಸ್ತಾನದಿಂದ ಪಾಕ್ ಆಕ್ರಮಿತ ಕಾಶ್ಮೀರವು ಕೇವಲ 20 ಕಿಮೀ ದೂರದಲ್ಲಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಏರ್​ಲಿಫ್ಟ್​ಗೆ ನೆರವಾಗುತ್ತಿದೆ ತಜಕಿಸ್ತಾನದಲ್ಲಿರುವ ಭಾರತದ ವಾಯುನೆಲೆ
ತಜಕಿಸ್ತಾನದಲ್ಲಿರುವ ಗಿಸ್ಸಾರ್ ಮಿಲಿಟರಿ ಏರೊಡ್ರಮ್ (Gissar Military Aerodrome - GMA)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 24, 2021 | 9:43 PM

ವಿದೇಶದಲ್ಲಿರುವ ಭಾರತದ ಏಕೈಕ ಸೇನಾ ನೆಲೆ ಎನಿಸಿರುವ ಗಿಸ್ಸಾರ್ ಮಿಲಿಟರಿ ಏರೊಡ್ರಮ್ (Gissar Military Aerodrome – GMA) ತಜಕಿಸ್ತಾನದಲ್ಲಿದೆ. ಅಫ್ಘಾನಿಸ್ತಾನ ಮತ್ತು ತಜಕಿಸ್ತಾನಕ್ಕೆ ನೆರವಾಗಲೆಂದು ಭಾರತ ಸರ್ಕಾರ ನಿರ್ಮಿಸಿರುವ ಈ ವಿಮಾನ ನಿಲ್ದಾಣವು ಸೇನಾ ನೆಲೆಯೂ ಹೌದು. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನದಲ್ಲಿ ಈ ನೆಲೆಯು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದೆ.

ಜಿಎಂಎ ವಿಮಾನ ನಿಲ್ದಾಣವು ಭದ್ರತಾ ವಲಯದಲ್ಲಿ ಅಯ್ನಿ ವಾಯುನೆಲೆ ಎಂದೇ ಹೆಸರುವಾಸಿ. ವಿಮಾನ ನಿಲ್ದಾಣದ ಸಮೀಪವೇ ಇರುವ ಅಯ್ನಿ ಹೆಸರಿನಿಂದಲೇ ಇದನ್ನು ಕರೆಯಲಾಗುತ್ತದೆ. ಇದು ತಜಕಿಸ್ತಾನದ ರಾಜಧಾನಿ ದುಶಾಂಬೆಗೆ ಹೊಂದಿಕೊಂಡಂತೆ ಪಶ್ಚಿಮಕ್ಕಿದೆ. ತಜಕಿಸ್ತಾನದೊಂದಿಗೆ ಭಾರತ ಸರ್ಕಾರ ಕಳೆದ 20 ವರ್ಷಗಳಿಂದ ಈ ನೆಲೆಯನ್ನು ನಿರ್ವಹಿಸುತ್ತಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಮತ್ತು ವಾಯುಪಡೆಯ ನಿವೃತ್ತ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೊವಾ ಈ ನೆಲೆಯನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ಇಲಾಖೆಯು ಈ ವಾಯುನೆಲೆ ನಿರ್ಮಾಣಕ್ಕೆ ಅನುದಾನ ನೀಡಿತ್ತು.

ಸಾರ್ವಜನಿಕರ ಕಣ್ಣಿನಿಂದ ದೂರವೇ ಉಳಿದಿದ್ದ ಈ ವಾಯುನೆಲೆಯು ಇದೀಗ ಅಫ್ಘಾನಿಸ್ತಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತೀಯ ವಾಯುಪಡೆಯ ಬೃಹದಾಕಾರದ ಸಿ-17 ಮತ್ತು ಸಿ-130ಜೆ ಸರಕು ಸಾಗಣೆ ವಿಮಾನಗಳ ಜೊತೆಗೆ ಏರ್​ ಇಂಡಿಯಾದ ವಿಮಾನವೊಂದು ಇಲ್ಲಿಗೆ ಬಂದಿತ್ತು. ಕಾಬೂಲ್​ನಿಂದ ಮಿಲಿಟರಿ ವಿಮಾನದಲ್ಲಿ ಕರೆತಂದ ಭಾರತೀಯರನ್ನು ಇಲ್ಲಿಂದ ಏರ್​ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು. ಆಗಸ್ಟ್​ 17ರಂದು ಭಾರತೀಯ ದೂತಾವಾಸ ಕಚೇರಿ ಸಿಬ್ಬಂದಿಯನ್ನು ಕರೆತರಲು ಹೋಗಿದ್ದ ವಾಯುಪಡೆಯ ಸಿ-17 ಸರಕುಸಾಗಣೆ ವಿಮಾನಕ್ಕೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ಸಿಗದ ಕಾರಣ ಅದು ಆಯ್ನಿ ನೆಲೆಗೆ ಬಂದಿತ್ತು.

ಆಯ್ನಿ ಯೋಜನೆ ಶುರುವಾಗಿದ್ದು 2002ರಲ್ಲಿ ತಜಕಿಸ್ತಾನದ ಆಯ್ನಿ ಗ್ರಾಮದ ಸಮೀಪವಿರುವ ವಾಯುನೆಲೆಯನ್ನು ಹಲವು ಬಾರಿ ದಕ್ಷಿಣ ತಜಕಿಸ್ತಾನದ ಫರ್​ಖೋರ್ ವಾಯುನೆಲೆಯೊಂದಿಗೆ ಹೋಲಿಸಲಾಗುತ್ತದೆ. ಇಲ್ಲಿ 1990ರಲ್ಲಿ ಭಾರತವು ಅಸ್ಪತ್ರೆಯೊಂದನ್ನು ನಡೆಸುತ್ತಿತ್ತು. ಇದೀಗ ಪಂಜ್​ಶಿರ್ ಪ್ರಾಂತ್ಯದಲ್ಲಿ ತಾಲಿಬಾಲಿಗಳ ವಿರುದ್ಧ ಹೋರಾಡುತ್ತಿರುವ ನಾರ್ದರ್ನ್ ಅಲಯನ್ಸ್​ ಪಡೆಗಳ ನೇತೃತ್ವ ವಹಿಸಿರುವ ಅಹ್ಮದ್ ಮಸೂದ್​ರ ತಂದೆ ಅಹ್ಮದ್ ಶಾ ಮಸೂದ್ ಮೃತಪಟ್ಟಿದ್ದು ಇದೇ ಆಸ್ಪತ್ರೆಯಲ್ಲಿದೆ. 2001ರಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ಅಹ್ಮದ್ ಶಾ ಮಸೂದ್​ ಸಮೀಪವೇ ಸ್ಫೋಟಿಸಿಕೊಂಡಿದ್ದ. ಮಸೂದ್​ರನ್ನು ತಕ್ಷಣವೇ ಫರ್​ಖೋರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿನ ವೈದ್ಯರ ಪ್ರಯತ್ನಪಟ್ಟರೂ ಅಹ್ಮದ್ ಶಾ ಮಸೂದ್​ರ ಜೀವ ಉಳಿಯಲಿಲ್ಲ.

9/11ರ ದಾಳಿ ಎನ್ನಲಾಗುವ ಅಮೆರಿಕ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11, 2001ರಲ್ಲಿ ಅಲ್​ಖೈದಾ ಉಗ್ರರ ದಾಳಿಯ ನಂತರ ಅಮೆರಿಕ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಆರಂಭಿಸಿತು. ಈ ಬೆಳವಣಿಗೆಯ ನಂತರ ಈ ಆಸ್ಪತ್ರೆಯನ್ನು ಭಾರತ ಸ್ಥಗಿತಗೊಳಿಸಿತು. ಆದರೂ ತಜಕ್ ಮಿಲಿಟರಿಗಾಗಿ ಭಾರತವು 50 ಹಾಸಿಗೆಗಳ ಆಸ್ಪತ್ರೆಯೊಂದನ್ನು ಖರ್ಗನ್ ತೆಪ್ಪಾ ಸಮೀಪ ಇಂದಿಗೂ ನಡೆಸುತ್ತಿದೆ.

ಜಿಯೊಪಾಲಿಟಿಕ್ಸ್​, ವಿದೇಶಾಂಗ ವ್ಯವಹಾರ ಮತ್ತು ಭದ್ರತೆಯ ಬಗ್ಗೆ ಚಿಂತನೆ ನಡೆಸುವ ಹಲವು ಚಿಂತರಕ ಶಿಫಾರಸು ಆಧರಿಸಿ 2001-2002ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆಯು ಆಯ್ನಿ ವಾಯುನೆಲೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿತು. ಈ ಚಿಂತನೆಗೆ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಈ ಯೋಜನೆಗೆ ಒತ್ತಾಸೆಯಾಗಿ ನಿಂತಿದ್ದರು.

ಅಂದಿನ ನಾಯಕರ ದೂರದೃಷ್ಟಿ ಇಂದು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ನೆರವಿಗೆ ಒದಗಿದೆ. ಅಯ್ನಿ ವಾಯುನೆಲೆಯಲ್ಲಿ 3,200 ಮೀಟರ್​ ಉದ್ದದ ಸುಸಜ್ಜಿತ ರನ್​ವೇ, ವಿಮಾನಗಳನ್ನು ನಿಲ್ಲಿಸುವ ಹ್ಯಾಂಗರ್​ಗಳು, ವಿಮಾನಗಳ ತುರ್ತು ನಿರ್ವಹಣೆ, ರಿಪೇರಿ, ಇಂಧನ ಭರ್ತಿ ವ್ಯವಸ್ಥೆಗಳು ಲಭ್ಯವಿದೆ. ಈ ಯೋಜನೆಗಾಗಿ ಭಾರತ ಸರ್ಕಾರವು 10 ಕೋಟಿ ಡಾಲರ್ ಖರ್ಚು ಮಾಡಿತ್ತು. ನಂತರದ ದಿನಗಳಲ್ಲಿ ಭಾರತವು ಸುಖೋಯ್ ಯುದ್ಧವಿಮಾನಗಳನ್ನು ಕೆಲ ಸಮಯ ಇಲ್ಲಿ ನಿಯೋಜಿಸಿತ್ತು.

ಒಂದು ಕಲ್ಲಿಗೆ ಮೂರು ಹಕ್ಕಿ ಅಯ್ನಿ ವಾಯುನೆಲೆಯು ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಚೀನಾ ಗಡಿಗಳಿಗೆ ಈ ನೆಲೆ ಸಮೀಪದಲ್ಲಿದೆ. ಮಾತ್ರವಲ್ಲ, ತಜಕಿಸ್ತಾನದ ಗಡಿಯಿಂದ ಪಾಕ್ ಆಕ್ರಮಿತ ಕಾಶ್ಮೀರವು ಕೇವಲ 20 ಕಿಮೀ ದೂರದಲ್ಲಿದೆ. ಪಾಕಿಸ್ತಾನದ ಪ್ರಮುಖ ಮಿಲಿಟರಿ ಕೇಂದ್ರ ಮತ್ತು ಮುಖ್ಯ ನಗರ ಎನಿಸಿರುವ ಪೇಶಾವರನ್ನು ಈ ವಾಯುನೆಲೆಯಿಂದ ನೇರವಾಗಿ ಗುರಿಯಾಗಿಸಬಹುದು. ಹೀಗಾಗಿ ಭಾರತ-ಪಾಕ್​ ಸಂಭಾವ್ಯ ಘರ್ಷಣೆಯಲ್ಲಿ ಈ ವಾಯುನೆಲೆಯು ಯುದ್ಧತಂತ್ರಜ್ಞರಿಗೆ ಹಲವು ಆಯ್ಕೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಅವಕಾಶ ಮಾಡಿಕೊಡದಿದ್ದರೆ, ತಜಕಿಸ್ತಾನದ ಈ ವಾಯುನೆಲೆಯು ಹಲವು ಮಾರ್ಗಗಳನ್ನು ಮುಕ್ತವಾಗಿರಿಸುತ್ತದೆ.

ಆದರೆ ಭಾರತ ಈವರೆಗೆ ಅಯ್ನಿ ವಾಯುನೆಲೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಒಮ್ಮೆ ಸುಖೋಯ್ ಯುದ್ಧವಿಮಾನಗಳನ್ನು ನಿಯೋಜಿಸಿದ್ದ ಹಿಂಪಡೆದದ್ದು ಬಿಟ್ಟರೆ ಹೆಚ್ಚಿನ ಚಟುವಟಿಕೆಗಳು ನಡೆದಿಲ್ಲ. ಭಾರತದೊಂದಿಗೆ ತಜಕಿಸ್ತಾನ ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದೆ. ಪಾಕಿಸ್ತಾನದ ಪ್ರಭಾವ ಕಡಿಮೆ ಮಾಡಲು ಅಯ್ನಿ ವಾಯುನೆಲೆಯನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು ಎಂದು ಹಲವು ಚಿಂತಕರು ಸಲಹೆ ಮಾಡುತ್ತಾರೆ.

(Indias first overseas base Gissar Military Aerodrome of Tajikistan came to the rescue in Indians at Afghanistan crisis)

ಇದನ್ನೂ ಓದಿ: ಮತ್ತೊಂದು ರಕ್ತಸಿಕ್ತ ಅಧ್ಯಾಯ: ತಾಲಿಬಾನ್ ವಿರೋಧಿಗಳ ಹಿಡಿತದಲ್ಲಿರುವ ಪಂಜ್​ಶಿರ್​ ಕಣಿವೆಯತ್ತ ಧಾವಿಸಿದ ಉಗ್ರರು

ಇದನ್ನೂ ಓದಿ: TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

Published On - 9:33 pm, Tue, 24 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ