VIDEO: ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್ಗಳು… ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ..!
MPL 2025: ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಹಾಪುರ ಟಸ್ಕರ್ಸ್ ತಂಡವು 164 ರನ್ ಕಲೆಹಾಕಿತು. ಈ ಗುರಿಯನ್ನು ರಾಯಗಡ್ ರಾಯಲ್ಸ್ ತಂಡವು 19.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ರಾಯಗಡ್ ರಾಯಲ್ಸ್ ತಂಡವು ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ.
ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ (MPL) ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ರನ್ ಓಡುವಾಗ ಬ್ಯಾಟರ್ಗಳಿಬ್ಬರು ಡಿಕ್ಕಿಯಾಗಿರುವುದು. ಇತ್ತ ಡಿಕ್ಕಿಯಾಗಿ ಬ್ಯಾಟರ್ಗಳು ಬಿದ್ದರೂ ಎದುರಾಳಿ ತಂಡಕ್ಕೆ ರನೌಟ್ ಮಾಡಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಗಡ್ ರಾಯಲ್ಸ್ ಮತ್ತು ಕೊಲ್ಹಾಪುರ ಟಸ್ಕರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಹಾಪುರ ಟಸ್ಕರ್ಸ್ ತಂಡವು 20 ಓವರ್ಗಳಲ್ಲಿ 164 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಗಡ್ ರಾಯಲ್ಸ್ ಪರ ಆರಂಭಿಕರಾಗಿ ಸಿದ್ಧಾರ್ಥ್ ವೀರ್ ಮತ್ತು ವಿಕಿ ಓಸ್ಟ್ವಾಲ್ ಕಣಕ್ಕಿಳಿದಿದ್ದರು.
ಆದರೆ ರಾಯಗಡ್ ರಾಯಲ್ಸ್ ಇನಿಂಗ್ಸ್ನ 2ನೇ ಓವರ್ನಲ್ಲಿ ರನ್ ಕದಿಯುವ ತವಕದಲ್ಲಿ ಇಬ್ಬರು ಬ್ಯಾಟರ್ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದರು. ಡಿಕ್ಕಿಯ ರಭಸಕ್ಕೆ ಬ್ಯಾಟರ್ಗಳಿಬ್ಬರು ನೆಲಕ್ಕುರುಳಿದ್ದಾರೆ. ಇದನ್ನು ಗಮನಿಸಿದ ಫೀಲ್ಡರ್ ಚೆಂಡನ್ನು ನೇರವಾಗಿ ವಿಕೆಟ್ ಕೀಪರ್ನತ್ತ ಎಸೆದಿದ್ದಾರೆ. ಆದರೆ ವಿಕೆಟ್ ಕೀಪರ್ ರನೌಟ್ ಮಾಡುವ ಬದಲು ಬೌಲರ್ನತ್ತ ಚೆಂಡೆಸೆದಿದ್ದಾರೆ. ಅಷ್ಟರಲ್ಲಿ ಬ್ಯಾಟರ್ರೊಬ್ಬರು ನಾನ್ ಸ್ಟ್ರೈಕ್ ಡೈವ್ ಕ್ರೀಸ್ನತ್ತ ಆಗಮಿಸಿ ಡೈವ್ ಹೊಡೆದಿದ್ದಾರೆ.
ಇತ್ತ ರನೌಟ್ ಕೈ ತಪ್ಪುತ್ತಿದ್ದಂತೆ ಚೆಂಡನ್ನು ಎತ್ತಿಕೊಂಡ ಮತ್ತೋರ್ವ ಫೀಲ್ಡರ್ ಸ್ಟ್ರೈಕ್ನತ್ತ ಓಡಿ ರನೌಟ್ ಮಾಡಲು ಮುಂದಾದರು. ಹೀಗೆ ಓಡಿ ಬಂದು ಎಸೆದ ಚೆಂಡು ವಿಕೆಟ್ಗೆ ತಾಗಲಿಲ್ಲ. ಇದೀಗ ಈ ವಿಚಿತ್ರ ರನೌಟ್ ಪ್ರಯತ್ನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಕೊಲ್ಹಾಪುರ ಟಸ್ಕರ್ಸ್ ತಂಡ ನೀಡಿದ 165 ರನ್ಗಳ ಗುರಿಯನ್ನು ರಾಯಗಡ್ ರಾಯಲ್ಸ್ ತಂಡವು 19.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ರಾಯಗಡ್ ರಾಯಲ್ಸ್ ತಂಡವು ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ.
Published on: Jun 21, 2025 12:33 PM
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK

