ಪಾಟೀಲ್ ಮಾತಾಡಿದ್ದು ಅರ್ಥವಾಗಿಲ್ಲ, ಅವರು ಹೇಳಿದ್ದನ್ನು ಒಪ್ಪೋದು ಸಾಧ್ಯವಿಲ್ಲ: ಡಿಕೆ ಶಿವಕುಮಾರ್
ಬಿಅರ್ ಪಾಟೀಲ್ ಮತ್ತು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರಾಜ್ ಖಾನ್ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿ ಮಾತಾಡಿದ್ದು ತಾನೇ ಎಂದು ಖುದ್ದು ಪಾಟೀಲ್ ಇವತ್ತು ಬೆಂಗಳೂರಲ್ಲಿ ಹೇಳಿದ್ದರೂ ಶಿವಕುಮಾರ್ ಅದನ್ನು ಒಪ್ಪುತ್ತಿಲ್ಲ. ವಿರೋಧ ಪಕ್ಷದ ನಾಯಕರು ಹಿಂದೆ ಬಸವರಾಜ ರಾಯರೆಡ್ಡಿ ಮಾಡಿದ ಆರೋಪವನ್ನು ಉಲ್ಲೇಖಿಸಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುತ್ತಿದ್ದಾರೆ.
ಬೆಂಗಳೂರು, ಜೂನ್ 21: ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ, ಹಣ ಕೊಟ್ಟವರಿಗೆ ಮಾತ್ರ ಮನೆ ಸಿಗುತ್ತಿದೆ ಎಂದು ಆಳಂದ್ ಶಾಸಕ ಬಿಅರ್ ಪಾಟೀಲ್ (Aland NLA BR Patil) ಹೇಳಿರುವುದನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಪ್ಪಲು ತಯಾರಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅವರು ಹೇಳಿರುವುದನ್ನು ಖಂಡಿಸುತ್ತೇನೆ, ಈ ವಿಷಯ ಈಗಾಗಲೇ ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ, ಅವರೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಶಿವಕುಮಾರ್ ಹೇಳಿದರು. ಇದು ಗ್ರಾಮ ಪಂಚಾಯಿತಿ ಹಂತದಲ್ಲಿ ನಡೆಯುವ ಕೆಲಸ, ಮಂತ್ರಿಗಳ್ಯಾಕೆ ಒಂದೂವರೆ ಲಕ್ಷ ರೂ, ತೆಗೆದುಕೊಳ್ಳುವ ಉಸಾಬರಿಗೆ ಹೋಗುತ್ತಾರೆ? ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿರುವಾಗ ಪಾಟೀಲ್ ಹೀಗೆ ಮಾತಾಡಿದ್ದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಜಲ ಮಂಡಳಿಗೆ ಗಿನ್ನಿಸ್ ಗರಿಮೆ: ಬಿಡಬ್ಲ್ಯೂಎಸ್ಎಸ್ಬಿಯ ಪ್ರಯತ್ನ ಶ್ಲಾಘಿಸಿದ ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ