ಯಾವ ಆರೋಪಕ್ಕೂ ಗಮನ ನೀಡದೆ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದಾರೆ: ಆರ್ ಅಶೋಕ, ವಿಪಕ್ಷ ನಾಯಕ
ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಸುಲಿಗೆಯ ಸುಳಿಗೆ ಸಿಕ್ಕಿದೆ, ಯಾವುದೇ ತಪ್ಪು ನಡೆದಿಲ್ಲ, ತಪ್ಪು ಮಾಡಿದವರನ್ನು ಗಲ್ಲುಗಂಬಕ್ಕೆ ಏರಿಸುತ್ತೇವೆ ಎಂದು ಎಂದು ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಹೇಳುತ್ತಾರೆ. ಎಷ್ಟು ಜನರನ್ನು ಅವರು ಗಲ್ಲಿಗೇರಿಸುತ್ತಾರೆ? ಎಲ್ಲ 224 ಕ್ಷೇತ್ರಗಳಲ್ಲೂ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಅಶೋಕ ಹೇಳಿದರು.
ಬೆಂಗಳೂರು, ಜೂನ್ 21: ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್ ಮಾಡಿರುವ ಅರೋಪ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ. ಮಾಧ್ಯಮಗಳೊಂದಿಗೆ ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಅರೋಪದ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ, ಅವರು ನಿದ್ರಾದೇವಿಯ ವಶದಲ್ಲಿದ್ದಾರೆ, ವಸತಿ ಇಲಾಖೆಯಲ್ಲಿ ತಿಮಿಂಗಿಲಗಳು ಸೇರಿಕೊಂಡಿವೆ, ಕಾಂಗ್ರೆಸ್ ಶಾಸಕರು ಬಾಯ್ಬಿಟ್ರೆ ಈ ಸರ್ಕಾರ ಒಂದು ದಿನವೂ ಉಳಿಯಲ್ಲ, ಯಾವುದೇ ಅವ್ಯವಹಾರ ನಡೆದಿಲ್ಲವಾದರೆ ಬಿಅರ್ ಪಾಟೀಲ್ ಮತ್ತು ಹೆಚ್ಕೆ ಪಾಟೀಲ್ ಮಾಡಿರುವ ಅರೋಪಗಳನ್ನು ಸರ್ಕಾರ ತನಿಖೆಗೆ ಒಪ್ಪಿಸಲಿ ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ರಿಟೈರ್ಮೆಂಟ್ಗೆ ಹತ್ತಿರವಿರುವ ಔಟ್ಗೋಯಿಂಗ್ ಚೀಫ್ ಮಿನಿಸ್ಟರ್: ಆರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ